ಕನ್ನಡಪ್ರಭ ವಾರ್ತೆ ಯಾದಗಿರಿ
ಜಿಲ್ಲಾಧಿಕಾರಿಗಳ ಕಚೇರಿಯ ಮಾಹಿತಿ ಪ್ರಕಾರ ಸೋಮವಾರ ಸಂಜೆ 4 ರ ವರೆಗಿನ ತನಕ ಜಿಲ್ಲೆಯಲ್ಲಿ ಶೇ. 97.08 ಮತದಾರರ ಮ್ಯಾಪಿಂಗ್ ಪೂರ್ಣಗೊಂಡಿದೆ. ಮನೆ-ಮನೆಗೆ ಗಣತಿ ನಮೂನೆ ನೀಡುವುದು ಹಾಗೂ ಡಿಜಿಟೈಸೇಶನ್ ಕಾರ್ಯ ಜೂ.30 ರಿಂದ ಆರಂಭವಾಗಿದ್ದು, ಆ.17 ರ ತನಕ ನಡೆಯಲಿದೆ. ಜೂ.16 ರ ಅಂಕಿ-ಅಂಶಗಳ ಪ್ರಕಾರ ಜಿಲ್ಲೆಯ ಮತದಾರರ ಪಟ್ಟಿಯಲ್ಲಿ 10,53,236 ಮತದಾರರು ದಾಖಲಾಗಿದ್ದಾರೆ.
ಜಿಲ್ಲೆಯಲ್ಲಿ 10,53,236 (ಶೇ.100) ಮತದಾರರಿಗೆ ಎಣಿಕೆ ನಮೂನೆಗಳ ವಿತರಿಸಲಾಗಿದ್ದು, ಎಲ್ಲ ಅರ್ಜಿಗಳನ್ನು ಡಿಜಿಟಲೈಸ್ ಮಾಡಲಾಗಿದೆ. ಜತೆಗೆ 5,271 (0.50%) ಇಎಫ್ ಗಳನ್ನು ಆನ್‍ಲೈನ್ ಮೂಲಕ ಸ್ವೀಕರಿಸಲಾಗಿದೆ.ಮನೆ-ಮನೆ ಸಮೀಕ್ಷೆಯ ವೇಳೆ ಜಿಲ್ಲೆಯಲ್ಲಿ 1,88,599 ಎಎಸ್‍ಡಿಡಿಓ ಮತದಾರರನ್ನು ಗುರುತಿಸಲಾಗಿದ್ದು, 17,342 ಗೈರಾಗಿದ್ದಾರೆ. 1,16,289 ಮಂದಿ ಶಾಶ್ವತ ಸ್ಥಳಾಂತರಗೊಂಡಿದ್ದಾರೆ. 29,026 ಜನ ಮೃತರಾಗಿದ್ದು, ಈಗಾಗಲೇ ಇತರೆ 3,532 ಸಹಿತ 22,410 ಮಂದಿ ನೋಂದಾಯಿತರಾಗಿದ್ದಾರೆ
ಜಿಲ್ಲೆಯಲ್ಲಿ 1,134 ಭಾಗಗಳಲ್ಲಿ ಈ ಮಹತ್ವದ ಪ್ರಕ್ರಿಯೆ ನಡೆಯುತ್ತಿದ್ದು, ನಿಗದಿತ ಅವಧಿಯೊಳಗೆ ಸಂಪೂರ್ಣ ಡಿಜಿಟೈಸೇಶನ್ ಪ್ರಕ್ರಿಯೆ ಮುಕ್ತಾಯಗೊಳಿಸಲು ಚುನಾವಣಾ ಅಧಿಕಾರಿಗಳ ತಂಡ ಶ್ರಮಿಸುತ್ತಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ರಾಹುಲ್ ತುಕಾರಾಮ ಪಾಂಡ್ವೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
11ವೈಡಿಆರ್5: