ಕನ್ನಡಪ್ರಭ ವಾರ್ತೆ ಬೀದರ್
ಇಲ್ಲಿನ ಮಾಧವನಗರ ಮುಕ್ತಿಧಾಮದಲ್ಲಿ ಕರ್ನಾಟಕ ವಚನ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದಿಂದ ಮಾಸಿಕ ಶರಣ ಚಿಂತನಗೋಷ್ಠಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಅಂತರಂಗ-ಬಹಿರಂಗ ಶುದ್ಧಿಗಾಗಿ ಬಸವಣ್ಣನವರು ಕೊಟ್ಟಂತಹ ಸಪ್ತಸೂತ್ರವಾದ ‘ಕಳ ಬೇಡ ಕೊಲ ಬೇಡ’ ವಚನವು ಜನಪರ ಜೀವಪರ ಮಾನವೀಯ ಮೌಲ್ಯದ ಸಿದ್ಧಾಂತವಾಗಿದೆ ಮತ್ತು ಸಕಲ ಜೀವರಾಶಿಗಳಿಗೆ ಕಲ್ಯಾಣ ಬಯಸುವುದಾಗಿದೆ ಎಂದರು.
ಪ್ರಾಣಿ, ಪಕ್ಷಿಗಳ ಮೇಲೆ ದಯಾಪರತೆ ಅಹಿಂಸಾತ್ಮಕ ಮೌಲ್ಯಗಳನ್ನು ಹೊಂದಿರಬೇಕು. ಒಬ್ಬರ ಮನಸ್ಸು ನೋವಾಗದಂತೆ ಸಂತಸದಿಂದಿದ್ದು, ಎಲ್ಲರ ಮನಸ್ಸು ಹೂವಿನಂತೆ ಅರಳಬೇಕು. ಬಸವತತ್ವದ ಸತ್ಯ ಶುದ್ಧ ಕಾಯಕ ಮತ್ತು ದಾಸೋಹ ಸಿದ್ಧಾಂತವು ಉದಾತ್ತತೆಯ ಬದುಕು ಸಾಗಿಸಿಕೊಂಡು ಮುನ್ನಡೆಯಬೇಕೆಂದು ಕರೆ ನೀಡಿದರು.ಸಾಹಿತಿಗಳಾದ ಪಾರ್ವತಿ ಸೋನಾರೆ ಸರಳ ಜೀವನಕ್ಕೆ ಶರಣರ ಸಂದೇಶಗಳು ಎನ್ನುವ ವಿಷಯ ಕುರಿತು ಅನುಭಾವ ಮಂಡಿಸಿ ವ್ಯಕ್ತಿಯಲ್ಲಿ ಅಪಾರ ಸಂಪತ್ತು ಆಸ್ತಿ ಇದ್ದರು, ಕಿಂಕರತೆಯಿಂದ ಅಹಂಭಾವಿರಲಾರದೆ ಸದಾ ಅಂಗದ ಮೇಲೆ ಲಿಂಗ ಧರಿಸಿಕೊಂಡು ಶಿವಯೋಗ ಸಾಧನೆ ಆಗಬೇಕು.
ನಿವೃತ್ತ ಪ್ರಾಚಾರ್ಯ ಬಿ.ವ್ಹಿ.ಪಸರಗೆ ಮಾತನಾಡಿದರು.
ಪರಿಷತ್ತಿನ ಕೋಶಾಧ್ಯಕ್ಷರಾದ ಉಮಾಕಾಂತ ಮೀಸೆ ಪ್ರಾಸ್ತಾವಿಕ ಮಾತನಾಡಿ, ಶಾಲಾಕಾಲೇಜು ಮಟ್ಟದಲ್ಲಿ ಶರಣರ ವಿಚಾರಗಳು ವಿದ್ಯಾರ್ಥಿಗಳಿಗೆ ಮುಟ್ಟಿಸುವುದರಿಂದ ಅವರ ವ್ಯಕ್ತಿಯ ವ್ಯಕ್ತಿತ್ವ ವಿಕಸನವಾಗಲು ಸಾಧ್ಯವಿದೆ ಎಂದರು.