೨೬ರಂದು ಶಿವಶರಣ ಹರಳಯ್ಯ ನಾಟಕ ಪ್ರದರ್ಶನ

KannadaprabhaNewsNetwork |  
Published : Nov 24, 2025, 01:30 AM IST
23ಶಿರಾ3: ಶಿರಾ ನಗರದ ಪ್ರವಾಸಿ ಮಂದಿರದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು, ನಾಡೋಜ ಬರಗೂರು ಮೇಷ್ಟು ಬಳಗ, ಶಿರಾ ಮಾತಂಗ ನೌಕರ ಬಳಗದಿಂದ ಪತ್ರಿಕಾಗೋಷ್ಟಿ ನಡೆಸಲಾಯಿತು. | Kannada Prabha

ಸಾರಾಂಶ

ನ. ೨೬ರ ಬುಧವಾರ ಸಂಜೆ ೬:೩೦ಕ್ಕೆ ನಗರದ ಬರಗೂರು ರಾಮಚಂದ್ರಪ್ಪ ಬಯಲು ರಂಗಮಂದಿರದಲ್ಲಿ ಧಾತ್ರಿ ರಂಗ ಸಂಸ್ಥೆ ಸಿರಿಗೇರಿ ಇವರಿಂದ ಶರಣ ಪರಂಪರೆಯ ಶಿವಶರಣ ಹರಳಯ್ಯ ನಾಟಕ

ಕನ್ನಡಪ್ರಭ ವಾರ್ತೆ ಶಿರಾ ಶಿರಾ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ನಾಡೋಜ ಬರಗೂರು ಮೇಷ್ಟು ಬಳಗ, ಶಿರಾ ಮಾತಂಗ ನೌಕರ ಬಳಗ ಸಹಯೋಗದೊಂದಿಗೆ ನ. ೨೬ರ ಬುಧವಾರ ಸಂಜೆ ೬:೩೦ಕ್ಕೆ ನಗರದ ಬರಗೂರು ರಾಮಚಂದ್ರಪ್ಪ ಬಯಲು ರಂಗಮಂದಿರದಲ್ಲಿ ಧಾತ್ರಿ ರಂಗ ಸಂಸ್ಥೆ ಸಿರಿಗೇರಿ ಇವರಿಂದ ಶರಣ ಪರಂಪರೆಯ ಶಿವಶರಣ ಹರಳಯ್ಯ ನಾಟಕವನ್ನು ಏರ್ಪಡಿಸಲಾಗಿದ್ದು, ತಾಲೂಕಿನ ರಂಗಾಸಕ್ತರು ಆಗಮಿಸಿ ಯಶಸ್ವಿಗೊಳಿಸಬೇಕೆಂದು ಶಿರಾ ತಾಲೂಕು ಮಾದಿಗ ಮಹಾ ಸಭಾದ ಅಧ್ಯಕ್ಷ ಪಿ.ಬಿ.ನರಸಿಂಹಯ್ಯ ಹೇಳಿದರು. ಅವರು ನಗರದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು. ಧಾತ್ರಿ ರಂಗ ಸಂಸ್ಥೆ ಸಿರಿಗೇರಿ ಇವರಿಂದ ಶರಣ ಪರಂಪರೆಯ ಶಿವಶರಣ ಹರಳಯ್ಯ ನಾಟಕವನ್ನು ಅಭಿನಯಿಸುತ್ತಿದ್ದು, ಎಲ್ಲರೂ ಈ ನಾಟಕವನ್ನು ನೋಡಿ ಯಶಸ್ವಿಗೊಳಿಸಬೇಕು. ಪೌರಾಣಿಕ ನಾಟಕಗಳಂತೆಯೇ ಇಂತಹ ನಾಟಕಗಳಿಗೂ ಪ್ರೋತ್ಸಾಹ ಅಗತ್ಯ ಎಂದರು. ಬರಗೂರು ಮೇಷ್ಟ್ರು ಬಳಗದ ರೂಪೇಶ್ ಕೃಷ್ಣಯ್ಯ ಮಾತನಾಡಿ, ಶಿವಶರಣ ಹರಳಯ್ಯ ನಾಟಕರು ವಿಶೇಷವಾದ ನಾಟಕವಾಗಿದ್ದು, ೧೨ನೇ ಶತಮಾನತದಲ್ಲಿ ಬಸವಣ್ಣನವರ ಕಲ್ಯಾಣ ಕ್ರಾಂತಿಯಲ್ಲಿ ಅತ್ಯಂತ ಮುಖ್ಯವಾದ ಪಾತ್ರವನ್ನು ವಹಿಸಿದ್ದರು. ಅಂದಿನ ಕಾಲದಲ್ಲಿಯೇ ಹರಳಯ್ಯ ಅವರು ತಮ್ಮ ಮಗನಾದ ಶೀಲವಂತ ಅವರಿಗೆ ಮೇಲ್ವರ್ಗದ ಹೆಣ್ಣು ಮಗಳಿಗೆ ಮದುವೆ ಮಾಡಿ ಸಾಮಾಜಿಕ ಪರಿವರ್ತನೆಗೆ ನಾಂದಿ ಹಾಡಿದ್ದರು. ಇಂತಹ ಮಹಾನ್ ಶರಣರ ನಾಟಕವನ್ನು ಕಣ್ತುಂಬಿಕೊಳ್ಳಲು ಶಾಲಾ ಕಾಲೇಜಿನ ಮಕ್ಕಳು, ನಾಗರಿಕರು, ಮಕ್ಕಳನ್ನು ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ನಾಟಕವನ್ನು ನೋಡಿ ಯಶಸ್ವಿಗೊಳಿಸಬೇಕು ಎಂದರು.

ಶಿರಾ ರಂಗಭೂಮಿ ಕಲಾವಿದರ ಸಂಘದ ಅಧ್ಯಕ್ಷರಾದ ವಿ.ಎಸ್.ಚಲಪತಿ ಅವರು ಮಾತನಾಡಿ ನ.೨೬ರ ಬುಧವಾರ ಸಂಜೆ ೬.೩೦ಗಂಟೆಗೆ ಅತ್ಯಂತ ವಿಶಿಷ್ಟವಾದ ಕ್ರಾಂತಿಯೋಗಿ ಬಸವಣ್ಣನವರ ಕ್ರಾಂತಿಯಲ್ಲಿ ಬರುವ ಒಂದು ಮುಖ್ಯ ಪಾತ್ರವನ್ನು ಸಿರಿಗೆರೆ ರಂಗವೇದಿಕೆ ವತಿಯಿಂದ ಅಭಿನಯಿಸಲಾಗುತ್ತಿದೆ. ಈ ನಾಟಕಕಕ್ಕೆ ಎಲ್ಲರ ಪ್ರೋತ್ಸಾಹ ಅಗತ್ಯ. ಆದ್ದರಿಂದ ಎಲ್ಲರೂ ಆಗಮಿಸಿ ನಾಟಕವನ್ನು ನೋಡಿ ಶುಭಕೋರಿ ಎಂದರು.

ಈ ಸಂದರ್ಭದಲ್ಲಿ ಮಾತಂಗ ನೌಕರರ ಬಳಗದ ರಾಮರಾಜ್, ರಾಜಣ್ಣ, ಮಾನವ ಬಂಧುತ್ವ ವೇದಿಕೆಯ ಸಂಚಾಲಕ ಧರಣಿಕುಮಾರ್, ಬರಗೂರು ಮೇಷ್ಟ್ರು ಬಳಗದ ಹೆಂದೊರೆ ಶಿವಣ್ಣ, ಜಯರಾಮಕೃಷ್ಣ, ಹಾವನೂರು ಮೂರ್ತಿ, ರವಿ ಹೆಬ್ಬೂರು ಸೇರಿದಂತೆ ಹಲವರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ