ರೋಗಿಗಳಿಗೆ ಹಣ್ಣು-ಹಂಪಲ ವಿತರಿಸಿ ಶಿವಾನಂದ ಕಲ್ಲೂರ ಜನ್ಮ ದಿನಾಚರಣೆ

KannadaprabhaNewsNetwork |  
Published : Jul 20, 2024, 12:59 AM IST
೧೯ಬಿಎಸ್ವಿ೦೩- ಬಿಜೆಪಿ ರಾಜ್ಯ ಮಾಜಿ ಕಾರ್ಯದರ್ಶಿ, ಈಶಾನ್ಯ ರಸ್ತೆ ಸಾರಿಗೆ ಸಂಸ್ಥೆಯ ಮಾಜಿ ಅಧ್ಯಕ್ಷ ಬಸವನಬಾಗೇವಾಡಿಯ ಶಿವಾನಂದ ಕಲ್ಲೂರ ಅವರ ಜನ್ಮದಿನದಂಗವಾಗಿ ಶುಕ್ರವಾರ ಬಸವನಬಾಗೇವಾಡಿಯ ತಾಲೂಕು ಆಸ್ಪತ್ರೆಯಲ್ಲಿರುವ ರೋಗಿಗಳಿಗೆ ಹಣ್ಣು-ಹಂಪಲ, ಹಾಲು-ಬ್ರೆಡ್ ವಿತರಿಸಲಾಯಿತು. | Kannada Prabha

ಸಾರಾಂಶ

ಬಿಜೆಪಿ ರಾಜ್ಯ ಮಾಜಿ ಕಾರ್ಯದರ್ಶಿ, ಈಶಾನ್ಯ ರಸ್ತೆ ಸಾರಿಗೆ ಸಂಸ್ಥೆಯ ಮಾಜಿ ಅಧ್ಯಕ್ಷ ಬಸವನಬಾಗೇವಾಡಿಯ ಶಿವಾನಂದ ಕಲ್ಲೂರ ಅವರ ಜನ್ಮದಿನದಂಗವಾಗಿ ಶುಕ್ರವಾರ ಬಸವನಬಾಗೇವಾಡಿಯ ತಾಲೂಕು ಆಸ್ಪತ್ರೆಯಲ್ಲಿರುವ ರೋಗಿಗಳಿಗೆ ಹಣ್ಣು-ಹಂಪಲ, ಹಾಲು-ಬ್ರೆಡ್ ವಿತರಿಸಲಾಯಿತು.

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ

ಬಿಜೆಪಿ ರಾಜ್ಯ ಮಾಜಿ ಕಾರ್ಯದರ್ಶಿ, ಈಶಾನ್ಯ ರಸ್ತೆ ಸಾರಿಗೆ ಸಂಸ್ಥೆಯ ಮಾಜಿ ಅಧ್ಯಕ್ಷ ಬಸವನಬಾಗೇವಾಡಿಯ ಶಿವಾನಂದ ಕಲ್ಲೂರ ಅವರ ಜನ್ಮದಿನದಂಗವಾಗಿ ಶುಕ್ರವಾರ ಬಸವನಬಾಗೇವಾಡಿಯ ತಾಲೂಕು ಆಸ್ಪತ್ರೆಯಲ್ಲಿರುವ ರೋಗಿಗಳಿಗೆ ಹಣ್ಣು-ಹಂಪಲ, ಹಾಲು-ಬ್ರೆಡ್ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಬಿಜೆಪಿ ಹಿರಿಯ ಮುಖಂಡ ಶಿವಾನಂದ ಕಲ್ಲೂರ ಅವರ ಸಹೋದರ, ವಿವೇಕ ಬ್ರಿಗೇಡ್‌ದ ಮುಖ್ಯಸ್ಥ ವಿನುತ ಕಲ್ಲೂರ ಮಾತನಾಡಿ, ನಮ್ಮ ಸಹೋದರ ಕೆಲ ರಾಜ್ಯಗಳಲ್ಲಿ ನಿರಂತರವಾಗಿ ಇದ್ದು ಅಲ್ಲಿನ ಜನರಿಗೆ ಸೇವೆ ಸಲ್ಲಿಸಿದ್ದಾರೆ. ನಂತರ ರಾಜಕಾರಣ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಮೂಲಕ ವಿವಿಧ ಸಾಮಾಜಿಕ ಮುಖಿ ಕಾರ್ಯಗಳನ್ನು ಮಾಡಿದ್ದಾರೆ. ಬಿಜೆಪಿ ರಾಜ್ಯ ಕಾರ್ಯದರ್ಶಿ ಸೇರಿದಂತೆ ವಿವಿಧ ಹುದ್ದೆಗಳಲ್ಲಿ ತಮ್ಮ ಸೇವೆ ಸಲ್ಲಿಸಿದ್ದಾರೆ. ಈಶಾನ್ಯ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷರಾಗಿ ಒಂದೂವರೆ ವರ್ಷ ಕಾಲ ಕಾರ್ಯನಿರ್ವಹಿಸಿ ಅಲ್ಲಿನ ಅನೇಕ ಕಾರ್ಯಗಳನ್ನು ಮಾಡುವ ಮೂಲಕ ತಮ್ಮದೇ ಛಾಪು ಮೂಡಿಸಿದ್ದು ಇತಿಹಾಸವಾಗಿದೆ. ಅವರು ಸಾಮಾಜಿಕ ಚಟುವಟಿಕೆಗಳಲ್ಲಿ ನಿರಂತರವಾಗಿ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದರು. ನಮ್ಮ ಸಹೋದರನಿಗೆ ಕೆಲ ವರ್ಷಗಳ ಹಿಂದೆ ಆರೋಗ್ಯ ಕೈಕೊಟ್ಟ ಹಿನ್ನೆಲೆಯಲ್ಲಿ ರಾಜಕಾರಣದಿಂದ ದೂರ ಉಳಿಯುವ ಪರಿಸ್ಥಿತಿ ಬಂದಿದೆ. ಆರೋಗ್ಯ ಚೇತರಿಕೆಯಾಗಿ ಮತ್ತೆ ಮೊದಲಿನಂತೆ ಅವರಿಂದ ಸಮಾಜಕ್ಕೆ ಇನ್ನಷ್ಟು ಸೇವೆ ಸಿಗುವಂತಾಗಲೆಂದು ನಾವು ಶುಭಕೋರಿ ಇಂದು ರೋಗಿಗಳಿಗೆ ಹಣ್ಣು-ಹಂಪಲ, ಹಾಲು-ಬ್ರೆಡ್ ವಿತರಿಸಲಾಗುತ್ತಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಶ್ರೀಕಾಂತ ಕೊಟ್ರಶೆಟ್ಟಿ, ಶಿವಾನಂದ ತೋಳನೂರ, ಸತೀಶ ಕ್ವಾಟಿ, ಸಂಗಮೇಶ ಹುಜರತಿ, ಮಂಜು ಕುಂಟೋಜಿ, ಡಾ.ಶಬೀರ ಪಟೇಲ, ಸಂಗಮೇಶ ಜಾಲಗೇರಿ, ಭದ್ರು ಮಣ್ಣೂರ, ಪ್ರಶಾಂತ ಮುಂಜಾನೆ, ಶಂಕರ ಬೈಕೋಳ ಇತರರು ಇದ್ದರು.

ನಮ್ಮ ಸಹೋದರ ಶಿವಾನಂದ ಕಲ್ಲೂರ ವಿದ್ಯಾರ್ಥಿ ದಿಸೆಯಲ್ಲಿ ಎಬಿವಿಪಿಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಮೂಲಕ ಪೂರ್ಣಪ್ರಮಾಣದಲ್ಲಿ ಕಾರ್ಯಕರ್ತರಾಗಿ ಅವಿರತವಾಗಿ ಸೇವೆ ಸಲ್ಲಿಸಿದರು. ಇದರೊಂದಿಗೆ ಆರ್‌.ಎಸ್.ಎಸ್ ಸ್ವಯಂಸೇವಕರಾಗಿ ತಮ್ಮಲ್ಲಿ ದೇಶ ಭಕ್ತಿ ಮೂಡಿಸಿಕೊಳ್ಳುವ ಮೂಲಕ ದೇಶಕ್ಕೆ ತಮ್ಮ ಸೇವೆ ಸಲ್ಲಿಸಿದ್ದಾರೆ.

-ವಿನುತ ಕಲ್ಲೂರ,

ವಿವೇಕ ಬ್ರಿಗೇಡ್‌ದ ಮುಖ್ಯಸ್ಥ.

PREV

Recommended Stories

ಶ್ರೀ ಶ್ರೀ ರವಿಶಂಕರ್‌ಗೆ ವರ್ಲ್ಡ್ ಲೀಡರ್ ಫಾರ್ ಪೀಸ್ ಆ್ಯಂಡ್‌ ಸೆಕ್ಯೂರಿಟಿ ಪ್ರಶಸ್ತಿ
ಹಾಡಹಗಲೇ ಮನೆಗೆ ನುಗ್ಗಿ ಚಹಾ ವ್ಯಾಪಾರಿಯ ಕತ್ತು ಕೊಯ್ದು ಹತ್ಯೆ