ಕನ್ನಡಪ್ರಭ ವಾರ್ತೆ ಕಾಪು
ಮುಖ್ಯ ಭಾಷಣಕಾರರಾಗಿ ಬೆಂಗಳೂರಿನ ಮೈ ಲಾಜಿಕ್ ಬ್ಯುಸ್ನೆಸ್ ಮ್ಯಾನೆಜ್ಮೆಂಟ್ ಸ್ಕೂಲಿನ ಚೀಫ್ ಎಕ್ಸಿಕ್ಯೂಟಿವ್ ಆಫೀಸರ್ ಸಿಎ ವಿನೋದ್ ಚಂದ್ರನ್, ತಮ್ಮ ಸಂಸ್ಥೆಯನ್ನು ಪರಿಚಯಿಸಿ ಪದವಿ ವಿದ್ಯಾರ್ಥಿಗಳಿಗೆ ಪದವಿಯ ನಂತರ ಉದ್ಯೋಗವಕಾಶದ ಕುರಿತು ಮಾರ್ಗದರ್ಶನ ನೀಡಿದರು. ಜೊತೆಗೆ ವಿದ್ಯಾರ್ಥಿಗಳಲ್ಲಿ ಅಡಗಿರುವ ಕೌಶಲ್ಯವನ್ನು ಅರಿತುಕೊಳ್ಳುವ ಕುರಿತು ಮಾತನಾಡಿದರು.
ಇನ್ನೋರ್ವ ಅತಿಥಿ ಶ್ರೀರಾಮ್ ಸುಬ್ರಹ್ಮಣ್ಯಂ, ನಗರ ವಿದ್ಯಾರ್ಥಿಗಳಿಗಿಂತ ಗ್ರಾಮೀಣ ವಿದ್ಯಾರ್ಥಿಗಳು ಹೆಚ್ಚು ಪ್ರತಿಭಾನ್ವಿತರು. ಹಾಗಾಗಿ ಅವರ ಪದವಿಯ ನಂತರ ಉದ್ಯೋಗ ಪಡೆಯುವ ದಾರಿಯು ಫಲಪ್ರದವಾಗಲು ಈ ಕ್ರಾರ್ಯಕ್ರಮ ತುಂಬಾ ಸಹಕಾರಿ ಮತ್ತು ಅವರ ಔದ್ಯೋಗಿಕ ಜೀವನಕ್ಕೆ ಸ್ವಯಂ ಪ್ರೇರಣೆ ಅತ್ಯಗತ್ಯವೆಂದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಾಂಶುಪಾಲ ಡಾ. ಮಿಥುನ್ ಚಕ್ರವರ್ತಿ, ಅರ್ಥಪೂರ್ಣವಾದ ಈ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಿಗೆ ಕೃತಜ್ಞತೆಯನ್ನು ಸಮರ್ಪಿಸಿದರು.
ಕಾರ್ಯಕ್ರಮದ ಸಂಯೋಜಕರಾದ ಡಾ. ಸೋನಾ ಎಚ್.ಸಿ. ಸ್ವಾಗತಿಸಿದರು. ತೃತೀಯ ಬಿ.ಕಾಂ. ವಿದ್ಯಾರ್ಥಿನಿ ಹರ್ಷಿತಾ ಕಾರ್ಯಕ್ರಮ ನಿರೂಪಿಸಿದರು. ದ್ವಿತೀಯ ಬಿ.ಸಿ.ಎ ವಿದ್ಯಾರ್ಥಿನಿ ತ್ರಿಶಾ ಶೆಟ್ಟಿ ವಂದಿಸಿದರು.