ನಗರದ ಅಮ್ಮ ಫೌಂಡೇಶನ್ ವತಿಯಿಂದ ಕ್ರೀಡಾ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿನ ಸಾಧನೆಗಾಗಿ ಕೊಡಮಾಡುವ ರಾಜ್ಯಮಟ್ಟದ ಸಿರಿಗನ್ನಡ ಸಾಧಕ ಪ್ರಶಸ್ತಿಗೆ ಲಯನ್ಸ್ ಕ್ಲಬ್ ಆಫ್ ಬಿಜಾಪುರ ಪರಿವಾರದ ಸಂಸ್ಥಾಪಕ ಹಾಗೂ ಸುವರ್ಣ ಕನ್ನಡಿಗ ಪ್ರಶಸ್ತಿ ಪುರಸ್ಕೃತ ಡಾ.ಅಶೋಕಕುಮಾರ ರಾ.ಜಾಧವ ಆಯ್ಕೆಯಾಗಿದ್ದಾರೆ.
ಕನ್ನಡಪ್ರಭ ವಾರ್ತೆ ವಿಜಯಪುರ
ನಗರದ ಅಮ್ಮ ಫೌಂಡೇಶನ್ ವತಿಯಿಂದ ಕ್ರೀಡಾ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿನ ಸಾಧನೆಗಾಗಿ ಕೊಡಮಾಡುವ ರಾಜ್ಯಮಟ್ಟದ ಸಿರಿಗನ್ನಡ ಸಾಧಕ ಪ್ರಶಸ್ತಿಗೆ ಲಯನ್ಸ್ ಕ್ಲಬ್ ಆಫ್ ಬಿಜಾಪುರ ಪರಿವಾರದ ಸಂಸ್ಥಾಪಕ ಹಾಗೂ ಸುವರ್ಣ ಕನ್ನಡಿಗ ಪ್ರಶಸ್ತಿ ಪುರಸ್ಕೃತ ಡಾ.ಅಶೋಕಕುಮಾರ ರಾ.ಜಾಧವ ಆಯ್ಕೆಯಾಗಿದ್ದಾರೆ. ನ.22 ರಂದು ವಿಜಯಪುರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ನಡೆಯುವ ರಾಜ್ಯಮಟ್ಟದ ಸಿರಿಗನ್ನಡ ಸಂಭ್ರಮ-2026ರ ಸಮಾರಂಭದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಅಮ್ಮ ಫೌಂಡೇಶನ್ ಗೌರವ ಅಧ್ಯಕ್ಷ ಯು.ಐ.ಶೇಖ ತಿಳಿಸಿದ್ದಾರೆ. ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಎಂ.ಸಿ.ಮುಲ್ಲಾ, ನಗರ ಘಟಕದ ಅಧ್ಯಕ್ಷ ಫಯಾಜ್ ಕಲಾದಗಿ, ಲಯನ್ಸ್ ಪರಿವಾರದ ಡಾ.ಬಾಬುರಾಜೇಂದ್ರ ನಾಯಿಕ, ಡಾ.ಎಸ್.ಎಸ್.ರಾಜಮಾನ್ಯ, ಚಿದಾನಂದ ನಿಂಬಾಳ, ಹಾಲಿ ಅಧ್ಯಕ್ಷ ವಾಲು ಚವ್ಹಾಣ, ಕಾರ್ಯದರ್ಶಿ ಸತ್ಯಕಾಮ ಕಟ್ಟಿ, ಪ್ರಥಮ ಉಪಾಧ್ಯಕ್ಷರಾದ ಜಯಶ್ರೀ ಲದ್ವಾ, ಶಶಿಕಲಾ ಇಜೇರಿ, ಪುಷ್ಪಾ ಮಹಾಂತಮಠ, ವಿದ್ಯಾ ಕೊಟೆನ್ನವರ, ಶ್ರೀಶೈಲ ಗಂಗನಳ್ಳಿ, ರಾಜೇಶ ಗಾಯಕವಾಡ, ಶ್ರೇಯಸ್ ಮಹೀಂದ್ರಕರ, ಸೋಮಶೇಖರ ರಾಠೋಡ, ಮೋಹನ ಚವ್ಹಾಣ, ಇಂದುಮತಿ ಕನ್ನೂರ, ರಜನಿ ಸಂಬಣ್ಣಿ, ಛಾಯಾ ಮಸಿಯವರ, ಅನಿತಾ ಕುಮಸಿ, ಧರ್ಮರಾಯ ಮಮದಾಪುರ, ಪ್ರಕಾಶ ದರ್ಬಾರ, ಶೈಲಾ ಬಸವಪ್ರಭು, ತಾರಾಸಿಂಗ್ ದೊಡ್ಡಮನಿ, ಡಾ.ಗಿರೀಶ ಕುಲ್ಲೊಳ್ಳಿ, ಡಾ.ರವಿ ನಾಯಕ, ಡಾ.ರವೀಂದ್ರ ಮದ್ರಕಿ, ಮಾಯಾದೇವಿ ಚೌಧರಿ, ಧೊಂಡಿಬಾ ರಾಠೋಡ, ಸಾಧೀಕ್ ಜಾನ್ವೇಕರ, ಪ್ರೊ.ಎಸ್.ಜಿ.ಮಠ, ಡಾ.ರಶ್ಮಿ ಚಿತ್ತವಾಡಗಿ ಸೇರಿದಂತೆ ಕ್ರಿಕೆಟ್ ಸಂಸ್ಥೆಗಳ ಮತ್ತು ಇನ್ನಿತರ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಅಭಿನಂದಿಸಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.