ಧಾರವಾಡ:
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮತದಾರರ ಪಟ್ಟಿಯ ಅರ್ಹತಾ ದಿನಾಂಕವನ್ನು ಅಕ್ಟೋಬರ್ 1ರಂದು ನಿಗದಿಪಡಿಸಲಾಗಿದೆ. ಈಗಾಗಲೇ ಮತದಾರರ ಪಟ್ಟಿ ತಯಾರಿ, ತರಬೇತಿ ಮತ್ತು ಮುದ್ರಣ ಕಾರ್ಯಗಳನ್ನು ನಡೆದಿದ್ದು, ಬಿಎಲ್‌ಒಗಳು ಜೂ.30ರಿಂದ ಜು. 30ರ ವರೆಗೆ ಮನೆ-ಮನೆಗೆ ಭೇಟಿ ನೀಡಲಿದ್ದಾರೆ. ಕರಡು ಮತದಾರರ ಪಟ್ಟಿಯನ್ನು ಆ. 5ರಂದು ಪ್ರಕಟಿಸಲಾಗುವುದು. ಆಕ್ಷೇಪಣೆ ಸಲ್ಲಿಸಲು ಆ. 5ರಿಂದ ಸೆ. 4ರ ವರೆಗೆ ಕಾಲಾವಕಾಶವಿದೆ ಎಂದರು.
ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 1,665 ಮತಗಟ್ಟೆಗಳಿದ್ದು, 1,665 ಬಿಎಲ್‌ಒ ಮತ್ತು 230 ಬಿಎಲ್‌ಒ ಮೇಲ್ವಿಚಾರಕರನ್ನು ನೇಮಕ ಮಾಡಿದ್ದು, ಒಟ್ಟು 16,21,961 ಮತದಾರರಿದ್ದಾರೆ. ಅದರಲ್ಲಿ 15,19,544 ಗಣತಿ ನಮೂನೆ ವಿತರಿಸಲಾಗಿದ್ದು, ಶೇ. 93.69ರಷ್ಟು ಸಾಧನೆಯಾಗಿದೆ. ಶೇ.6.31ರಷ್ಟು ಬಾಕಿ ಇದೆ. 3,33,765 ಗಣತಿ ನಮೂನೆ ಗಣಕೀಕೃತಗೊಂಡಿದ್ದು ಶೇ. 20.58ರಷ್ಟು ಸಾಧನೆಯಾಗಿದೆ ಎಂದ ಅವರು, ವಿತರಣೆಯಾದ ನಮೂನೆಗಳನ್ನು ಮತದಾರರು ತಮ್ಮ ಮಾಹಿತಿಗಳನ್ನು ಭರ್ತಿ ಮಾಡಿ, ಬಿಎಲ್‌ಒಗಳಿಗೆ ಹಿಂದಿರುಗಿಸಬೇಕು. ಇಲ್ಲದೇ ಹೋದಲ್ಲಿ ಮತದಾರರ ಹೆಸರುಗಳು ಕರಡು ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.ಪ್ರಸ್ತುತ ಗೈರು, ಸ್ಥಳಾಂತರ, ಮರಣ ಹಾಗೂ ದ್ವಿಪ್ರತಿ ಪ್ರಕರಣಗಳಿಗೆ ಸಂಬ೦ಧಿಸಿದ೦ತೆ ಒಟ್ಟು 57,319 ಮತದಾರರನ್ನು ಗುರುತಿಸಲಾಗಿದೆ. ಈ ಪೈಕಿ 27,594 ಶಾಶ್ವತ ವಲಸೆ ಹಾಗೂ 7,242 ಮರಣ ಹೊಂದಿದ ಪ್ರಕರಣ, 1,803 ದ್ವಿಪ್ರತಿ, 20,449 ಗೈರು ಹಾಗೂ ಇತರೆ 231 ಸೇರಿವೆ ಎಂದರು.
ಈ ವೇಳೆ ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ., ಪ್ರೊಬೇಷನರಿ ಐಎಎಸ್ ಅಧಿಕಾರಿ ಅನುಪ್ರಿಯಾ ಸಾಕ್ಯಾ, ಪಾಲಿಕೆ ಆಯುಕ್ತ ಡಾ. ರುದ್ರೇಶ ಘಾಳಿ, ಉಪವಿಭಾಗಾಧಿಕಾರಿ ಪ್ರಭಾವತಿ ಫಕೀರಪುರ ಇದ್ದರು.