ಕನ್ನಡಪ್ರಭ ವಾರ್ತೆ ಆಳಂದ
ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಸಿದ್ಧರಾಮೇಶ್ವರರ ಭಾವಚಿತ್ರದ ಭವ್ಯ ಮೆರವಣಿಗೆ ನಡೆಯಿತು. ಈ ಮೊದಲು ನಡೆದ ಸಭೆಯ ಅಧ್ಯಕ್ಷತೆಯನ್ನು ಭೋವಿ ಸಮಾಜದ ತಾಲೂಕು ಅಧ್ಯಕ್ಷ ಭೀಮಣ್ಣಾ ಬನ್ನಪಟ್ಟಿ ವಹಿಸಿದರು. ಕಾರ್ಯಕ್ರಮವು ಆರ್.ಕೆ. ಪಾಟೀಲ ಉದ್ಘಾಟಿಸಿ ಮಾತನಾಡಿದರು.
ಗ್ರಾಮದ ಮುಖಂಡ ಶ್ರೀಮಂತ ವಾಗ್ದರಿ, ಈರಣ್ಣಾ ನಾಗಶೆಟ್ಟಿ, ಗುರುಣ್ಣಾ ಕಾಮಣಗೋಳ, ಸೂರ್ಯಕಾಂತ ಚಿಂಚೂರ, ಸೈಬಣ್ಣಾ ಖರ್ಚಿನ, ರಮೇಶ, ಗುರಮಳಿ, ರಮೇಶ ಚವ್ಹಾಣ್, ಗಿರೇಪ್ಪ ಪಿರೋಜಿ, ದುರ್ಗಪ್ಪ ಪಿರೋಜಿ, ಮುಕುಂದ ಬನ್ನಪಟ್ಟಿ, ಬರ್ಮಣಾ ಕಾರಬಾರಿ, ಅರ್ಜುನ ಬಂಡೆ, ಯಂಕಪ್ಪ ಬನ್ನಪಟ್ಟಿ, ರಾಜು ಪಿರೋಜಿ, ರಘು ಕಾರಬಾರಿ, ರಾಮ ಘೋಡಕೆ, ವಿಠ್ಠಲ ದಂಡಗೂಲೆ, ಮಹೇಶ ವಿಠ್ಠಲಕರ್, ಆನಂದ ಬನ್ನಪಟ್ಟಿ, ರಾಜು ಸಾಳುಂಕೆ, ಶಿರಾಜ ಬನ್ನಪಟ್ಟಿ, ತಾನಾಜಿ ಪಿರೋಜ ಸೇರಿದಂತೆ ಅನೇಕರಿದ್ದರು.ಆಳಂದನಲ್ಲಿ ಆಚರಣೆ: ಪಟ್ಟಣದ ತಾಲೂಕು ಆಡಳಿತ ಸೌಧನಲ್ಲಿ ಶಿವಯೋಗಿ ಸಿದ್ಧರಾಮೇಶ್ವರ ಜಯಂತಿ ಆಚರಿಸಲಾಯಿತು. ತಹಸೀಲ್ದಾರ ಯಲ್ಲಪ್ಪ ಸುಬೇದಾರ ಪೂಜೆ ನೆರವೇರಿಸಿದರು. ಅಧಿಕಾರಿಗಳು ಮತ್ತು ಸಮಾಜ ಬಾಂಧವರು ಪಾಲ್ಗೊಂಡಿದ್ದರು. ಬಳಿಕ ಪಟ್ಟಣದ ಹಳೆಯ ತಹಸೀಲ್ದಾರ ಕಚೇರಿಯಿಂದ ಪ್ರಮುಖ ರಸ್ತೆಗಳ ಮಾರ್ಗವಾಗಿ ಭಾವಚಿತ್ರದ ಮೆರವಣಿಗೆ ನಡೆಯಿತು. ತಹಸೀಲ್ದಾರರು ಸೇರಿದಂತೆ ಪುರಸಭೆ ಮುಖ್ಯಾಧಿಕಾರಿ ಶಂಭುಲಿಂಗ ಕಣ್ಣಿ ಸೇರಿ ಭೂವಿ ವಡ್ಡರ ಸಮಾಜ ಮುಖಂಡರು, ಕಾರ್ಯಕರ್ತರು, ವಿವಿಧ ಇಲಾಖೆಯ ಅಧಿಕಾರಿಗಳು ಸೇರಿದಂತೆ ನಾಗರಿಕರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.