ಶಾಸಕ ಪಿ.ರವಿಕುಮಾರ್ ರಿಂದ ವಿವಿಧ ಕಾಮಗಾರಿಗೆ ಗುದ್ದಲಿ ಪೂಜೆ

KannadaprabhaNewsNetwork |  
Published : Jul 26, 2025, 12:30 AM IST
25ಕೆಎಂಎನ್ ಡಿ27 | Kannada Prabha

ಸಾರಾಂಶ

ಚಿಕ್ಕಬಳ್ಳಿ ಕೆರೆ ಅಭಿವೃದ್ಧಿಗೆ ಇನ್ನೂ ಎರಡು ತಿಂಗಳಲ್ಲಿ ಅನುದಾನ ಬಿಡುಗಡೆಗೊಳ್ಳಲಿದೆ. ವಿಪಕ್ಷದವರು ಕಾಮಗಾರಿಗೆ ದುಡ್ಡಿಲ್ಲ ಎನ್ನುತ್ತಾರೆ. ಮಂಡ್ಯ ಕ್ಷೇತ್ರದ ಅಭಿವೃದ್ಧಿ ನಿಮ್ಮ ಕಣ್ಣ ಮುಂದೆ ಇದೆ.

ಮಂಡ್ಯ: ತಾಲೂಕಿನ ಆನಸಾಸಲು ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಭೂಮಿ ಪೂಜೆಗೆ ಶಾಸಕ ಪಿ.ರವಿಕುಮಾರ್ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಪಕ್ಷಭೇದ ಮರೆತು ಗ್ರಾಮಸ್ಥರು ಅಭಿವೃದ್ಧಿಗೆ ಕೈಜೋಡಿಸುತ್ತಿದ್ದಾರೆ. ಗ್ರಾಮದ ಮಾರಮ್ಮ ದೇವಿ ದೇವಸ್ಥಾನ ಮತ್ತು ಲೈಬ್ರರಿ ಕಟ್ಟಡ ಸೇರಿದಂತೆ ವಿವಿಧ ರಸ್ತೆ ಸೇರಿ ಒಟ್ಟು 35 ಲಕ್ಷ ರು. ವೆಚ್ಚದ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದರು. ಚಿಕ್ಕಬಳ್ಳಿ ಕೆರೆ ಅಭಿವೃದ್ಧಿಗೆ ಇನ್ನೂ ಎರಡು ತಿಂಗಳಲ್ಲಿ ಅನುದಾನ ಬಿಡುಗಡೆಗೊಳ್ಳಲಿದೆ. ವಿಪಕ್ಷದವರು ಕಾಮಗಾರಿಗೆ ದುಡ್ಡಿಲ್ಲ ಎನ್ನುತ್ತಾರೆ. ಮಂಡ್ಯ ಕ್ಷೇತ್ರದ ಅಭಿವೃದ್ಧಿ ನಿಮ್ಮ ಕಣ್ಣ ಮುಂದೆ ಇದೆ ಎಂದು ಹೇಳಿದರು. ಇದೇ ವೇಳೆ ಚಿಕ್ಕಬಳ್ಳಿಕೆರೆ ಕೋಡಿ ಕಾಮಗಾರಿ, ಮಾಯಪ್ಪನಹಳ್ಳಿ ಕಾಲುವೆ ಮತ್ತು ರಸ್ತೆ ಅಭಿವೃದ್ಧಿ ಕಾಮಗಾರಿಗಳನ್ನು ವೀಕ್ಷಿಸಿದರು. ಕಾರ್ಯಕ್ರಮದಲ್ಲಿ ಚಿಕ್ಕಬಳ್ಳಿ ಎಂ.ಕೃಷ್ಣ , ದ್ಯಾವಪ್ಪ‌, ತಾಪಂ ಮಾಜಿ ಅಧ್ಯಕ್ಷ ತ್ಯಾಗರಾಜು, ಗ್ರಾಪಂ ಸದಸ್ಯರಾದ ದಯಾನಂದ್, ಕೃಷ್ಣ, ಸುಮಲೋಕೇಶ್, ಮಾರಮ್ಮ ಸೇವಾ ಸಮಿತಿ ಅಧ್ಯಕ್ಷ ಶಿವಕುಮಾರ್, ಕಾರ್ಯದರ್ಶಿ ರಾಜಣ್ಣ, ಹಲ್ಲೇಗೆರೆ ಸೊಸೈಟಿ ಮಾಜಿ ಅಧ್ಯಕ್ಷ ಎ.ಎಸ್.ದೇವರಾಜು, ಮುಖಂಡರಾದ ಉಮೇಶ್, ಶ್ರೀಕಾಂತ್, ಮಹೇಂದ್ರ ಡೈರಿ ಅಧ್ಯಕ್ಷ ರಾಕೇಶ್ ಸೇರಿದಂತೆ ಹಲವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೈಲ್ವೆ ಪರೀಕ್ಷೆಯಲ್ಲಿ ಮತ್ತೆ ಕನ್ನಡಕ್ಕೆ ಕೊಕ್
ಓಡಿ ಹೋದ ಹೇಡಿ ಎನಿಸಿಕೊಳ್ಳುವುದಿಲ್ಲ. ಅಲ್ಲೇ ರಾಜಕೀಯ ಅಸ್ತಿತ್ವ ಕಂಡುಕೊಳ್ಳುತ್ತೇನೆ : ನಿಖಿಲ್‌