ಶ್ರೀ‍ರಾಮೋತ್ಸವ: ಸಂಭ್ರಮಾಚರಣೆ

KannadaprabhaNewsNetwork |  
Published : Jan 23, 2024, 01:48 AM IST
22ಕೆಪಿಡಿವಿಡಿ01: | Kannada Prabha

ಸಾರಾಂಶ

ಅಯೋಧ್ಯೆಯಲ್ಲಿ ಶ್ರೀರಾಮಮೂರ್ತಿ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಸೋಮವಾರ ತಾಲೂಕಿನಾದ್ಯಂತ ವಿವಿಧ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಭಜನೆ, ಕೀರ್ತನೆ, ಉಪನ್ಯಾಸ, ಯುವಕರ ರ್‍ಯಾಲಿ ಜರುಗಿದವು.ಪಟ್ಟಣದ ಗೌರಂಪೇಟ ವೃತ್ತದಲ್ಲಿರುವ ಶ್ರೀ ಮಹರ್ಷಿ ವಾಲ್ಮೀಕಿ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಶ್ರೀರಾಮನ ಭಕ್ತರು, ಆಯೋಜಕರು, ಅನುಯಾಯಿಗಳು ಪಕ್ಷ, ಜಾತಿ-ಮತ ಭೇದವಿಲ್ಲದೆ ಸಂಭ್ರಮ ಆಚರಿಸಿದರು.

ದೇವದುರ್ಗ: ಅಯೋಧ್ಯೆಯಲ್ಲಿ ಶ್ರೀರಾಮಮೂರ್ತಿ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಸೋಮವಾರ ತಾಲೂಕಿನಾದ್ಯಂತ ವಿವಿಧ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಭಜನೆ, ಕೀರ್ತನೆ, ಉಪನ್ಯಾಸ, ಯುವಕರ ರ್‍ಯಾಲಿ ಜರುಗಿದವು.

ಪಟ್ಟಣದ ಗೌರಂಪೇಟ ವೃತ್ತದಲ್ಲಿರುವ ಶ್ರೀ ಮಹರ್ಷಿ ವಾಲ್ಮೀಕಿ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಶ್ರೀರಾಮನ ಭಕ್ತರು, ಆಯೋಜಕರು, ಅನುಯಾಯಿಗಳು ಪಕ್ಷ, ಜಾತಿ-ಮತ ಭೇದವಿಲ್ಲದೆ ಸಂಭ್ರಮ ಆಚರಿಸಿದರು.

ಪಟ್ಟಣದ ಗೋಪಾಲಸ್ವಾಮಿ, ಈಶ್ವರ, ಅಂಬಾಭವಾನಿ, ದುರಗಮ್ಮ, ಕಾಳಿಕಾದೇವಿ ದೇವಸ್ಥಾನ, ಅನೇಕ ವಾರ್ಡ ಹನುಮಾನ್‌ ಮಂದಿರಗಳಲ್ಲಿ ವಿಶೇಷ ಪೂಜೆ ಜರುಗಿದವು.

ಪಟ್ಟಣದ ಕೆಇಬಿ ರಸ್ತೆಯಲ್ಲಿರುವ ಶ್ರೀ ಹನುಮಾನ ದೇವಸ್ಥಾನದಲ್ಲಿ ಹೋಮ, ಹವನ ಜರುಗಿದವು. ಬಳಿಕ ಶ್ರೀರಾಮನ ಕುರಿತು ಏರ್ಪಡಿಸಿದ್ದ ಭಾಷಣ, ಪ್ರಬಂಧ, ರಂಗೊಲಿ, ಚಿತ್ರ ಪ್ರದರ್ಶನ, ವೇಷ ಭೂಷಣಗಳ ಸ್ಪರ್ಧೆಗಳಲ್ಲಿ ವಿಜೇತ ಮಕ್ಕಳಿಗೆ ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು.

ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಬ್ಯಾನರ್, ಧ್ವಜ ಭರಾಟೆ ಜೋರಾಗಿತ್ತು. ಯುವಕರು ತಮ್ಮ ವಾಹನಗಳಿಗೆ ಧ್ವಜ ಕಟ್ಟಿಕೊಂಡು ತಿರುಗಾಡುವ ದೃಶ್ಯ ಸಾಮಾನ್ಯವಾಗಿತ್ತು. ಯುವಕರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಇಡೀ ಪಟ್ಟಣದ ಹಸಿರು - ತೋರಣಗಳಿಂದ ಅಲಂಕೃತಗೊಂಡು ಹಬ್ಬದ ವಾತಾವರಣ ಕಂಡು ಬಂತು.

ಪ್ರಕಾಶ ಖೆಣೇದ್, ಶಾಮರಾವ್ ಕುಲಕರ್ಣಿ ಹೆಮನೂರು, ಮುಂಡರಗಿ ಜೋಷಿ, ಮೌನೇಶ ಪತ್ತಾರ, ನಾಗರಾಜ ಅಕ್ಕರಕಿ, ದೋಟಿಹಾಳ, ನಾರಾಯಣರಾವ್ ಹಂಚಾಟೆ, ತಿರುಮಲಾಚಾರ್ ಜೋಷಿ, ಚಂದ್ರಶೇಖರ ಪಾಟೀಲ್ ಮಿಯ್ಯಾಪೂರ, ನಿರಂಜನ ಮೂರ್ತಿ, ವೆಂಕಟೇಶನಾಯಕ ಚಿಂತಲಕುಂಟಿ, ಚಂದ್ರು ಗೌರಂಪೇಟ ಸೇರಿ ಹಲವಾರು ಗಣ್ಯರು ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಯೋಗೇಶ್ ಗೌಡ ಹತ್ಯೆ ಕೇಸ್: ವಿನಯ್‌ ಕುಲಕರ್ಣಿಗೆ ಬೇಲ್‌
ರಾಜಕಾರಣ ಪ್ರವೇಶಕ್ಕೆ 50 ವರ್ಷ । ಬಿಎಸ್‌ವೈ ಉತ್ಸವಕ್ಕೆ ಸಿದ್ಧತೆ