ಆಧ್ಯಾತ್ಮಿಕ ಚಿಂತನೆಗಳಿಂದ ಸಮ ಸಮಾಜ ಕಟ್ಟಿದ ಸಿದ್ದರಾಮೇಶ್ವರು

KannadaprabhaNewsNetwork |  
Published : Jan 16, 2024, 01:49 AM IST
15ಕೆಪಿಆರ್‌ಸಿಆರ್‌01: | Kannada Prabha

ಸಾರಾಂಶ

ಆಧ್ಯಾತ್ಮಿಕ ಚಿಂತನೆಗಳಿಂದ ಸಮ ಸಮಾಜ ಕಟ್ಟುವಲ್ಲಿ ಶಿವಯೋಗಿ ಸಿದ್ದರಾಮೇಶ್ವರ ಕೊಡುಗೆ ಅಪಾರವಾಗಿದೆ.

ರಾಯಚೂರು: ಆಧ್ಯಾತ್ಮಿಕ ಚಿಂತನೆಗಳಿಂದ ಸಮ ಸಮಾಜ ಕಟ್ಟುವಲ್ಲಿ ಶಿವಯೋಗಿ ಸಿದ್ದರಾಮೇಶ್ವರ ಕೊಡುಗೆ ಅಪಾರವಾದದ್ದು ಎಂದು ತಹಸೀಲ್ದಾರ್‌ ಸುರೇಶ ವರ್ಮಾ ಅಭಿಪ್ರಾಯಪಟ್ಟರು.

ಸ್ಥಳೀಯ ಕನ್ನಡ ಭವನದಲ್ಲಿ ಜಿಲ್ಲಾಡಳಿತ, ಜಿಪಂ, ನಗರಸಭೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆವತಿಯಿಂದ ಹಮ್ಮಿಕೊಂಡಿದ್ದ ಶಿವಯೋಗಿ ಸಿದ್ದರಾಮೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

12ನೇ ಶತಮಾನದ ರಾಜರ ಆಡಳಿತ ವ್ಯವಸ್ಥೆಯಲ್ಲಿ ಸಮಸಮಾಜವನ್ನು ಕಟ್ಟುವ, ಸುಧಾರಿಸುವಲ್ಲಿ ಮತ್ತು ಕಾಯಕ ನಿಷ್ಠೆಯ ಬಗ್ಗೆ ಸಮಾಜಕ್ಕೆ ಉತ್ತಮ ಸಂದೇಶ ನೀಡಿ ಜಾತಿ ಭೇದಗಳೆನ್ನದೇ ಎಲ್ಲರೂ ಸಮಾನರು ಎಂಬ ಸಂದೇಶವನ್ನು ನೀಡದವರು ಸಿದ್ದರಾಮೇಶ್ವರರು ಅವರ ತತ್ವಾದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ನೀಡಿದಾಗ ಮಾತ್ರ ಅವರು ಸುಂದರ ಭವಿಷ್ಯವನ್ನು ಕಾಣಲು ಸಾಧ್ಯವಾಗುತ್ತದೆ ಜೊತೆಗೆ ಬದಲಾವಣೆಯೂ ಸಾಧ್ಯ ಆದ್ದರಿಂದ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ಒದಗಿಸಿಕೊಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿರುತ್ತದೆ ಎಂದು ಹೇಳಿದರು.

ಇದೇ ವೇಳೆ ತುರಕನಡೋಣ ಶಿಕ್ಷಕ ಆಂಜಿನೇಯ್ಯ ಉಪನ್ಯಾಸ ನೀಡಿ ಭಾರತ ದೇಶ ಶರಣರು, ಸಂತರು, ತತ್ವಜ್ಞಾನಿಗಳು, ಚಿಂತಕರು ಹಾಗೂ ಋಷಿಮುನಿಗಳು ಹುಟ್ಟಿದ ಪುಣ್ಯಭೂಮಿಯಾಗಿದ್ದು, ಇಂತಹ ನಾಡಿನಲ್ಲಿ ಸಿದ್ದರಾಮೇಶ್ವರರು ಜನಿಸಿ ಸಮಾಜಕ್ಕೆ ಉತ್ತಮ ಮಾರ್ಗ ಹಾಕಿಕೊಟ್ಟಿದ್ದಾರೆ ಎಂದರು.

ಬಾಲ್ಯದಿಂದಲೂ ದೈವತ್ವದ ಮಾರ್ಗದಲ್ಲಿ ನಡೆದಿದ್ದ ಸಿದ್ದರಾಮೇಶ್ವರರು, ಬಾಲ್ಯದಿಂದಲೇ ಉತ್ತಮ ಜ್ಞಾನವನ್ನು ಪಡೆದು ನಾಡಿಗೆ ಹೆಸರುವಾಸಿಯಾದವರಾಗಿದ್ದು, ಸಿದ್ದರಾಮೇಶ್ವರರಂತೆ ಜ್ಞಾನಿಯಾಗಲು ಮಕ್ಕಳಿಗೆ ಉತ್ತಮ ಜ್ಞಾನದ ಅವಶ್ಯಕತೆಯಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ನಗರಸಭೆ ಪೌರಾಯುಕ್ತ ಗುರುಸಿದ್ದಯ್ಯ, ಸಮಾಜದ ಮುಖಂಡರಾದ ಅಲ್ಕೂರ ರಾಮು,ಹನುಮಂತಪ್ಪ, ಶಶಿಕಲಾ ಭೀಮರಾಯ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಸಿದ್ದರಾಮೇಶ್ವರ ಭಾವಚಿತ್ರ ಮೆರವಣಿಗೆ: ಶಿವಯೋಗಿ ಸಿದ್ದರಾಮೇಶ್ವರ ಜಯಂತಿಯಂಗವಾಗಿ ನಗರದ ಶಿವಯೋಗಿ ಸಿದ್ದರಾಮೇಶ್ವರ ಪ್ರತಿಮೆಗೆ ಪೂಜೆ ಸಲ್ಲಿಸಿ ನಂತರ ಸಿದ್ದರಾಮೇಶ್ವರ ವೃತ್ತದಿಂದ ಕನ್ನಡ ಭವನದವರೆಗೆ ಕಲಾತಂಡಗಳೊಂದಿಗೆ ಶಿವಯೋಗಿ ಸಿದ್ದರಾಮೇಶ್ವರರ ಭಾವಚಿತ್ರ ಮೆರವಣ ಗೆ ಮಾಡಲಾಯಿತು. ಈ ಸಂದರ್ಭದಲ್ಲಿ ಸಚಿವ ಎನ್.ಎಸ್ ಬೋಸರಾಜು, ನಗರ ಶಾಸಕ ಡಾ.ಶಿವರಾಜ ಪಾಟೀಲ್, ಗ್ರಾಮೀಣ ಶಾಸಕ ಬಸನಗೌಡ ದದ್ದಲ್, ಸಹಾಯಕ ಆಯುಕ್ತೆ ಮಹಿಬೂಬಿ, ತಹಶೀಲ್ದಾರ ಸುರೇಶ ವರ್ಮಾ, ನಗರಸಭೆ ಪೌರಾಯುಕ್ತ ಗುರುಸಿದ್ದಯ್ಯ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಾತಿಗಳಲ್ಲಿ ಮೇಲು ಕೀಳು ಎಂಬುವುದಿಲ್ಲ
ಗೃಹ ರಕ್ಷಕರಿಗೆ ಪೂರ್ಣಾವಧಿ ಕರ್ತವ್ಯ ನೀಡಿ