ನರಸೀಪುರ ಪಿಡಿಒ ಉಮಾಶಂಕರ್ ಗೆ ಬೆಳ್ಳಿ ಪದಕ

KannadaprabhaNewsNetwork |  
Published : Nov 03, 2023, 12:30 AM IST
ಫೋಟೋ 4 : ಸರ್ಕಾರಿ ನೌಕರರ ಕ್ರೀಡಾಕೂಟದಲ್ಲಿ ಎರಡನೇ ಸ್ಥಾನ ಪಡೆದು, ಬೆಳ್ಳಿ ಪದಕ ವಿಜೇತರಾದ ಪಿಡಿಓ ಉಮಾಶಂಕರ್‌ಗೆ, ಪ್ರಶಸ್ತಿ ಪತ್ರ, ಪದಕ ನೀಡಿ ಗೌರವಿಸುತ್ತಿರುವುದು. | Kannada Prabha

ಸಾರಾಂಶ

ದಾಬಸ್‌ಪೇಟೆ: ಸೋಂಪುರ ಹೋಬಳಿಯ ನರಸೀಪುರ ಗ್ರಾಪಂ ಪಿಡಿಒ ಉಮಾಶಂಕರ್, ರಾಜ್ಯ ಮಟ್ಟದ ಸರ್ಕಾರಿ ನೌಕರರ ಕ್ರೀಡಾ ಹಾಗೂ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗಳಿಸಿದ್ದಾರೆ.

ದಾಬಸ್‌ಪೇಟೆ: ಸೋಂಪುರ ಹೋಬಳಿಯ ನರಸೀಪುರ ಗ್ರಾಪಂ ಪಿಡಿಒ ಉಮಾಶಂಕರ್, ರಾಜ್ಯ ಮಟ್ಟದ ಸರ್ಕಾರಿ ನೌಕರರ ಕ್ರೀಡಾ ಹಾಗೂ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗಳಿಸಿದ್ದಾರೆ. ವೈಟ್ ಲಿಫ್ಟಿಂಗ್ ಹಾಗೂ ಡಿಸ್ಕಸ್ ಎಸೆತದಲ್ಲಿ 2ನೇ ಸ್ಥಾನ ಪಡೆದು ಬೆಳ್ಳಿ ಪದಕ ಗಳಿಸಿದ್ದಾರೆ. ಭಾರ ಎತ್ತುವ ಸ್ಪರ್ಧೆ (ವೆಯಿಟ್ ಲಿಫ್ಟಿಂಗ್) ಯಲ್ಲಿ 130 ಕೆ.ಜಿ. ಭಾರ ಎತ್ತಿದ್ದಾರೆ. 31 ಮೀ. ಡಿಸ್ಕಸ್ ಥ್ರೋ ಎಸೆದಿದ್ದಾರೆ. ತುಮಕೂರಿನ ವಿಶ್ವವಿದ್ಯಾಲಯದ, ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಅಡಿಯಲ್ಲಿ ರಾಜ್ಯ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ ಆಯೋಜಿಸಿದ್ದರು. ಪಿಡಿಒ ಉಮಾಶಂಕರ್ ಮಾತನಾಡಿ, ಬೆಂ ಗ್ರಾ ಜಿಲ್ಲೆಗೆ ಚೆಸ್ ಆಟ ಬಿಟ್ಟರೇ, ಈ ಎರಡು ಪ್ರಶಸ್ತಿ ಗರಿ ನನಗೆ ಬಂದಿರುವುದು ಸಂತಸವಾಗಿದೆ, ಜೊತೆಗೆ ಸತತ 4 ವರ್ಷಗಳಿಂದ ನೌಕರರ ಕ್ರೀಡಾಕೂಟದಲ್ಲಿ, ವೈಯಿಟ್ ಲಿಫ್ಟಿಂಗ್ ಮತ್ತು ಡಿಸ್ಕಸ್ ಥ್ರೋನಲ್ಲಿ ವೈಯಕ್ತಿಕ ವಿಭಾಗದಲ್ಲಿ ಪ್ರಶಸ್ತಿ ಲಭಿಸಿದೆ. ಮುಂದಿನ ದಿನಗಳಲ್ಲಿ ಈ ಸಾಧನೆ ಮುಂದುವರೆಸಿ, ಮುಂದಿನ ವಿಭಾಗಕ್ಕೆ ತೆರಳಲು ಕಠಿಣ ಅಭ್ಯಾಸ ನಡೆಸುತ್ತೇನೆ ಎಂದರು. ಉಮಾಶಂಕರ್ ಸಾಧನೆಗೆ ತಾಲೂಕು ಪಂಚಾಯತಿ ಇಒ ಮಧು, ನೆ.ತಾ. ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ವಾಸುದೇವಮೂರ್ತಿ, ನರಸೀಪುರ ಗ್ರಾಪಂ ಅಧ್ಯಕ್ಷ ರಾಮಾಂಜಿನಯ್ಯ, ಉಪಾಧ್ಯಕ್ಷೆ ಮತ್ತು ಎಲ್ಲಾ ಸದಸ್ಯರು ಹಾಗೂ ಪಂಚಾಯತಿ ಸಿಬ್ಬಂದಿ ಅಭಿನಂದಿಸಿದ್ದಾರೆ. ಫೋಟೋ 4 : ಸರ್ಕಾರಿ ನೌಕರರ ಕ್ರೀಡಾಕೂಟದಲ್ಲಿ ಎರಡನೇ ಸ್ಥಾನ ಪಡೆದಿರುವ ಪಿಡಿಒ ಉಮಾಶಂಕರ್‌ಗೆ ಬೆಳ್ಳಿ ಪದಕ ಪ್ರದಾನ ಮಾಡಲಾಯಿತು.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ