ಶ್ರೀರಂಗಪಟ್ಟಣದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಮೌನ ಮೆರವಣಿಗೆ

KannadaprabhaNewsNetwork |  
Published : Aug 15, 2025, 01:00 AM IST
14ಕೆಎಂಎನ್ ಡಿ29 | Kannada Prabha

ಸಾರಾಂಶ

ಸ್ವಾತಂತ್ರ್ಯ ದಿನಾಚರಣೆಗೂ ಮುನ್ನ ವಿಭಜನಾ ಭಯಾನಕ ಸ್ಮರಣಾರ್ಥ ದಿನ ಅಥವಾ ವಿಭಜನ್ ವಿಭಷಣ್ ಸ್ಮೃತಿ ದಿವಸ್ ಅನ್ನು ಮೌನ ಮೆರನಿಗೆ ಮೂಲಕ ಆಚರಿಸಲಾಗುತ್ತಿದೆ. ಆಗಷ್ಟ್ 14ರಂದು ಅಖಂಡ ಭಾರತಕ್ಕೆ ಸ್ವ್ವಾತಂತ್ರ್ಯ ದೊರಕುತ್ತಿದ್ದಂತೆ ದೇಶವನ್ನು ಧರ್ಮದ ಆಧಾರಿತವಾಗಿ ವಿಭಜನೆಗೊಳಿಸಲಾಯಿತು.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

1947ರ ವಿಭಜನೆ ಸಮಯದಲ್ಲಿ ಜೀವ ಕಳೆದುಕೊಂಡವರಿಗೆ ಹಾಗೂ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಬಲಿ ದಾನಗೊಂಡವರಿಗೆ ಗೌರವ ಸಲ್ಲಿಸಲು ಗುರುವಾರ ತಾಲೂಕು ಬಿಜೆಪಿ ಕಾರ್ಯಕರ್ತರು ಮೌನ ಮೆರವಣಿಗೆ ನಡೆಸಿದರು.

ಪಟ್ಟಣದ ಕುವೆಂಪು ವೃತ್ತದಲ್ಲಿ ಬಿಜೆಪಿ ತಾಲೂಕು ಅಧ್ಯಕ್ಷ ಪೀಹಳ್ಳಿ ರಮೇಶ್ ನೇತೃತ್ವದಲ್ಲಿ ಮುಖಂಡರು ಹಾಗೂ ಕಾರ್ಯಕರ್ತರು ಜಮಾವಣೆಗೊಂಡು ಬ್ಯಾನರ್ ಹಿಡಿದು ಮೌನ ಮೆರವಣಿಗೆ ನಡೆಸಿ ಸ್ವಾತಂತ್ರ್ಯ ಹೋರಾಟ ಗಾರರನ್ನು ಸ್ಮರಿಸಿದರು.

ನಂತರ ಬಿಜೆಪಿ ಅಧ್ಯಕ್ಷ ರಮೇಶ್ ಪೀಹಳ್ಳಿ ಮಾತನಾಡಿ, ಸ್ವಾತಂತ್ರ್ಯ ದಿನಾಚರಣೆಗೂ ಮುನ್ನ ವಿಭಜನಾ ಭಯಾನಕ ಸ್ಮರಣಾರ್ಥ ದಿನ ಅಥವಾ ವಿಭಜನ್ ವಿಭಷಣ್ ಸ್ಮೃತಿ ದಿವಸ್ ಅನ್ನು ಮೌನ ಮೆರನಿಗೆ ಮೂಲಕ ಆಚರಿಸಲಾಗುತ್ತಿದೆ. ಆಗಷ್ಟ್ 14ರಂದು ಅಖಂಡ ಭಾರತಕ್ಕೆ ಸ್ವ್ವಾತಂತ್ರ್ಯ ದೊರಕುತ್ತಿದ್ದಂತೆ ದೇಶವನ್ನು ಧರ್ಮದ ಆಧಾರಿತವಾಗಿ ವಿಭಜನೆಗೊಳಿಸಲಾಯಿತು.

ಇಲ್ಲಿನ ಮುಸ್ಲೀಮರನ್ನು ಪಾಕಿಸ್ಥಾನಕ್ಕೆ ಹಾಗೂ ಪಾಕಿಸ್ಥಾನದಲ್ಲಿದ್ದ ಹಿಂದುಗಳನ್ನು ರೈಲಿನ ಮೂಲಕ ಭಾರತಕ್ಕೆ ಕಳುಹಿಸಿಕೊಡವ ವೇಳೆ ಅವರನ್ನು ಕಗ್ಗೊಲೆ ಮಾಡಿ ಶವಗಳನ್ನು ತುಂಬಿ ಕಳುಹಿಸಲಾಯಿತು. ದೇಶಕ್ಕಾಗಿ ಹೋರಾಟ ಮಾಡಿದ ಆ ದಿನ ನಡೆದ ಘಟನೆಯಲ್ಲಿ ಮೃತರಾದ ನಮ್ಮ ದೇಶದ ಹಿಂದುಗಳನ್ನು ಸ್ಮರಿಸುವ ದಿನವಾಗಿತ್ತು. ದೇಶದೆಲ್ಲಡೆ ಈ ದಿನವನ್ನು ಬಿಜೆಪಿ ಮೌನಾಚರಣೆ ಮಾಡುವ ಮೂಲಕ ಅವರೆಲ್ಲರನ್ನು ಸ್ಮರಿಸುತ್ತಿದೆ ಎಂದರು.

ಇದೇ ವೇಳೆ ತಾಲೂಕಿನ ಕುಡಲಕುಪ್ಪೆ ಗ್ರಾಮದ ಯೋಧ ಮಧುಚಂದ್ರ ಅವರನ್ನು ಅಭಿನಂದಿಸಿ, ಗೌರವಿಸಲಾಯಿತು. ಬಿಜೆಪಿ ಮುಖಂಡ ಇಂಡವಾಳು ಸಚ್ಚಿದಾನಂದ, ರಾಜ್ಯ ಬಿಜೆಪಿ ರೈತ ಮೋರ್ಚ ಉಪಾಧ್ಯಕ್ಷ ಕೆ.ಎಸ್ ನಂಜುಂಡೇಗೌಡ, ಬಲ್ಲೇನಹಳ್ಳಿ ಕೃಷ್ಣೇಗೌಡ, ಬಿ.ಸಿ.ಸಂತೋಷ್ ಕುಮಾರ್, ಉಮೇಶ್ ಕುಮಾರ್, ಪುಟ್ಟರಾಮು, ಪ್ರಭಾಕರ್, ಹೇಮಂತ್ ಕುಮರ್, ಪುರಸಭೆ ಸದಸ್ಯ ಕೃಷ್ಣಪ್ಪ, ಗಂಜಾಂ ಶಿವು, ಅಭಿ, ಸುಧಾಕರ್, ಜಗದೀಶ್, ಮಹಿಳಾ ಘಟಕದ ಮಾನಸಾ, ಚಾಯಾದೇವಿ ಸೇರಿದಂತೆ ಇತರ ಮುಖಂಡರು ಹಾಗೂ ಕಾರ್ಯಕರ್ತರು ಉಪಸಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹುಣಸೆ, ಹಲಸು, ನೇರಳೆಗೆ ಮಂಡಳಿ ರಚಿಸಿ: ದೇವೇಗೌಡ
ಗುಮ್ಮ ಬಂದ ಗುಮ್ಮ, ಮಕ್ಕಳಿಗೆ ಹೊಡೆಯೋ ಗುಮ್ಮ!