ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆಶಾಸಕನಾಗಿರುವ ಕೊನೆಯ ದಿನದವರೆಗೂ ನನ್ನ ತಾಲೂಕಿನ ಅಭಿವೃದ್ಧಿಗಾಗಿ ಅನುದಾನ ತಂದು ತಾಲೂಕಿನ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಶಾಸಕ ಎಚ್.ಟಿ.ಮಂಜು ತಿಳಿಸಿದರು.
ವಿರೋಧ ಪಕ್ಷದ ಶಾಸಕನಾಗಿದ್ದರೂ ತಾಲೂಕಿನ ಅಭಿವೃದ್ಧಿಗೆ ಎಲ್ಲಾ ಸಚಿವರ ಬಳಿ ತೆರಳಿ ಅಭಿವೃದ್ಧಿಗೆ ಅಗತ್ಯ ಅನುದಾನ ನೀಡುವಂತೆ ಹತ್ತಾರು ಬಾರಿ ಮನವಿ ಸಲ್ಲಿಸಿದ್ದೇನೆ. ಅದೇ ರೀತಿ ತಾಲೂಕಿನ ಜ್ವಲಂತ ಸಮಸ್ಯೆಗಳ ಬಗ್ಗೆ ತಿಳಿಸಿ ಅನುದಾನ ನೀಡುವಂತೆ ಕೋರಿದ್ದೇನೆ. ಅಲ್ಲದೇ, ಇನ್ನೂ ಎರಡು ಕಾಲು ವರ್ಷ ಮುಖ್ಯಮಂತ್ರಿಗಳಿಗೂ ಸಮಯವಿದೆ. ಅನುದಾನಕ್ಕಾಗಿ ಸಚಿವರ ಮನವೊಲಿಸುವ ಕೆಲಸವನ್ನು ಕೊನೆಯವರೆಗೂ ಮಾಡುತ್ತೇನೆ. ಈಗ ಲಭ್ಯವಾದ ಅನುದಾನವನ್ನು ತಾಲೂಕಿನ ಎಲ್ಲಾ ಗ್ರಾಮಗಳಿಗೂ ಸಿಗುವಂತೆ ನೋಡಿಕೊಂಡಿದ್ದೇನೆ. ನನಗೆ ಎಲ್ಲಾ ಗ್ರಾಮಗಳೂ ಚಿರಪರಿಚಿತವಾಗಿದ್ದು ಯಾವುದೇ ಗ್ರಾಮಗಳನ್ನೂ ಸಹ ಕಡೆಗಣಿಸುವುದಿಲ್ಲ ಎಂದರು.
ಟಿಎಪಿಸಿಎಂಎಸ್ ನಿರ್ದೇಶಕ ಮಲ್ಲೇನಹಳ್ಳಿ ಮೋಹನ್,ನಾಗರಘಟ್ಟ ದಿಲೀಪ್ ಕುಮಾರ್, ಗ್ರಾಪಂ ಮಾಜಿ ಸದಸ್ಯರುಗಳು, ಗ್ರಾಮದ ಮುಖಂಡರು ಸಾರ್ವಜನಿಕರು ಸೇರಿದಂತೆ ಹಲವರು ಹಾಜರಿದ್ದರು.ಶಾಲಾ ವಿದ್ಯಾರ್ಥಿಗಳಿಗೆ ಕ್ರೀಡಾ ಸಾಮಗ್ರಿಗಳ ವಿತರಣೆ
ತಾಲೂಕಿನ ಬೆಸಗರಹಳ್ಳಿಯಲ್ಲಿ ಕೆಂಪುಗೌಡ, ಚನ್ನೇಗೌಡ ರಾಷ್ಟ್ರೀಯ ವಿದ್ಯಾನಿಲಯದ ಅಧ್ಯಕ್ಷ ಬಿ.ಸಿ.ನಾರಾಯಣಸ್ವಾಮಿ ಅವರ ಪ್ರಥಮ ವರ್ಷದ ಪುಣ್ಯ ಸ್ಮರಣೆ ಅಂಗವಾಗಿ ಶನಿವಾರ ಸಾಮಾಜಿಕ ಸೇವಾ ಸಂಸ್ಥೆಗಳ ವತಿಯಿಂದ ವಿವಿಧ ಸೇವಾ ಕಾರ್ಯಗಳು ಹಮ್ಮಿಕೊಳ್ಳಲಾಗಿತ್ತು.
ಸಂಸ್ಥೆಯ ಅಧ್ಯಕ್ಷ ಪಿ.ಹೊನ್ನರಾಜು ಲಯನ್ಸ್ ಸಂಸ್ಥೆ ತನ್ನ ಸಾಮಾಜಿಕ ಸೇವಾಕಾರ್ಯದ ಅಂಗವಾಗಿ ಮಕ್ಕಳ ಶೈಕ್ಷಣಿಕ ಚಟುವಟಿಕೆ ಜೊತೆಗೆ ಕ್ರೀಡೆಗೂ ಪ್ರೋತ್ಸಾಹ ನೀಡಬೇಕೆಂಬ ಉದ್ದೇಶದಿಂದ ಆಯ್ದಶಿಕ್ಷಣ ಸಂಸ್ಥೆಗಳನ್ನು ಗುರುತಿಸಿ ಕ್ರೀಡಾ ಸಾಮಗ್ರಿಗಳನ್ನು ವಿತರಣೆ ಮಾಡಲಾಗುತ್ತಿದೆ ಎಂದರು. ಇದೇ ಸಂದರ್ಭದಲ್ಲಿ ಪರಿಸರ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಮಂಗಲ ಯೋಗೇಶ್, ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕ ಎಂ. ಕೆ .ಹರೀಶ್ ಬಾಬು ಅವರುಗಳನ್ನು ಸನ್ಮಾನಿಸಲಾಯಿತು. ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಚೇತನ್ ಕೃಷ್ಣ, ಸಹ ಕಾರ್ಯದರ್ಶಿ ಎ ಟಿ ರಾಮೇಗೌಡ, ಮುಖಂಡರಾದ ಶ್ರೀಧರ್, ಗೋವರ್ಧನ್, ಮಾನಸ ಚೇತನ್ ಮತ್ತಿತರರಿದ್ದರು.