ಸಿರಿಬಾಗಿಲು ಪ್ರತಿಷ್ಠಾನ: ಯಕ್ಷಗಾನ ಹಿಮ್ಮೇಳ ಕಲಾವಿದರ ಶಿಬಿರ

KannadaprabhaNewsNetwork |  
Published : Oct 27, 2026, 03:00 AM IST
ಸಿರಿಬಾಗಿಲು ಪ್ರತಿಷ್ಠಾನದ ವತಿಯಿಂದ ಯಕ್ಷಗಾನ ಹಿಮ್ಮೇಳ ಕಲಾವಿದರ ಶಿಬಿರ ನಡೆಯಿತು | Kannada Prabha

ಸಾರಾಂಶ

ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ಶ್ರೀ ಕೇಶವಾನಂದ ಭಾರತಿ ಸ್ಮೃತಿ ಮಂದಿರದಲ್ಲಿ ‘ಯಕ್ಷಗಾನ ಕಲೆಯ ದೀಪಕ್ಕೆ ತೈಲಧಾರೆಗಳಾಗೋಣ’ ಶೀರ್ಷಿಕೆಯಲ್ಲಿ ಯಕ್ಷಾನುಗ್ರಹ ವಾಟ್ಸಾಪ್ ಬಳಗದ ಸಹಯೋಗದಲ್ಲಿ ಯಕ್ಷಗಾನ ಹಿಮ್ಮೇಳ ಕಲಾವಿದರ ಶಿಬಿರ ನಡೆಯಿತು.

ಕನ್ನಡಪ್ರಭ ವಾರ್ತೆ ಮಂಗಳೂರು

ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ಶ್ರೀ ಕೇಶವಾನಂದ ಭಾರತಿ ಸ್ಮೃತಿ ಮಂದಿರದಲ್ಲಿ ‘ಯಕ್ಷಗಾನ ಕಲೆಯ ದೀಪಕ್ಕೆ ತೈಲಧಾರೆಗಳಾಗೋಣ’ ಶೀರ್ಷಿಕೆಯಲ್ಲಿ ಯಕ್ಷಾನುಗ್ರಹ ವಾಟ್ಸಾಪ್ ಬಳಗದ ಸಹಯೋಗದಲ್ಲಿ ಯಕ್ಷಗಾನ ಹಿಮ್ಮೇಳ ಕಲಾವಿದರ ಶಿಬಿರ ನಡೆಯಿತು.

ತಾಳಮದ್ದಳೆ ಅರ್ಥದಾರಿ ರಾಧಾಕೃಷ್ಣ ಕಲ್ಚಾರ್ ವಿಟ್ಲ ಮಾತನಾಡಿ, ಯಕ್ಷಗಾನ ಕ್ಷೇತ್ರಕ್ಕೆ ಮಹಾನ್ ಕೊಡುಗೆ ನೀಡಿರುವ ಲಯಬ್ರಹ್ಮ ದಿವಾಣ ಭೀಮ ಭಟ್ಟರ ನೆನಪಿನಲ್ಲಿ ಯಕ್ಷಗಾನ ಹಿಮ್ಮೇಳ ಶಿಬಿರ ನಡೆಯುವುದು ಒಂದು ಅರ್ಥಪೂರ್ಣ ಕಾರ್ಯಕ್ರಮ ಎಂದು ಅವರ ಸಂಸ್ಮರಣೆ ಮಾಡಿದರು.

ಸಿರಿಬಾಗಿಲು ಪ್ರತಿಷ್ಠಾನದ ಅಧ್ಯಕ್ಷ ರಾಮಕೃಷ್ಣ ಮಯ್ಯ ಹಿಮ್ಮೇಳ ಕಲಾವಿದರಲ್ಲಿ ರಂಗಪ್ರಜ್ಞೆ, ಪ್ರಸಂಗದ ಕುರಿತಾದ ಅಧ್ಯಯನ ಅತೀ ಅಗತ್ಯ ಎಂದರು.

ವಿಶೇಷ ಸಂಪನ್ಮೂಲ ವ್ಯಕ್ತಿಗಳಾಗಿ ಸುಬ್ರಾಯ ಸಂಪಾಜೆ, ಗೋಪಾಲಕೃಷ್ಣ ಭಟ್ ಪುಂಡಿಕಾಯಿ, ಅಂಡಾಲ ದೇವಿಪ್ರಸಾದ್ ಶೆಟ್ಟಿ ಭಾಗವಹಿಸಿದ್ದರು. ಗೋಷ್ಠಿಯ ಪ್ರಾತ್ಯಕ್ಷಿಕೆಯಲ್ಲಿ ಶಾಲಿನಿ ಹೆಬ್ಬಾರ್, ತಲ್ಪನಾಜೆ ವೆಂಕಟರಮಣ ಭಟ್, ಪ್ರದೀಪ ಗಟ್ಟಿ, ಹರಿಪ್ರಸಾದ್ ಕಾರಂತ, ಲಕ್ಷ್ಮೀನಾರಾಯಣರಾವ್ ಅಡೂರು, ಮುರಾರಿ ಕಂಬಳಿತ್ತಾಯ, ಅವಿನಾಶ ಬೈಪಡಿತಾಯ, ಗಣೇಶ ಭಟ್ ಬೆಳಾಲು ಮತ್ತಿತರರು ಭಾಗವಹಿಸಿದರು. ರಾಜಾರಾಮ ಹೊಳ್ಳ ಕೈರಂಗಳ ಗೋಷ್ಠಿ ನಿರ್ವಹಿಸಿದರು.

ಯಕ್ಷಗಾನ ಹಿಮ್ಮೇಳ ಗುರು ಹರಿ ನಾರಾಯಣ ಬೈಪಡಿತ್ತಾಯ ಉದ್ಘಾಟಿಸಿದರು. ಅನನ್ಯ ಫೀಡ್ಸ್ ಹುಬ್ಬಳ್ಳಿ ಸಂಸ್ಥೆಯ ನಿರ್ದೇಶಕ ದಿವಾಣ ಗೋವಿಂದ ಭಟ್ ಅಧ್ಯಕ್ಷತೆ ವಹಿಸಿದ್ದರು. ಪದ್ಯಾಣ ಶಂಕರನಾರಾಯಣ ಭಟ್, ಗೋವಿಂದ ನಾಯಕ್ ಪಾಲೆಚ್ಚಾರು, ಯಕ್ಷಾನುಗ್ರಹ ವಾಟ್ಸಪ್ ಬಳಗದ ಹಿರಿಯ ಸದಸ್ಯ ಕುಮಾರ ಸುಬ್ರಹ್ಮಣ್ಯ, ಡಾ.ಶ್ರೀಕೃಷ್ಣ ಭಟ್ ಸುಣ್ಣಂಗುಳಿ ಮತ್ತಿತರರು ಇದ್ದರು.

ಪ್ರತಿಷ್ಠಾನದ ಸದಸ್ಯ ಹಾಗೂ ಯಕ್ಷಾನುಗ್ರಹ ವಾಟ್ಸಪ್ ಬಳಗದ ಸದಸ್ಯ ಯೋಗೀಶರಾವ್ ಚಿಗುರುಪಾದೆ ಪ್ರಾಸ್ತಾವಿಕ ಮಾತನಾಡಿದರು.

ಡಾ.ಶ್ರುತಕೀರ್ತಿ ರಾಜ ಉಜಿರೆ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಾಲ್ಮೀಕಿ ರಾಮಾಯಣದಿಂದ ಸಮಾಜಕ್ಕೆ ಸಂದೇಶ
ರುದ್ರಭೂಮಿ ಸ್ವಚ್ಛಗೊಳಿಸಿದ ಹಿಂದೂ ಸಂಘಟನೆ ಕಾರ್ಯಕರ್ತರು