ಹಾವೇರಿ: ಶಿಗ್ಗಾಂವಿ ವಿಧಾನಸಭೆ ಕ್ಷೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ ಸುಗಮ ಹಾಗೂ ವ್ಯವಸ್ಥಿತ ಚುನಾವಣಾ ಕಾರ್ಯ ನಿರ್ವಹಣೆಗಾಗಿ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಅವರು ಆದೇಶ ಹೊರಡಿಸಿದ್ದಾರೆ.
ಕಂಪ್ಯೂಟರೀಕರಣ ಸೈಬರ್ ಸೆಕ್ಯೂರಿಟಿ ಮತ್ತು ಐಟಿ ನಿರ್ವಹಣೆಗೆ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ಶಿರಕೋಳ (೯೪೮೦೮೦೪೫೦೨) ಹಾಗೂ ಎನ್‌ಐಸಿ ಅಧಿಕಾರಿ ಬಿ.ಬಿ. ಹೆಗಡೆ (೯೪೨೨೯೬೭೫೪೮) ಅವರನ್ನು ನೇಮಕ ಮಾಡಲಾಗಿದೆ. ಸ್ವೀಪ್ ಚಟುವಟಿಕೆ ಹಾಗೂ ಮಾದರಿ ನೀತಿ ಸಂಹಿತೆಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಕ್ಷಯ್ ಶ್ರೀಧರ (೯೪೮೦೮೬೮೦೦೦), ಕಾನೂನು ಸುವ್ಯಸ್ಥೆ ಹಾಗೂ ವಿಎಂ ಮತ್ತು ಭದ್ರತೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಂಶು ಕುಮಾರ್ (೯೪೮೦೮೦೪೫೦೧), ಇವಿಎಂ ನಿರ್ವಹಣೆಗೆ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಪ್ರಶಾಂತ ವರಗಪ್ಪನವರ (೯೮೮೦೬೧೬೪೩೬), ವೆಚ್ಚ ನಿರ್ವಹಣೆಗೆ ಜಿ.ಪಂ. ಮುಖ್ಯ ಲೆಕ್ಕಾಧಿಕಾರಿ ಎ.ವಸಂತಕುಮಾರ (೯೪೮೦೮೬೮೦೦೩), ಬ್ಯಾಲೆಟ್ ಪೇಪರ್, ಪೋಸ್ಟಲ್ ಬ್ಯಾಲೆಟ್‌ಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ರಮೇಶ ಎಂ.ಎಸ್. (೭೭೬೦೯೮೯೯೦೪), ಮಾಧ್ಯಮಕ್ಕೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕರಾದ ಭಾರತಿ ಎಚ್.(೯೪೮೦೮೪೧೨೩೮), ಸಂವಹನ ಯೋಜನೆಗೆ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಕೆ.ಎನ್. ಪ್ರವೀಣ(೯೯೦೦೮೭೩೩೯೯), ಎಲೆಕ್ಟ್ರೋರಲ್ ರೂಲ್ಸ್‌ಗೆ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಮಮತಾ ಹೊಸಗೌಡ್ರ (೯೯೮೦೫೩೫೧೦೫/೭೬೧೯೪೪೬೬೯೭), ದೂರುಗಳ ಪರಿಹಾರ ಮತ್ತು ಮತದಾರರ ಸಹಾಯವಾಣಿ ನಿರ್ವಹಣೆಗೆ ಜಿಲ್ಲಾ ನೋಂದಣಾಧಿಕಾರಿ ವಿನಾಯಕ ಘೋರ್ಪಡೆ(೯೪೪೮೩೩೮೧೭೩), ವೀಕ್ಷಕರ ನಿರ್ವಹಣೆಗೆ ಕೈಗಾರಿಕಾ ಇಲಾಖೆ ಉಪನಿರ್ದೇಶಕ ಮಾಲತೇಶ ಪಾಟೀಲ(೯೪೪೮೨೨೩೯೨೦) ಅವರನ್ನು ನೇಮಕ ಮಾಡಲಾಗಿದೆ.ವರದಿಗೆ ಕೃಷಿ ಇಲಾಖೆ ಬಸವರಾಜ ಕೊಪ್ಪದ (೯೮೪೫೫೪೮೦೭೨/೮೨೭೭೯೩೧೮೦೬ ಹಾಗೂ ಅಂಕಿಸಂಖೆ ಇಲಾಖೆ ಸಹಾಯಕ ಸಂಖ್ಯಾಧಿಕಾರಿ ಶಂಕರ ಪವಾರ (೯೯೧೬೮೪೭೭೦೮) ಹಾಗೂ ದೂರು ಮಾನಿಟರಿಂಗ್ ಸೆಲ್-೧೯೫೦ಕ್ಕೆ ವಾಲ್ಮೀಕಿ ಅಭಿವೃದ್ಧಿ ನಿಮದ ಜಿಲ್ಲಾ ವ್ಯವಸ್ಥಾಪಕ ತೇಜರಾಜ ಹಸಲಬಾಳ (೯೮೪೪೮೭೭೫೨೩/ ೯೬೩೨೪೬೫೬೧) ಹಾಗೂ ಎಂಸಿಎಂಸಿಗೆ ಮೀನುಗಾರಿಕೆ ಇಲಾಖೆ ಉಪನಿರ್ದೇಶಕ ವಸಂತ ಹೆಗಡೆ (೮೩೧೦೦೦೩೫೮೬) ಅವರನ್ನು ನೇಮಕ ಮಾಡಲಾಗಿದೆ. ಸೂಕ್ಷ್ಮ ವೀಕ್ಷಕರ ನಿರ್ವಹಣೆಗೆ ಲೀಡ್ ಬ್ಯಾಕ್ ವ್ಯವಸ್ಥಾಪಕ ಅಣ್ಣಯ್ಯ (೮೮೦೦೮೦೬೩೬೫) ಹಾಗೂ ಚೆಕ್ ಪೋಸ್ಟ್ ನಿರ್ವಹಣೆಗೆ ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಸಿದ್ದರಾಮಯ್ಯ ಎಂ.ಬರಗಿಮಠ (೯೪೪೮೯೯೯೨೩೦) ಅವರನ್ನು ನೇಮಕ ಮಾಡಲಾಗಿದೆ.