
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು (ಆಲ್ದೂರು)
ಶುಕ್ರವಾರ ಪಟ್ಟಣದ ಸರ್ಕಾರಿ ಪ್ರಾಥಮಿಕ ಶಾಲಾ ನಿವೇಶನದಲ್ಲಿ ವಿದ್ಯಾ ಕಾಫಿ ಮತ್ತು ಹರ್ಬ್ಸ್ ಸಂಸ್ಥೆಯ ಸರಸ್ವತಿ ಫೌಂಡೇಶನ್ ವತಿಯಿಂದ ನೂತನ ಸಿಸಿಎಸ್ಆರ್ ಕೆಪಿಎಸ್ ಶಾಲಾ ಕಟ್ಟಡ ನಿರ್ಮಾಣಕ್ಕೆ ಭೂಮಿಪೂಜೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಿದ್ಯಾ ಸಂಸ್ಥೆಯ ಶ್ಯಾಮ್ ಪ್ರಸಾದ್ ಅವರು ಸಮಾಜಮುಖಿ ಕಳಕಳಿ ಉಳ್ಳ ಮಾನವತಾವಾದಿ. ಈಗಾಗಲೇ ಆಸ್ಪತ್ರೆ ಕಾಮಗಾರಿ ನಡೆಯುತ್ತಿದ್ದು, ಪ್ರತಿದಿನವೂ ಅದರ ಮಾಹಿತಿಯನ್ನು ತನ್ನೊಂದಿಗೆ ಹಂಚಿಕೊಳ್ಳುತ್ತಾರೆ. ಈಗಾಗಲೇ ಆಸ್ಪತ್ರೆ ಕಟ್ಟಿಸುತ್ತಿದ್ದಾರೆ. ಅದೇ ಆಸ್ಪತ್ರೆಯಲ್ಲಿ ನಾನು ಜನಿಸಿದ್ದು, ಈಗ ಶಾಲೆಯನ್ನು ಕಟ್ಟಿಸುತ್ತಿದ್ದಾರೆ. ಈ ಶಾಲೆಯಲ್ಲಿ ನಾನು ವ್ಯಾಸಂಗ ಮಾಡಿದ್ದೇನೆ. ವಿದ್ಯಾರ್ಥಿಗಳಿಗೆ ಶಿಕ್ಷಣ ಸಮಾಜ ಕೇಂದ್ರಿತವಾಗಿರಬೇಕು, ಗುಣಮಟ್ಟವಾಗಿರಬೇಕು. ಇಂತಹ ಹೃದಯವಂತಿಕೆ ಉಳ್ಳ ಉದ್ಯಮಿಗಳು ಸಮಾಜವನ್ನು ಕಟ್ಟಲು ಶ್ರಮಿಸುತ್ತಿರುವುದು ಶ್ಲಾಘನೀಯ. ಇಡೀ ಊರಿನ ಜನರ ಪರವಾಗಿ ಕೃತಜ್ಞತೆಗಳನ್ನು ವಿದ್ಯಾ ಕಾಫಿ ಮತ್ತು ಹರ್ಬ್ಸ್ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಶ್ಯಾಮ್ ಪ್ರಸಾದ್ ಭಟ್ ಮತ್ತು ಕುಟುಂಬಕ್ಕೆ ಅರ್ಪಿಸುವುದಾಗಿ ತಿಳಿಸಿದರು.ವಿದ್ಯಾ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಶ್ಯಾಮ್ ಪ್ರಸಾದ್ ಭಟ್ ಮಾತನಾಡಿ, ಸಮಾಜದಲ್ಲಿ ಬಹು ಮುಖ್ಯವಾಗಿರುವುದು ಶಿಕ್ಷಣ ಮತ್ತು ಆರೋಗ್ಯ. ಆಲ್ದೂರಿಗೆ ಮೊದಲು ಆಸ್ಪತ್ರೆಯನ್ನು ಕಟ್ಟಿಸಿಕೊಡಲು ಚಿಂತಿಸಿ ಕಾಮಗಾರಿ ಈಗಾಗಲೇ ನಡೆಯುತ್ತಿದೆ. ಶಾಲೆಯೊಂದನ್ನು ಕಟ್ಟಿಸಬೇಕೆಂಬುದು ನನ್ನ ಕನಸಾಗಿತ್ತು. ಹಾಗಾಗಿ, ಉತ್ತಮ ಮಾದರಿ ಶಾಲೆಯನ್ನು ಸರಸ್ವತಿ ಫೌಂಡೇಶನ್ ವತಿಯಿಂದ ₹3ರಿಂದ ₹5 ಕೋಟಿ ಅಂದಾಜು ವೆಚ್ಚದಲ್ಲಿ ನಿರ್ಮಿಸಲು ಮುಂದಾಗಿದ್ದೇವೆ ಎಂದು ಹೇಳಿದರು.
ಶ್ಯಾಮ್ ಪ್ರಸಾದ್ ಭಟ್ ಪುತ್ರಿ ವಿದ್ಯಾ ಶ್ಯಾಮ್ ಪ್ರಸಾದ್ ಮಾತನಾಡಿ, ತಂದೆಯವರು ಬಾಲ್ಯದ ದಿನಗಳಿಂದಲೂ ಶಿಕ್ಷಣದ ಮಹತ್ವವನ್ನು ಅರಿತಿದ್ದರಿಂದಲೇ ವಿದ್ಯಾ ಎಂದು ನನಗೆ ಹೆಸರನ್ನು ಇಟ್ಟಿದ್ದಾರೆ. ಅದರಂತೆ ಅವರಿಗೆ ಶಾಲೆಗಳನ್ನು ಮತ್ತು ವಿಶ್ವವಿದ್ಯಾನಿಲಯವನ್ನು ನಿರ್ಮಿಸುವ ಮಹತ್ತರ ಕನಸಿದೆ. ನಾನು ಕೂಡ ಎಂಜಿನಿಯರ್ ಪದವೀಧರೆ ಆಗಿದ್ದು, ತಂದೆಯೊಂದಿಗೆ ಕೆಲಸದ ಜವಾಬ್ದಾರಿ ನಿರ್ವಹಿಸುತ್ತಿದ್ದೇನೆ. ವಿದ್ಯಾ ಬ್ರಾಂಡ್ ಮಾಡುವ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸುತ್ತಿದ್ದು, ಪರಿಶ್ರಮದಿಂದ ₹3 ಸಾವಿರ ಕೋಟಿ ಮೌಲ್ಯದ ಉದ್ಯಮವನ್ನು ತಂದೆ ನಿರ್ಮಿಸಿದ್ದು, ಅದಕ್ಕೆ ಮೂಲಕಾರಣ ಶಿಕ್ಷಣ. ಹಳ್ಳಿಯ ಮಕ್ಕಳು ಕೂಡ ಉನ್ನತ ಶಿಕ್ಷಣ ಪಡೆದರೆ ಪ್ರಪಂಚವೇ ತಿರುಗಿ ನೋಡುವಂತೆ ಸಾಧನೆ ಮಾಡಬಹುದು ಶಿಕ್ಷಣ ಅತ್ಯಂತ ಮೌಲ್ಯವುಳ್ಳದ್ದು, ಎಂದರು.
ಶ್ಯಾಮ್ ಪ್ರಸಾದ್ ಭಟ್ ಪತ್ನಿ ವೀಣಾ ಶ್ಯಾಮ್ ಪ್ರಸಾದ್, ಮಹಾಗಣಪತಿ ಸೇವಾ ಸಮಿತಿ ಅಧ್ಯಕ್ಷ ಸಿ.ಸುರೇಶ ಗೌಡ, ವಲಯ ಒಕ್ಕಲಿಗ ಸಂಘದ ಅಧ್ಯಕ್ಷ ಡಿ.ಬಿ. ಅಶೋಕ್, ಬಿಜೆಪಿ ರಾಜ್ಯ ಸಮಿತಿ ಸದಸ್ಯ ಹೆಡದಾಳು ಸಂಪತ್, ಪರಿಸರವಾದಿ ಕಾಫಿ ಬೆಳೆಗಾರ ತೌಸೀಫ್ ಅಲಿ, ಡಿಎಸ್ಎಸ್ ಮುಖಂಡರಾದ ಹೊನ್ನಪ್ಪ ಯಲಗುಡಿಗೆ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ದೇವೇಂದ್ರ, ಕ್ಷೇತ್ರ ಶಿಕ್ಷಣಾಧಿಕಾರಿ ರುದ್ರಪ್ಪ ಟಿ.ಆರ್., ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ರಮೇಶ್ ಆಚಾರ್ಯ ಗಾಳಿ ಗಂಡಿ, ಬಿ.ಎಲ್. ಚಂದ್ರಶೇಖರ್, ಜೆಡಿಎಸ್ ಹೋಬಳಿ ಅಧ್ಯಕ್ಷ ಪ್ರವೀಣ್, ಪ್ರೌಢಶಾಲೆ ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಎ.ಯು. ಇಬ್ರಾಹಿಂ, ಮುಖ್ಯ ಶಿಕ್ಷಕ ಸುರೇಶ್ ಸಿ.ಎಸ್., ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಕಮಲಾಕ್ಷಿ, ಶಿಕ್ಷಣ ಸಂಯೋಜನ ಅಧಿಕಾರಿ ಅಸ್ಫಾ ಅಖ್ತರ್, ವಿದ್ಯಾ ಸಂಸ್ಥೆಯ ಭಾನುಪ್ರಕಾಶ್, ಗುತ್ತಿಗೆದಾರ ಪಾಂಡುರಂಗ, ಭವ್ಯ ನಟೇಶ್, ಸಿಆರ್‌ಪಿ ಕಮಲ, ಎಸ್‌ಡಿಎಂಸಿ ಅಧ್ಯಕ್ಷ ಪರಮೇಶ್, ಅರ್ಚಕ ಸುಬ್ರಹ್ಮಣ್ಯ ಭಟ್ ಮೊದಲಾದವರಿದ್ದರು.