ರಜತ ಮಹೋತ್ಸವ ಕಾರ್ಯ ಚಟುವಟಿಕೆಗೆ ಇಂದು ಚಾಲನೆ

KannadaprabhaNewsNetwork | Published : May 6, 2025 12:23 AM

ಸಾರಾಂಶ

ಬೀಳಗಿಇಲ್ಲಿನ ಬೀಳಗಿ ಪಟ್ಟಣ ಸಹಕಾರಿ ಬ್ಯಾಂಕಿನ ರಜತ ಮಹೋತ್ಸವ ಕಾರ್ಯ ಚಟುವಟಿಕೆಗಳ ಉದ್ಘಾಟನಾ ಸಮಾರಂಭ ಹಾಗೂ ಬಸವ ಜಯಂತ್ಯುತ್ಸವ, ವಿಶೇಷ ಉಪನ್ಯಾಸ ಮತ್ತು ಬಹುಮಾನ ವಿತರಣೆ ಸಮಾರಂಭ ಮೇ 6ರಂದು ಬೆಳಗ್ಗೆ 11ಗಂಟೆಗೆ ಪಟ್ಟಣ ಸಹಕಾರಿ ಬ್ಯಾಂಕಿನ ಸಭಾಭವನದಲ್ಲಿ ಆಯೋಜಿಸಲಾಗಿದೆ ಎಂದು ಬೀಳಗಿ ಪಟ್ಟಣ ಸಹಕಾರ ಬ್ಯಾಂಕಿನ ಅಧ್ಯಕ್ಷರು, ಮಾಜಿ ಸಚಿವ ಎಸ್.ಆರ್. ಪಾಟೀಲ ತಿಳಿಸಿದರು.

ಕನ್ನಡಪ್ರಭ ವಾರ್ತೆ ಬೀಳಗಿ

ಇಲ್ಲಿನ ಬೀಳಗಿ ಪಟ್ಟಣ ಸಹಕಾರಿ ಬ್ಯಾಂಕಿನ ರಜತ ಮಹೋತ್ಸವ ಕಾರ್ಯ ಚಟುವಟಿಕೆಗಳ ಉದ್ಘಾಟನಾ ಸಮಾರಂಭ ಹಾಗೂ ಬಸವ ಜಯಂತ್ಯುತ್ಸವ, ವಿಶೇಷ ಉಪನ್ಯಾಸ ಮತ್ತು ಬಹುಮಾನ ವಿತರಣೆ ಸಮಾರಂಭ ಮೇ 6ರಂದು ಬೆಳಗ್ಗೆ 11ಗಂಟೆಗೆ ಪಟ್ಟಣ ಸಹಕಾರಿ ಬ್ಯಾಂಕಿನ ಸಭಾಭವನದಲ್ಲಿ ಆಯೋಜಿಸಲಾಗಿದೆ ಎಂದು ಬೀಳಗಿ ಪಟ್ಟಣ ಸಹಕಾರ ಬ್ಯಾಂಕಿನ ಅಧ್ಯಕ್ಷರು, ಮಾಜಿ ಸಚಿವ ಎಸ್.ಆರ್. ಪಾಟೀಲ ತಿಳಿಸಿದರು.

ಬ್ಯಾಂಕಿನ ಮುಖ್ಯ ಕಚೇರಿಯ ಸಭಾಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೀಳಗಿ ಪಟ್ಟಣದಲ್ಲಿ 1997ರಲ್ಲಿ ವಿಜಯಪುರ ಜ್ಞಾನಯೋಗಾಶ್ರಮ ಸಿದ್ದೇಶ್ವರ ಶ್ರೀಗಳ ಅಮೃತ ಹಸ್ತದಿಂದ ಉದ್ಘಾಟನೆಗೊಂಡಿರುವ ಬ್ಯಾಂಕ್‌ ಈಗ ರಜತ ಮಹೋತ್ಸವ ಆಚರಿಸಿಕೊಳ್ಳುತ್ತಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಬ್ಯಾಂಕಿನ ಉಪಾಧ್ಯಕ್ಷ ಸತ್ಯಪ್ಪ ಮೇಲ್ನಾಡ, ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ಎಲ್.ಬಿ. ಕುರ್ತಕೋಟಿ, ನಿರ್ದೇಶಕರಾದ ಹೇಮಾದ್ರಿ ಕೊಪ್ಪಳ, ಕೆ.ಎಸ್.ಪತ್ರಿ, ಎ.ಎಚ್. ಬೀಳಗಿ,ಬಿ.ಎಸ್ .ಮೊಖಾಶಿ, ಶಾಹೀರ್‌ ಬೀಳಗಿ ಸೇರಿದಂತೆ ಇತರರು ಇದ್ದರು.

ಈ ವೇಳೆ ಎಸ್ಸೆಸ್ಸೆಲ್ಸಿಯಲ್ಲಿ ರಾಜ್ಯಕ್ಕೆ ಎರಡನೇ ರ್‍ಯಾಂಕ್ ಪಡೆದ ಶಫಾ ನಿಂಬಾಳ್ಕರ್‌ಗೆ ಎಸ್.ಆರ್. ಪಾಟೀಲ ಅವರು ಸನ್ಮಾನಿಸಿದರು. ವಿದ್ಯಾರ್ಥಿನಿಯ ಮುಂದಿನ ಶಿಕ್ಷಣಕ್ಕೆ ಎಸ್.ಆರ್. ಪಾಟೀಲ್ ಶಿಕ್ಷಣ ಪ್ರತಿಷ್ಠಾನದಲ್ಲಿ ಉಚಿತ ಪ್ರವೇಶ ನೀಡಿ, ವಿದ್ಯಾರ್ಥಿನಿಗೆ ಊಟ, ವಸತಿ ವ್ಯವಸ್ಥೆ ಸೇರಿ ಸಂಸ್ಥೆಯ ಪರವಾಗಿ ಎಲ್ಲ ಸಹಕಾರ ನೀಡಲಾಗುವುದು ಎಂದರು, ಪ್ರಾಚಾರ್ಯ ಶಿವಬೋದ ಶೆಟ್ಟಿ, ವಿದ್ಯಾರ್ಥಿನಿ ಪಾಲಕರಾದ ಡಾ ಶಾರೀಕ್‌ ಅಹ್ಮದ್ ನಿಂಬಾಳ್ಕರ್ ಇದ್ದರು.

--- ಬಾಕ್ಸ್---

ಇಂದು ಚಾಲನೆ

ರಜತ ಮಹೋತ್ಸವ ನಿಮಿತ್ತ 25 ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದ್ದು, ಸಾಹಿತ್ಯ, ಕಲೆ, ಕ್ರೀಡೆ, ಮೂಢನಂಬಿಕೆ ಹೊಗಲಾಡಿಸುವ ಕುರಿತು, ಕೃಷಿ, ಸಹಕಾರ ಕ್ಷೇತ್ರದ ಕುರಿತು ವಿಶೇಷ ಉಪನ್ಯಾಸ ಹಮ್ಮಿಕೊಳ್ಳಲಾಗಿದೆ. ಮಂಗಳವಾರ ಗದಗ-ಡಂಬಳದ ಎಡೆಯೂರ ತೋಂಟದಾರ್ಯ ಸಂಸ್ಥಾನ ಮಠದ ಡಾ.ತೋಂಟದ ಸಿದ್ದರಾಮ ಸ್ವಾಮೀಜಿ ಚಾಲನೆ ನೀಡಲಿದ್ದು,. ಬೀಳಗಿ ಪಟ್ಟಣ ಸಹಕಾರಿ ಬ್ಯಾಂಕಿನ ಅಧ್ಯಕ್ಷ,ಮಾಜಿ ಸಚಿವ ಎಸ್.ಆರ್. ಪಾಟೀಲ ಅಧ್ಯಕ್ಷತೆ ವಹಿಸುವರು. ಬಾದಾಮಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಡಾ.ಚಂದ್ರಶೇಖರ ಹೆಗಡೆ ವಿಶೇಷ ಉಪನ್ಯಾಸ ನೀಡುವರು.ಪಟ್ಟಣ ಸಹಕಾರಿ ಬ್ಯಾಂಕಿನ ಉಪಾಧ್ಯಕ್ಷ ಸತ್ಯಪ್ಪ ಮೆಲ್ನಾಡ, ಬೀಳಗಿ ಬಸವ ಬಳಗದ ಅಧ್ಯಕ್ಷ ಶಿವಾನಂದ ಸಾರಾವರಿ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.

Share this article