ಕುಂದಾಪುರ ಐಎಂಜೆಎಸ್‌ಸಿ ಕಾಲೇಜಿನಲ್ಲಿ ಸಿಂದೂರ ವಿಜಯಯಾತ್ರೆ

KannadaprabhaNewsNetwork |  
Published : May 25, 2025, 11:56 PM IST
25ವಿಜಯ | Kannada Prabha

ಸಾರಾಂಶ

ಮೂಡ್ಲಕಟ್ಟೆ ಐ. ಎಂ. ಜೆ. ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನಲ್ಲಿ, ಇತ್ತೀಚೆಗೆ ಜಮ್ಮು ಕಾಶ್ಮೀರದ ಪಹಲ್ಗಾವ್‌ನಲ್ಲಿ ನಡದೆ ಅಮಾಯಕ ಪ್ರವಾಸಿಗ ಹತ್ಯೆಯ ವಿರುದ್ಧ ಪಾಕಿಸ್ತಾನದ ಮೇಲೆ ಆಪರೇಷನ್ ಸಿಂದೂರ್ ನಲ್ಲಿ ಭಾರತೀಯ ಸಶಸ್ತ್ರ ಪಡೆಗಳ ಯಶಸ್ಸಿನ ಸಂಭ್ರಮಾಚರಣೆಯಂಗವಾಗಿ ಸಿಂದೂರ ವಿಜಯ ಯಾತ್ರೆಯನ್ನು ಹಮ್ಮಿಕೊಳ್ಳಲಾಯಿತು.

ಕನ್ನಡಪ್ರಭ ವಾರ್ತೆ ಉಡುಪಿ

ಇಲ್ಲಿನ ಮೂಡ್ಲಕಟ್ಟೆ ಐ. ಎಂ. ಜೆ. ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನಲ್ಲಿ, ಇತ್ತೀಚೆಗೆ ಜಮ್ಮು ಕಾಶ್ಮೀರದ ಪಹಲ್ಗಾವ್‌ನಲ್ಲಿ ನಡದೆ ಅಮಾಯಕ ಪ್ರವಾಸಿಗ ಹತ್ಯೆಯ ವಿರುದ್ಧ ಪಾಕಿಸ್ತಾನದ ಮೇಲೆ ಆಪರೇಷನ್ ಸಿಂದೂರ್ ನಲ್ಲಿ ಭಾರತೀಯ ಸಶಸ್ತ್ರ ಪಡೆಗಳ ಯಶಸ್ಸಿನ ಸಂಭ್ರಮಾಚರಣೆಯಂಗವಾಗಿ ಸಿಂದೂರ ವಿಜಯ ಯಾತ್ರೆಯನ್ನು ಹಮ್ಮಿಕೊಳ್ಳಲಾಗಿತ್ತು. ನಮ್ಮ ರಾಷ್ಟ್ರದ ಸಮಗ್ರತೆ ಮತ್ತು ಸಾರ್ವಭೌಮತ್ವವನ್ನು ರಕ್ಷಿಸಿದ ನಮ್ಮ ಸೈನಿಕರ ಶೌರ್ಯ ಮತ್ತು ತ್ಯಾಗಗಳನ್ನು ಗೌರವಿಸುವುದು ಈ ಯಾತ್ರೆಯ ಉದ್ದೇಶವಾಗಿತ್ತು.ಈ ಕಾರ್ಯಕ್ರಮವನ್ನು ಸಂಸ್ಥೆಯ ಅಧ್ಯಕ್ಷರಾದ ಸಿದ್ದಾರ್ಥ್ ಜೆ. ಶೆಟ್ಟಿ ಅವರು ತ್ರಿವರ್ಣ ಧ್ವಜವನ್ನು ವಿದ್ಯಾರ್ಥಿಗಳಿಗೆ ಹಸ್ತಾಂತರಿಸುವ ಮೂಲಕ ಚಾಲನೆ ನೀಡಿದರು. ವಿಜಯ ಯಾತ್ರೆಯಲ್ಲಿ ನೂರಾರು ವಿದ್ಯಾರ್ಥಿಗಳು ರಾಷ್ಟ್ರಭಕ್ತಿಯ ಘೋಷಣೆಗಳನ್ನು ಕೂಗುತ್ತಾ, ಸೈನಿಕರಿಗೆ ವಂದನೆಯನ್ನು ಅರ್ಪಿಸಿದರು.ವಿಜಯ ಯಾತ್ರೆಯು ಐ. ಎಂ. ಜೆ .ಸಂಸ್ಥೆಯ ಆವರಣದಿಂದ ಪ್ರಾರಂಭವಾಗಿ, ಮೂಡ್ಲಕಟ್ಟೆಯ ಐ. ಎಂ ಜಯರಾಮ್ ಶೆಟ್ಟಿ ವೃತ್ತದಲ್ಲಿ ಸಮಾಪ್ತಿಯಾಯಿತು. ಸೈನಿಕರ ಶೌರ್ಯ, ಬಲಿದಾನ, ಮತ್ತು ಕೊಡುಗೆಗಳನ್ನು ಈ ಸಂದರ್ಭದಲ್ಲಿ ಸ್ಮರಿಸಲಾಯಿತು.

ಕಾಲೇಜಿನ ಪ್ರಾಂಶುಪಾಲರಾದ ಡಾ. ಪ್ರತಿಭಾ ಎಂ. ಪಟೇಲ್, ಉಪ ಪ್ರಾಂಶುಪಾಲರಾದ ಜಯಶೀಲ್ ಕುಮಾರ್, ಉಪನ್ಯಾಸಕ ವೃಂದದವರು ಹಾಗೂ ಸಂಸ್ಥೆಯ ಎಲ್ಲಾ ವಿಭಾಗದ ವಿದ್ಯಾರ್ಥಿಗಳು ಈ ದೇಶ ಪ್ರೇಮದ ನಡಿಗೆಯಲ್ಲಿ ಹೆಮ್ಮೆಯಿಂದ ಹೆಜ್ಜೆ ಹಾಕಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೊಳಚೆ ನೀರಲ್ಲಿ ತಟ್ಟೆ ತೊಳೆದ ಪ್ರಕರಣ; ಶಿಕ್ಷಕಿ ಅಮಾನತು
ಅಲೆಮಾರಿ ಜನಾಂಗದವರು ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಲಿ: ಪಲ್ಲವಿ