ಸಿಂಧು ಗುರಜನ್‌ಗೆ ತುಳು ಪಾಡ್ದನ ಪ್ರಶಸ್ತಿ

KannadaprabhaNewsNetwork |  
Published : Apr 18, 2026, 02:30 AM IST
ಜನಪದ ಕಲಾವಿದೆ ಸಿಂಧು ಗುಜರನ್ ಅವರಿಗೆ ಪಾಡ್ದನ ಪ್ರಶಸ್ತಿನೀಡಿ ಗೌರವಿಸಲಾಯಿತು | Kannada Prabha

ಸಾರಾಂಶ

ಕರ್ನಾಟಕ ರಾಜ್ಯೋತ್ಸವ ಮತ್ತು ಜನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತೆ ಪಾಡ್ದನ ಗಾಯಕಿ ಸಿಂಧು ಗುಜರನ್ ಮೂಲ್ಕಿ ಅವರಿಗೆ 10 ಸಾವಿರ ರು. ನಗದು, ಅಕ್ಕಿ ಮುಡಿ ಸಹಿತ ಪಾಡ್ದನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಉಡುಪಿ: ತುಳುನಾಡು ದೈವಾರಾಧನೆ, ನಾಗಾರಾಧನೆಯ ಮೂಲ ನೆಲೆಯಾಗಿದ್ದು, ನಮ್ಮ ಮಣ್ಣಿನ ಮೂಲ ಸಂಸ್ಕೃತಿ ತಿಳಿದುಕೊಳ್ಳಬೇಕಾದರೆ ತುಳು ಪಾಡ್ದನಗಳನ್ನು ಅಧ್ಯಯನ ಮಾಡಬೇಕು. ಜನಪದರಿಂದ ಬಾಯ್ದೆರೆಯಾಗಿ ಬಂದಿರುವ ಪಾಡ್ದನಗಳು ತುಳುವರ ಮಹಾಕಾವ್ಯಗಳಾಗಿವೆ ಎಂದು ನ್ಯಾಯವಾದಿ ಎಂ.ಶಾಂತಾರಾಮ್ ಶೆಟ್ಟಿ ಹೇಳಿದ್ದಾರೆ.

ಅವರು ಇಲ್ಲಿನ ದೆಂದೂರಿನ ಕೊಲ್ಲುಕೃಷ್ಣ ಶೆಟ್ಟಿ ಫೌಂಡೇಶನ್ ವತಿಯಿಂದ ನಡೆದ ತುಳು ಪಾಡ್ದನ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಇದೇ ವೇಳೆ ಕರ್ನಾಟಕ ರಾಜ್ಯೋತ್ಸವ ಮತ್ತು ಜನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತೆ ಪಾಡ್ದನ ಗಾಯಕಿ ಸಿಂಧು ಗುಜರನ್ ಮೂಲ್ಕಿ ಅವರಿಗೆ 10 ಸಾವಿರ ರು. ನಗದು, ಅಕ್ಕಿ ಮುಡಿ ಸಹಿತ ಪಾಡ್ದನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.ಸಮಾರಂಭದ ಅಧ್ಯಕ್ಷತೆ ಹಿಸಿದ್ದ ಉಡುಪಿ ತುಳುಕೂಟದ ಅಧ್ಯಕ್ಷ ಬಿ. ಜಯಕರ ಶೆಟ್ಟಿ ಇಂದ್ರಾಳಿ ಅವರು ದೆಂದೂರು ದಯಾನಂದ ಕೆ ಶೆಟ್ಟಿ ಅವರು ಬರೆದಿರುವ ‘ಬನ್ನಂಜೆ ಕಲ್ಕುಡ’ ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡಿ, ಕಳೆದ 5 ವರ್ಷಗಳಿಂದ ಹಿರಿಯ ಜನಪದ ಸಾಧಕರನ್ನು ಗುರುತಿಸಿ ಪಾಡ್ದನ ಪುರಸ್ಕಾರ ನೀಡುವ ಕೊಲ್ಲುಕೃಷ್ಣ ಶೆಟ್ಟಿ ಫೌಂಡೇಶನ್ ಇತರರಿಗೆ ಮಾದರಿಯೆನಿಸಿದೆ ಎಂದರು.

ಹೃದಯಂ ಫೌಂಡೇಶನ್ ಮುಖ್ಯಸ್ಥ, ಉದ್ಯಮಿ ಸುಭಾಷ್ ಸಾಲಿಯಾನ್, ಹೊಟೇಲ್ ಉದ್ಯಮಿ ಚೇತನ್ ಕುಮಾರ್ ಶೆಟ್ಟಿ, ಜಯಂಟ್ಸ್ ಸಂಸ್ಥೆಯ ಕೇಂದ್ರೀಯ ಸಮಿತಿ ಸದಸ್ಯ ದಿನಕರ್ ಅಮೀನ್, ಕೊಲ್ಲುಕೃಷ್ಣ ಶೆಟ್ಟಿ ಫೌಂಡೇಶನ್ ಗೌರವಾಧ್ಯಕ್ಷೆ ದೀಪಾ ಚೇತನ್‌ಕುಮಾರ್ ಶೆಟ್ಟಿ, ಕಾರ್ಯದರ್ಶಿ ಗುಣವತಿ ದಯಾನಂದ ಶೆಟ್ಟಿ, ಕೋಶಾಧಿಕಾರಿ ಇಶಾನಿ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ಇದೇ ವೇಳೆ ಪಿಯುಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಗಳಿಸಿ ಸಾಧನೆ ಮಾಡಿರುವ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಕೊಲ್ಲುಕೃಷ್ಣ ಶೆಟ್ಟಿ ಫೌಂಡೇಶನ್ ಅಧ್ಯಕ್ಷ ದಯಾನಂದ್ ಕೆ.ಶೆಟ್ಟಿ ದೆಂದೂರು ಸ್ವಾಗತಿಸಿದರು. ಪ್ರಕಾಶ ಸುವರ್ಣ ಕಟಪಾಡಿ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಮ್ಮೆಮಾಡು ಮಖಾಂ ಉರೂಸ್‌ಗೆ ಚಾಲನೆ
ಕಾರು-ಬೈಕ್‌ ಡಿಕ್ಕಿ: ಸವಾರ ಸಾವು