ಸಂಸ್ಕೃತಿ, ಪರಂಪರೆ ಎತ್ತಿ ಹಿಡಿದ ಶಿವಾಜಿ

KannadaprabhaNewsNetwork |  
Published : Feb 20, 2026, 02:45 AM IST
ಪೋಟೋಕನಕಗಿರಿಯ ಪ.ಪಂ ಕಚೇರಿಯಲ್ಲಿ ಹಿಂದೂ ಸಾಮ್ರಾಟ್ ಛತ್ರಪತಿ ಶಿವಾಜಿ ಮಹರಾಜರ ಜಯಂತಿಯನ್ನು ಆಚರಿಸಲಾಯಿತು.   | Kannada Prabha

ಸಾರಾಂಶ

ಬಾಲ್ಯಾವಸ್ಥೆಯಲ್ಲಿರುವಾಗಲೇ ಶಿವಾಜಿಯು ದೇಶ ಹಾಗೂ ಹಿಂದೂ ಸಮಾಜಕ್ಕಾಗಿ ಸರ್ವ ಜಾತಿಯವರನ್ನು ಒಗ್ಗೂಡಿಸಿ ಭಾರತಮಾತೆಯ ಸಂಸ್ಕೃತಿ, ಪರಂಪರೆ ಎತ್ತಿ ಹಿಡಿಯುವ ಕೆಲಸ ಮಾಡಿದ್ದಾರೆ .

ಕನಕಗಿರಿ: ಇಲ್ಲಿನ ಪಪಂ ಕಚೇರಿಯಲ್ಲಿ ಹಿಂದೂ ಸಾಮ್ರಾಟ್ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯನ್ನು ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಗುರುವಾರ ಆಚರಿಸಲಾಯಿತು. ಮುಖ್ಯಾಧಿಕಾರಿ ಲಕ್ಷ್ಮಣ್ ಕಟ್ಟಿಮನಿ ಮಾತನಾಡಿ, ಹಿಂದೂ ಸಮಾಜದ ಏಳ್ಗೆಗೆಗೆ ಛತ್ರಪತಿ ಶಿವಾಜಿ ಹೋರಾಡಿದ್ದಾರೆ. ಬಾಲ್ಯಾವಸ್ಥೆಯಲ್ಲಿರುವಾಗಲೇ ಶಿವಾಜಿಯು ದೇಶ ಹಾಗೂ ಹಿಂದೂ ಸಮಾಜಕ್ಕಾಗಿ ಸರ್ವ ಜಾತಿಯವರನ್ನು ಒಗ್ಗೂಡಿಸಿ ಭಾರತಮಾತೆಯ ಸಂಸ್ಕೃತಿ, ಪರಂಪರೆ ಎತ್ತಿ ಹಿಡಿಯುವ ಕೆಲಸ ಮಾಡಿದ್ದಾರೆ.ಇಂತಹ ದಾರ್ಶನಿಕರ ಆದರ್ಶ ಮೈಗೂಡಿಸಿಕೊಂಡು ನಮ್ಮ ಜೀವನ ಸಾರ್ಥಕವಾಗಿಸಿಕೊಳ್ಳಬೇಕು ಎಂದರು.

ಜೆಸ್ಕಾಂ ಇಲಾಖೆಯ ಆನಂದ, ಪಪಂ ಸಿಬ್ಬಂದಿ ಪ್ರಕಾಶ ಮಹಿಪತಿ, ವಿಜಯಲಕ್ಷ್ಮಿ,ಕಲ್ಯಾಣಪ್ಪ, ಪರಶುರಾಮ ಹಾಗೂ ಜೀಜಾಬಾಯಿ ಮಹಿಳಾ ಸಂಘದ ಪದಾಧಿಕಾರಿ ಸುಮಿತ್ರಮ್ಮ, ಲಕ್ಷ್ಮೀಬಾಯಿ ಮಹಿಪತಿ, ಶಾಂತಮ್ಮ ಮಹಿಪತಿ, ಲಕ್ಷ್ಮಿ ಭೈರಪ್ಪ ಆರೇರ್ ಇತರರು ಇದ್ದರು.

ವಿವಿಧೆಡೆ: 399ನೇ ಶಿವಾಜಿ ಜಯಂತಿ ಪಟ್ಟಣದ ಶಿವಾಜಿ ವೃತ್ತ, ತಹಸೀಲ್ದಾರ ಕಚೇರಿಯಲ್ಲಿ ಎಪಿಎಂಸಿ, ಶಾಲಾ, ಕಾಲೇಜು, ಬಿಜೆಪಿ ಕಾರ್ಯಾಲಯದಲ್ಲಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಆಚರಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹುಬ್ಬಳ್ಳಿ ಬಸ್‌ ನಿಲ್ದಾಣ ನಡುವೆ ಸಂಪರ್ಕ ಸಮಸ್ಯೆ
ಖಾಸಗಿ ಶಾಲಾ- ಕಾಲೇಜುಗಳಲ್ಲಿ ಡೊನೇಷನ್‌ ಹಾವಳಿ ತಡೆಗೆ ಒತ್ತಾಯ