ವೀರ್ಲಗೊಂದಿಯಲ್ಲಿ ವಿಜೃಂಭಿಸಿದ ಗೀತ ಗಾಯನೋತ್ಸವ

KannadaprabhaNewsNetwork |  
Published : Dec 02, 2025, 01:15 AM IST
ಫೋಟೋ 1ಪಿವಿಡಿ270ನೇ ಕನ್ನಡ ರಾಜ್ಯೋತ್ಸವದ ಪ್ರಯುಕ್ತ,ಶ್ರೀ ಕರಡಿ ಬುಳ್ಳಪ್ಪ ಸಾಂಸ್ಕೃತಿಕ ಸೇವಾ ಟ್ರಸ್ಟ್  ವತಿಯಿಂದ ತಾಲೂಕಿನ ವೀರ್ಲಗೊಂದಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಗೀತ ಗಾಯನೋತ್ಸವ ಕಾರ್ಯಕ್ರಮದ ಉದ್ಘಾಟನೆಯನ್ನು ಹಿರಿಯ ಕಲಾವಿದರಾದ ಚಿಕ್ಕಣ್ಣ ಹಾಗೂ ಡಿ.ನಾಗರಾಜು ನೆರೆವೇರಿಸಿದರು.  | Kannada Prabha

ಸಾರಾಂಶ

70ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಶ್ರೀ ಕರಡಿ ಬುಳ್ಳಪ್ಪ ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ಭಾನುವಾರ ತಾಲೂಕಿನ ವೀರ್ಲಗೊಂದಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಗೀತ ಗಾಯನೋತ್ಸವ ಜನಮನ ಸೆಳೆದಿದ್ದು ಮೂಲ ಕಲಾವಿದರಿಂದ ವಿಜೃಂಭಿಸಿತು.

ಕನ್ನಡಪ್ರಭ ವಾರ್ತೆ ಪಾವಗಡ

70ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಶ್ರೀ ಕರಡಿ ಬುಳ್ಳಪ್ಪ ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ಭಾನುವಾರ ತಾಲೂಕಿನ ವೀರ್ಲಗೊಂದಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಗೀತ ಗಾಯನೋತ್ಸವ ಜನಮನ ಸೆಳೆದಿದ್ದು ಮೂಲ ಕಲಾವಿದರಿಂದ ವಿಜೃಂಭಿಸಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ರಾಜ್ಯಮಟ್ಟದ ಲೋಕಸಿರಿ ಪ್ರಶಸ್ತಿ ಪುರಸ್ಕೃತ ಗಾಣೆ ಕಲಾವಿದರಾದ ಚಿಕ್ಕಣ್ಣ ನೆರವೇರಿಸಿದರು. ಈ ವೇಳೆ ಮಾತನಾಡಿದ ಅವರು, ಅಳಿವಿನ ಅಂಚಿನಲ್ಲಿರುವ ಮೂಲ ಜನಪದ ಕಲೆಗಳನ್ನು ಉಳಿಸಲು ಇಂತಹ ಕಾರ್ಯಕ್ರಮಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದು ಅಭಿಪ್ರಾಯಪಟ್ಟರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಪಟೇಲ್ ನಾಗರಾಜು ಅವರು ಮಾತನಾಡಿ, ಈ ರೀತಿಯ ಗೀತಾ ಗಾಯನ ಕಾರ್ಯಕ್ರಮಗಳನ್ನು ಹಳ್ಳಿಗಳಲ್ಲಿ ಆಯೋಜಿಸುವುದರಿಂದ ಗ್ರಾಮೀಣ ಕಲಾವಿದರಿಗೆ ಕಲಾ ಪ್ರದರ್ಶನಕ್ಕೆ ವೇದಿಕೆ ಮತ್ತು ಅವಕಾಶ ಕಲ್ಪಿಸಿದಾಂಗುತ್ತದೆ ಎಂದರು. ಟ್ರಸ್ಟ್ ನ ಅಧ್ಯಕ್ಷರಾದ ತನುಜ ನಾಗರಾಜ್ ಅವರು ಅಧ್ಯಕ್ಷತೆವಹಿಸಿ ಮಾತನಾಡಿ, ಜಾನಪದ ಗ್ರಾಮೀಣ ಜನರ ಪ್ರತಿಬಿಂಬ ಹಾಗೂ ಕಾಯಕ ಜೀವಿಗಳು ತಮ್ಮ ಕೃಷಿ ಮತ್ತು ಇತರೆ ಇತರೆ ಕೆಲಸ ಕಾರ್ಯಗಳ ಸಂದರ್ಭದಲ್ಲಿ ಶ್ರಮವನ್ನು ಮರೆಯಲು, ದಣಿವನ್ನು ಆರಿಸಿಕೊಳ್ಳಲು ಈ ಕಲೆ ಮತ್ತು ಕಾರ್ಯಕ್ರಮಗಳು ಹುಟ್ಟು ಬೆಳವಣಿಗೆಗೆ ಕಾರಣವಾಗಿರುವಾಗಿ ತಿಳಿಸಿ ಕಲೆಗಳನ್ನು ಉಳಿಸಿ ಬೆಳೆಸುವತ್ತ ಮುಂದಾಗುವಂತೆ ಕರೆ ನೀಡಿದರು. ಹಿರಿಯ ಜಾನಪಕ ಕಲಾವಿದ ಜಿಲ್ಲಾ ಪ್ರಶಸ್ತಿ ಪುರಸ್ಕ್ರತರಾದ ಡಿ.ನಾಗರಾಜು ಶ್ರೀ ಜುಂಜಪ್ಪನ ಕುರಿತು ಗಾಣೆ ಪದಗಳಿಂದ ರಂಜಿಸಿದ್ದು, ಜಯಶ್ರೀ ಹಾಗೂ ಮರಿಸ್ವಾಮಿ ಮತ್ತು ತಂಡದವರಿಂದ ಜನಪದ ಗೀತೆಗಳ ಜೇಂಕಾರ ಮೊಳಗಿಸಿದರು. ದ್ಯಾವರಪ್ಪ ತಂಡದವರಿಂದ ತತ್ವ ಪದಗಳ ಗಾಯನ, ನಾರಾಯಪ್ಪ ತಂಡದಿಂದ ಭಜನೆ, ತಿಮ್ಮಕ್ಕ, ಚಿಕ್ಕಮ್ಮ, ಸಿದ್ದಮ್ಮ, ಪೂಜಾರ್ ನಾಗಮ್ಮ, ಮಾಳಿಗೇರ್ ನಾಗಮ್ಮ ತಂಡ ದಿಂದ ಸೋಬಾನ ಪದಗಳು, ಸ್ಥಳೀಯ ಬಾಲ ಪ್ರತಿಭೆಗಳಾದ ತ್ರಿಷಾ,ವೀಕ್ಷಿತಾ, ವಿಶಾಲ್, ಚೈತನ್ಯ, ರಕ್ಷಿತಾ,ತನು, ಭುವನೇಶ್ ರವರಿಂದ ಕನ್ನಡ ಗೀತೆಗಳ ಗಾಯನ ನಡೆಯಿತು.

ಇದೇ ವೇಳೆ ಮುಖಂಡರಾದ ಟಿ.ಕೃಷ್ಣಪ್ಪ,ಚಿತ್ತಪ್ಪ, ಸಣ್ಣರಾಮಪ್ಪ,ಬಾಣದ ರಂಗಪ್ಪ, ಪ್ರಕಾಶ್, ಪ್ರಸನ್ನಕುಮಾರ್, ನಾರಾಯಣಪ್ಪ, ಶಿಕ್ಷಕರಾದ ಮಲ್ಲಿಕಾರ್ಜುನ, ಶಿವಗಂಗಪ್ಪ,ಬಲರಾಮ್ ಬೆಳ್ಳಿಬಟ್ಲು, ಸತೀಶ್, ಸಿದ್ದರಾಜು, ಶಿವಣ್ಣ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಾರತೀಯರ ಕರೆತರಲು ವಿಶೇಷ ವಿಮಾನ ಮಾಡಿ: ಮೋದಿಗೆ ಸಿಎಂ ಸಿದ್ದು ಪತ್ರ
100ಕ್ಕೂ ಕನ್ನಡಿಗರ ಹೊತ್ತು ಬಂತು ಮೊದಲ ವಿಮಾನ