ಶಿವಪೂಜಾ ಮಠದ ನೂತನ ಕಟ್ಟಡ 28ಕ್ಕೆ ಉದ್ಘಾಟನೆ

KannadaprabhaNewsNetwork |  
Published : Apr 23, 2026, 01:45 AM IST
Vಟಿಎಪಿಸಿಎಂಎಸ್ ನಿರ್ದೇಶಕರ ಅವಿರೋಧ ಆಯ್ಕೆ: ಶಾಸಕರಿಂದ ಸನ್ಮಾನ | Kannada Prabha

ಸಾರಾಂಶ

ತಾಲೂಕಿನ ಚಿಕ್ಕತುಪ್ಪೂರು ಗ್ರಾಮದ ಶಿವಪೂಜಾ ಮಠದ ಶತಮಾನೋತ್ಸವ, ಪಟ್ಟದ ದಯಾನಂದ ಸ್ವಾಮೀಜಿ 22ನೇ ವರ್ಷದ ಸಂಸ್ಮರಣೋತ್ಸವ ಹಾಗೂ ನೂತನ ಕಟ್ಟಡ ಉದ್ಘಾಟನೆ ಕಾರ್ಯಕ್ರಮ ಏ.26,27, 28 ರಂದು ನಡೆಯಲಿವೆ.

26ರಿಂದ ಮೂರು ದಿನಗಳ ಕಾಲ ವಿವಿಧ ಕಾರ್ಯಕ್ರಮ ಆಯೋಜನೆ

ಸುತ್ತೂರು ಶ್ರೀ ಸೇರಿ ಹಲವು ಮಠಾಧೀಶರು, ರಾಜಕೀಯ ನಾಯಕರು ಭಾಗಿಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ತಾಲೂಕಿನ ಚಿಕ್ಕತುಪ್ಪೂರು ಗ್ರಾಮದ ಶಿವಪೂಜಾ ಮಠದ ಶತಮಾನೋತ್ಸವ, ಪಟ್ಟದ ದಯಾನಂದ ಸ್ವಾಮೀಜಿ 22ನೇ ವರ್ಷದ ಸಂಸ್ಮರಣೋತ್ಸವ ಹಾಗೂ ನೂತನ ಕಟ್ಟಡ ಉದ್ಘಾಟನೆ ಕಾರ್ಯಕ್ರಮ ಏ.26,27, 28 ರಂದು ನಡೆಯಲಿವೆ.

ಏ.26ರಂದು ಆಗರೋದಕ, ಗಂಗಾ ಪೂಜೆ, ಯಾಗಶಾಲೆ ಪ್ರವೇಶ, ಪುಣ್ಯಾಹ, ನಾಂದಿ ಅಸ್ತು ರಕ್ಷೋಘ್ನ ಪೂಜೆ, ವಾಸ್ತು ರಕ್ಷೋಘ್ನ ಹೋಮ ಸಂಜೆ 4 ಗಂಟೆ ಬಳಿಕ ನಡೆಯಲಿವೆ. ಏ.27ರಂದು ಸಂಜೆ 4 ಗಂಟೆಗೆ ಗದ್ದುಗೆಯಲ್ಲಿ ಲಿಂಗ ಪ್ರತಿಷ್ಠಾಪನೆ, ಅಭಿಷೇಕ, ನವಗ್ರಹ ಪೂಜೆ, ಮೃತ್ಯುಂಜಯ ಹೋಮ, ದಶದಿಕ್ಪಾಲಕರ ಸ್ಥಾಪನೆ, ಅಷ್ಟ ಲಕ್ಷ್ಮೀ, ಸಪ್ತ ಸಭಾ ದೇವತೆ, ಗಣಪತಿ ,ಉಮಾ ಮಹೇಶ್ವರ, ಏಕಾದಶರುದ್ರ, ಪಂಚ ಕಳಸ, ಲಕ್ಷ್ಮೀ ಪೂಜೆ ಮತ್ತು ಸಮಸ್ತ ಹೋಮ, ಪೂರ್ಣಾಹುತಿ ಹಾಗೂ ಮಹಾ ಮಂಗಳಾರತಿ ನಡೆಯಲಿದೆ. ಮಾದಾಪಟ್ಟಣ ವಿರಕ್ತ ಮಠಾಧೀಶ ತೋಂಟದಾರ್ಯ ಸ್ವಾಮೀಜಿ ಷಟ್‌ ಸ್ಥಳ ಧ್ವಜಾ ರೋಹಣ ನೆರವೇರಿಸಲಿದ್ದು, ಸಂಜೆ 7ರ ಬಳಿಕ ಶಿವ ದೀಕ್ಷೆ-ಲಿಂಗ ದೀಕ್ಷೆ ಕಾರ್ಯಕ್ರಮ ಕೂಡ ನಡೆಯಲಿವೆ.

ಏ.28ರ ಬೆಳಗ್ಗೆ 10.30 ಗಂಟೆಗೆ ಶಿವಪೂಜಾ ಮಠದ ನೂತನ ಕಟ್ಟಡ ಉದ್ಘಾಟನೆ ಹಾಗೂ ಧಾರ್ಮಿಕ ಸಭೆ ದಿವ್ಯ ಸಾನಿಧ್ಯವನ್ನು ಸುತ್ತೂರು ಮಠಾಧೀಶ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ, ಸಿದ್ದಗಂಗ ಮಠಾಧೀಶ ಸಿದ್ದಲಿಂಗ ಮಹಾಸ್ವಾಮೀಜಿ ವಹಿಸಲಿದ್ದಾರೆ. ದೇವನೂರು ಮಠಾಧೀಶ ಮಹಾಂತ ಸ್ವಾಮೀಜಿ, ಮೈಸೂರು ಹೊಸ ಮಠಾಧೀಶ ಚಿದಾನಂದ ಸ್ವಾಮೀಜಿ, ಪಡಗೂರು ಮಠಾಧೀಶ ಶಿವಲಿಂಗೇಂದ್ರಸ್ವಾಮೀಜಿ, ವಾಟಾಳು ಮಠಾಧೀಶರಾದ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ಬೆಟ್ಟದಪುರ ಚನ್ನಬಸವ ಸ್ವಾಮೀಜಿ, ಸೋಮಹಳ್ಳಿ ಮಠಾಧೀಶ ಸಿದ್ದಮಲ್ಲ ಸ್ವಾಮೀಜಿ, ಮಲ್ಲನಮೂಳೆ ಮಠಾಧೀಶ ಸಿದ್ದಲಿಂಗ ಸ್ವಾಮೀಜಿ ನೇತೃತ್ವ ವಹಿಸಲಿದ್ದಾರೆ.

ಕನಕಪುರ ದೇಗುಲ ಮಠಾಧೀಶರು ಮಠದ ನೂತನ ಕಟ್ಡಡ ಉದ್ಘಾಟಿಸಲಿದ್ದು, ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಅಧ್ಯಕ್ಷತೆ ವಹಿಸಲಿದ್ದಾರೆ. ಮೈಸೂರು ಕುಂದೂರು ಮಠಾಧೀಶ ಶರತ್‌ ಚಂದ್ರ ಸ್ವಾಮೀಜಿ ಚಿಕ್ಕತುಪ್ಪೂರು ಜ್ಯೋತಿ ಕೃತಿ ಬಿಡುಗಡೆ ಮಾಡಲಿದ್ದಾರೆ.

ಭಾವಚಿತ್ರ ಅನಾವರಣವನ್ನು ತಿಪಟೂಟು ಷಡಕ್ಷರಿ ಮಠಾಧೀಶ ರುದ್ರಮುನಿ ಸ್ವಾಮೀಜಿ, ಹಂಗಳ ಮಠಾಧೀಶ ಜಡೇ ಸ್ವಾಮೀಜಿ, ಮಹದೇಶ್ವರ ಬೆಟ್ಟದ ಸಾಲೂರು ಮಠಾಧೀಶ ಡಾ. ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಹರವೆ ಮಠಾಧೀಶ ಸರ್ಪಭೂಷಣ ಸ್ವಾಮೀಜಿ ಮಾಡಲಿದ್ದಾರೆ.

ಶರಣ ಸಾಹಿತ್ಯ ಪರಿಷತ್‌ ಅಧ್ಯಕ್ಷ ಡಾ.ಸಿ.ಸೋಮಶೇಖರ್‌, ಸಾಹಿತಿ ಪ್ರೊ.ಎಂ.ಕೃಷ್ಣೇಗೌಡ, ಹಾಸ್ಯ ಕಲಾವಿದ ಬಸವರಾಜ್‌ ಬೆಣ್ಣೆ, ಕೊಗಳಿ ಕೊಟೇಸಿ ಉಪನ್ಯಾಸ ನೀಡಲಿದ್ದಾರೆ. ಕರ್ನಾಟಕ ಲೋಕ ಸೇವಾ ಆಯೋಗದ ಮಾಜಿ ಅಧ್ಯಕ್ಷ ಎಸ್.ಪಿ. ಷಡಕ್ಷರಸ್ವಾಮಿ, ಜೆಎಸ್‌ಎಸ್‌ ಮಹಾವಿದ್ಯಾಪೀಠದ ಕಾರ್ಯದರ್ಶಿ ಎಸ್‌.ಪಿ. ಮಂಜುನಾಥ್‌, ಮಾಜಿ ಸಚಿವ ಸಿ.ಎಸ್. ಪುಟ್ಟರಾಜು, ವಿಧಾನ ಪರಿಷತ್‌ ಸದಸ್ಯ ಎಸ್. ರುದ್ರೇಗೌಡ, ಮಹಾನಾಡು ಯಜಮಾನ ಎಚ್.ಎಸ್. ಪ್ರಭುಸ್ವಾಮಿ, ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಎಚ್.ಎಸ್. ನಂಜುಂಡಪ್ರಸಾದ್‌, ಮಾಜಿ ಸಚಿವೆ ಡಾ.ಗೀತಾ ಮಹದೇವಪ್ರಸಾದ್‌, ಮಾಜಿ ಶಾಸಕ ಸಿ.ಎಸ್.ನಿರಂಜನ್‌ ಕುಮಾರ್‌, ಮಾಜಿ ವಿಧಾನ ಪರಿಷತ್‌ ಸದಸ್ಯ ಕೆ.ಆರ್.‌ ಮಲ್ಲಿಕಾರ್ಜುನಪ್ಪ, ನಿವೃತ್ತ ಪೊಲೀಸ್‌ ಮಹಾ ನಿರೀಕ್ಷಕ ಎಲ್.ರೇವಣ್ಣಸಿದ್ದಯ್ಯ, ಕಾಡ ಮಾಜಿ ಅಧ್ಯಕ್ಷರಾದ ಪಿ.ಮರಿಸ್ವಾಮಿ, ಎಚ್.ಎಸ್.ನಂಜಪ್ಪ, ಉದ್ಯಮಿ ಯು.ಎಸ್. ಶೇಖರ್‌,ಎಸ್. ನಿಶಾಂತ್‌, ತಹಸೀಲ್ದಾರ್‌ ಎಂ.ಎಸ್. ತನ್ಮಯ್‌ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಕ್ಕಳಲ್ಲಿ ಕಾನೂನಿನ ಅರಿವು ಮೂಡಿಸುವ ಅವಶ್ಯಕತೆ ಇದೆ
ಗುಂಡ್ಲುಪೇಟೆಯ ಕಣಿಯರ ಬೀದೀಲಿ ರಸ್ತೆ ಮೇಲೆ ಕೊಳಚೆ ನೀರು ಹರಿವು!