ಸಿದ್ಧಗಂಗಾ ಶ್ರೀಗಳು ಅನ್ನ, ಅಕ್ಷರ, ಆಶ್ರಯ ನೀಡಿದ ಜ್ಞಾನಿ

KannadaprabhaNewsNetwork | Published : Apr 2, 2025 1:02 AM

ಸಾರಾಂಶ

ಅನ್ನ ,ಅಕ್ಷರ ,ಆಶ್ರಯ ನೀಡಿ ಶಿಕ್ಷಣ ಕಲಿಯುವ ಮಕ್ಕಳಿಗೆ ಸಮಾಜದ ಎಲ್ಲ ವರ್ಗದವರಿಗೂ ಶಿಕ್ಷಣ ನೀಡುವ ಮೂಲಕ ದೇಶದ ಸತ್ಪ್ರಜೆಗಳನ್ನಾಗಿ ರೂಪಿಸಿ ನಡೆದಾಡುವ ದೇವರು ಎಂದೇ ಪ್ರಸಿದ್ಧರಾದ ಮಹಾನ್‌ ಚೇತನ ಡಾ.ಶಿವಕುಮಾರಸ್ವಾಮಿಗಳು ಎಂದು ಅಖಿಲ ಭಾರತ ವೀಶೈವ ಲಿಂಗಾಯಿತ ಮಹಾಸಭಾದ ಮಧುಗಿರಿ ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ಗೀತಾನಾಗರಾಜು ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ಮಧುಗಿರಿ

ಅನ್ನ ,ಅಕ್ಷರ ,ಆಶ್ರಯ ನೀಡಿ ಶಿಕ್ಷಣ ಕಲಿಯುವ ಮಕ್ಕಳಿಗೆ ಸಮಾಜದ ಎಲ್ಲ ವರ್ಗದವರಿಗೂ ಶಿಕ್ಷಣ ನೀಡುವ ಮೂಲಕ ದೇಶದ ಸತ್ಪ್ರಜೆಗಳನ್ನಾಗಿ ರೂಪಿಸಿ ನಡೆದಾಡುವ ದೇವರು ಎಂದೇ ಪ್ರಸಿದ್ಧರಾದ ಮಹಾನ್‌ ಚೇತನ ಡಾ.ಶಿವಕುಮಾರಸ್ವಾಮಿಗಳು ಎಂದು ಅಖಿಲ ಭಾರತ ವೀಶೈವ ಲಿಂಗಾಯಿತ ಮಹಾಸಭಾದ ಮಧುಗಿರಿ ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ಗೀತಾನಾಗರಾಜು ಅಭಿಪ್ರಾಯಪಟ್ಟರು.

ಮಂಗಳವಾರ ಇಲ್ಲಿನ ಡೂಂಲೈಟ್‌ ಸರ್ಕಲ್‌ನಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಾಭಾ ಮಧುಗಿರಿ ತಾಲೂಕು ಘಟಕದಿಂದ ಆಯೋಜಿಸಿದ್ದ ಪದ್ಮಭೂಷಣ, ಕರ್ನಾಟಕ ಮತ್ತು ತ್ರಿವಿದ ದಾಸೋಹಿಗಳಾದ ಡಾ.ಶಿವಕುಮಾರಸ್ವಾಮಿಜಿಗಳ 118ನೇ ಜನ್ಮದಿನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಶ್ರೀಗಳು ಸಮಾಜದ ಏಳಿಗೆ, ನಾಡಿನ ಪ್ರಗತಿ ಹಾಗೂ ಶೇಕ್ಷಣಿಕ ಕ್ಷೇತ್ರದ ಅಭ್ಯುದಯಕ್ಕಾಗಿ ಹಗಲಿರುಳು ಶ್ರಮಿಸಿದ ಮಹಾನ್‌ ಚೇತನ ಎಂದ ಅವರು, ಸಿದ್ಧಗಂಗೆಯನ್ನು ಉತ್ತರ ಭಾರತದ ಪವಿತ್ರ ಗಂಗೆಯನ್ನು ಹರಿಸಿದಂತೆ ದಕ್ಷಿಣ ಭಾರತದ ಕರ್ನಾಟಕದಲ್ಲಿ ಜ್ಞಾನದ ಗಂಗೆಯನ್ನು ರೂಪಿಸಿದ ಮಹಾನಾ ಚೇತನ ಡಾ.ಶ್ರೀ ಶಿವಕುಮಾರಸ್ವಾಮಿಗಳು ಲಕ್ಷಾಂತರ ಮಕ್ಕಳಿಗೆ ಅನ್ನ,ಅಕ್ಷರ ,ಆಶ್ರಯ ನೀಡಿ ಉತ್ತಮ ವಿಧ್ಯೆ ಕಲಿಸಿದ ಜ್ಞಾನದಾಸೋಹಿಗಳು ಇಂತಹ ಮಹಾನುಭಾವರು ಮಕ್ಕಳ ಜ್ಞಾನ ಸಂಪಾದನೆಗೆ ಶ್ರೀಮಿಸಿದ್ದು ಇಲ್ಲಿ ವ್ಯಾಸಂಗ ಮಾಡಿದ ಲಕ್ಷಾಂತರ ಮಂದಿ ರಾಜ್ಯ ಮತ್ತು ದೇಶ - ವಿದೇಶಗಳಲ್ಲಿ ಉನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಎಂದರು.

ಪುರಸಭೆ ಅಧ್ಯಕ್ಷ ಲಾಲಪೇಟೆ ಮಂಜುನಾಥ್‌ ಮಾತನಾಡಿ, ಡಾ.ಶ್ರೀಶ್ರೀ ಶಿವಕುಮಾರಸ್ವಾಮಿಜಿಗಳು ಸಿದ್ಧಗಂಗೆಯಲ್ಲಿ ನಾಡಿನ ಮೂಲೆ- ಮುಕ್ಕುಗಳಿಂದ ಬಂದ ಆರ್ಥಿಕವಾಗಿ ಹಿಂದುಳಿದ ಎಲ್ಲ ವರ್ಗದ ಮಕ್ಕಳಿಗೆ ಶಿಕ್ಷಣ ಕಲಿಸಿ ಸಮಾಜದ ಮುಖ್ಯ ವಾಹಿನಿಗೆ ತರುವ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ಅಲ್ಲದೆ ಇಲ್ಲಿ ಓದಿದ ಮಕ್ಕಳು ಪ್ರಪಂಚದಾದ್ಯಂತ ತಮ್ಮ ಪ್ರತಿಭೆಯನ್ನು ಮತ್ತು ಆಡಳಿತವನ್ನು ತೋರಿದ್ದು ಇದಕ್ಕೆ ಸಿದ್ಧಗಂಗೆಯ ಶಿವಕುಮಾರಸ್ವಾಮಿಜಿಗಳ ಕಾಳಾಜಿ ಕಾರಣ ಎಂದರು.

ಕಾರ್ಯಕ್ರಮದಲ್ಲಿ ತುಮಕೂರು ಜಿಲ್ಲಾಧ್ಯಕ್ಷೆ ಮಮತಾದಿವಾಕರ್‌, ಪ್ರಧಾನ ಕಾರ್ಯದರ್ಶಿ ಚಾಯಾಸತೀಶ್‌, ಶ್ವೇತಾಸಿದ್ದೇಶ್‌ ,ಸುಮಾಹರೀಶ್‌, ತಾರಾಬಸವರಾಜು,ಶಶಿಕಲಾ ಮಂಜುನಾಥ್‌, ,ಮಮತಾಚಂದ್ರಶೇಖರ್‌, ಲತಾ ನಾಗಭೂಷಣ್‌,ಮಂಜುಳಾ ,ವಿಜಯ, ಸವಿತಾ, ಜಲಜ, ಸೌಮ್ಯ, ಅನಿತಾ, ಉಷಾ , ಅರುಣ, ವಿದ್ಯಾ, ರುದ್ರರಾಧ್ಯ, ಫರ್ನಿಚರ್‌ ಮಂಜುನಾಥ್‌, ಮೊಬೈಲ್‌ ರಾಜು, ನವೀನ್‌, ನಂದಿನಿ ಮಾರ್ಟ್ ಯೋಗಿಶ್‌ ಹಾಗೂ ಮಹಿಳಾ ಘಟಕದ ಪದಾಧಿಕಾರಿಗಳು ಭಾಗವಹಿಸಿದ್ದರು.

Share this article