ಕೊಪ್ಪಳ (ಯಲಬುರ್ಗಾ):
ಯಲಬುರ್ಗಾ ತಾಲೂಕಿನ ದಮ್ಮೂರು ಗ್ರಾಮದಲ್ಲಿ ಸೋಮವಾರ ರಾತ್ರಿ ಮಹಾಶಿವಶರಣೆ ಭೀಮಾಂಬಿಕಾದೇವಿ ಮಠದಲ್ಲಿ ಅಮವಾಸ್ಯೆ ನಿಮಿತ್ತ ಜರುಗಿದ ೩೭೪ನೇ ಶಿವಾನುಭವಗೋಷ್ಠಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳಿಗೆ ಶಿಕ್ಷಣ ಕಲಿಸಿದಾಗ ಒಳ್ಳೆಯ ಸಂಸ್ಕಾರ, ಜ್ಞಾನಾರ್ಜನೆ ಸಿಗಲು ಸಾಧ್ಯ. ಸಮಾಜದಲ್ಲಿ ಪರಿಪೂರ್ಣ ವ್ಯಕ್ತಿಯಾಗಿ ರೂಪಗೊಳ್ಳಲು ಶಿಕ್ಷಣ ಅಸ್ತ್ರವಾಗಿದೆ. ಇಟಗಿ ಭೀಮಾಂಬಿಕಾದೇವಿ ಅವರ ಜೀವನ ಚರಿತ್ರೆಯನ್ನು ಓದುವ ಹವ್ಯಾಸ ರೂಢಿಸಿಕೊಳ್ಳಬೇಕು. ಆಧುನಿಕ ಯುಗದಲ್ಲಿ ಮನುಷ್ಯ-ಮನುಷ್ಯರ ನಡುವೆ ಸಂಘರ್ಷಗಳು ಹೆಚ್ಚಾಗುತ್ತಿವೆ. ಇದಕ್ಕೆ ಹಣ, ಅಧಿಕಾರ ಮೂಲ ಕಾರಣವಾಗಿವೆ. ಇವುಗಳು ಸಮಾಜದ ಪ್ರಗತಿಗೆ ಮಾರಕವಾಗುತ್ತಿವೆ. ಶಿವಾನುಭವ, ಧಾರ್ಮಿಕ ಪ್ರವಚನ ಆಲಿಕೆಯಿಂದ ಮನಸ್ಸಿಗೆ ಶಾಂತಿ, ನೆಮ್ಮದಿ ದೊರೆಯುತ್ತದೆ ಎಂದರು.
ಶ್ರೀಧರ್ಮ ಮಠದ ಓಡಯರಾದ ಶ್ರೀಹನುಮಂತಪ್ಪಜ್ಜನವರು ಮಾತನಾಡಿ, ಸಮಾಜದಲ್ಲಿ ದಾನ, ಧರ್ಮ ಮಾಡುವ ಮೂಲಕ ಪುಣ್ಯ ಪಡೆಯಬೇಕು. ಶಿವಾನುಭವ ಗೋಷ್ಠಿಗಳು ಮನುಷ್ಯರನ್ನು ಉತ್ತಮ ಹಾದಿಯತ್ತ ಕೊಂಡ್ಯೊಯಲು ದಾರಿಯಾಗುತ್ತದೆ ಎಂದು ಹೇಳಿದರು.ಅಧ್ಯಕ್ಷತೆ ವಹಿಸಿದ್ದ ಶಿವಾನುಭವ ಸಮಿತಿ ಅಧ್ಯಕ್ಷ ಶರಣಬಸಪ್ಪ ದಾನಕೈ ಮಾತನಾಡಿ, ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು. ಇತ್ತೀಚಿಗೆ ಧಾರ್ಮಿಕ ಕ್ಷೇತ್ರದ ಬಗ್ಗೆ ಜನರ ಓಲವು ಕಡಿಮೆಯಾಗುತ್ತಿದೆ ಬೇಸರ ವ್ಯಕ್ತಪಡಿಸಿದರು.ಸಂಪನ್ಮೂಲ ವ್ಯಕ್ತಿ ಭೀಮಣ್ಣ ಹವಳಿ ಮಾತನಾಡಿದರು. ಪ್ರಮುಖರಾದ ಶರಣಯ್ಯ ಹಿರೇಮಠ, ಬಸವರಾಜ ಜಗ್ಲರ, ಶರಣಪ್ಪ ಕಠಾರದ, ಭೀಮಣ್ಣ ಹರಿಜನ, ಭೀಮಣ್ಣ ಜರಕುಂಟಿ, ಈರಪ್ಪ ರ್‍ಯಾವಣಕಿ ಇದ್ದರು.