ಗದಗ: ಇತ್ತೀಚಿಗೆ ಗದಗ ಜಿಲ್ಲೆಯನ್ನೇ ಬೆಚ್ಚಿ ಬೀಳಿಸಿದ್ದ ನಾಲ್ವರ ಹತ್ಯೆಯ ಪ್ರಮುಖ ಆರೋಪಿ ಕೊಲೆಗೆ ಸುಪಾರಿ ಪಡೆದಿದ್ದ ಫೈರೋಜ್ ಖಾಜಿ ಸೋಮವಾರ ಘಟನಾ ಸ್ಥಳದ ಮಹಜರು ಮಾಡುವ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿಗಳ ಮೇಲೆ ಬೀಯರ್ ಬಾಟಲಿಯಿಂದ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದಾಗ ಪೊಲೀಸರು ಆರೋಪಿಯ ಮೇಲೆ ಗುಂಡು ಹಾರಿಸಿದ್ದು ಕಾಲಿಗೆ ಗುಂಡು ತಾಗಿ ಗಾಯಗೊಂಡ ಘಟನೆ ನರಗುಂದ ತಾಲೂಕಿನ ಕುರ್ಲಗೇರಿ ಗ್ರಾಮದ ಬಳಿ ನಡೆದಿದೆ.
ಈ ಸಂದರ್ಭದಲ್ಲಿ ಪರಾರಿಯಾಗಲು ಯತ್ನಿಸಿದ ಸುಪಾರಿ ಹಂತಕ ಪೈರೋಜ್ ಖಾಜಿ ಮೇಲೆ ಪೊಲೀಸರು ಎರಡು ಸುತ್ತು ಗುಂಡು ಹಾರಿಸಿದ್ದು, ಸ್ಥಳದಲ್ಲಿಯೇ ಕುಸಿದು ಬಿದಿದ್ದಾನೆ.
ಆರೋಪಿ ಪೈರೋಜ ಮೊಣಕಾಲಿಗೆ ತೀವ್ರ ಗಾಯವಾಗಿದ್ದು, ಗದಗ ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. ಆರೋಪಿಯಿಂದ ಹಲ್ಲೆಗೆ ಒಳಗಾದ ಗದಗ ಗ್ರಾಮೀಣ ಪಿಎಸ್ಐ ಶಿವಾನಂದ ಪಾಟೀಲ ಅವರನ್ನು ನರಗುಂದ ತಾಲೂಕಾಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ವಿಷಯ ತಿಳಿಯುತ್ತಿದ್ದಂತೆ ನರಗುಂದ ಪಟ್ಟಣಕ್ಕೆ ಧಾವಿಸಿದ ಎಸ್ಪಿ ಬಿ.ಎಸ್.ನೇಮಗೌಡ ಪಿಎಸ್ಐ ಶಿವಾನಂದ ಪಾಟೀಲ ಯೋಗಕ್ಷೇಮ ವಿಚಾರಿಸಿದ್ದಾರೆ.ನಾಲ್ವರ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣಕ್ಕೆ ಬಳಸಲಾದ ಮೊಬೈಲ್‌ಗಳನ್ನು ಆರೋಪಿಗಳು ನರಗುಂದದ ಬಳಿ ಎಸೆದು ಸಾಕ್ಷಿ ನಾಶಕ್ಕೆ ಪ್ರಯತ್ನಿಸಿದ್ದರು. ಈ ಕುರಿತು ಸ್ಥಳ ಮಹಜರ್‌ಗೆ ಪೊಲೀಸರು ಆರೋಪಿಯನ್ನು ಕರೆದುಕೊಂಡು ಹೋಗಿದ್ದಾಗ ಈ ವೇಳೆ ಘಟನೆ ನಡೆದಿದೆ, ಘಟನೆಯಲ್ಲಿ ನಮ್ಮ ಪೊಲೀಸ್ ಅಧಿಕಾರಿಗಳು ಗಾಯಗೊಂಡಿದ್ದಾರೆ. ಎಂದು ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್.ನೇಮಗೌಡ ಹೇಳಿದರು.