ಪ್ರಸ್ತುತ ಪದವಿಯೊಡನೆ ಕೌಶಲ್ಯದ ಅಭಿವೃದ್ಧಿ ಅನಿವಾರ್ಯ: ಎಂ.ಕೆ.ಸವಿತಾ

KannadaprabhaNewsNetwork |  
Published : Jun 27, 2025, 12:49 AM IST
15 | Kannada Prabha

ಸಾರಾಂಶ

ಸಾಮಾಜಿಕ ಜಾಲತಾಣಗಳ ಸದ್ಬಳಕೆ ಹಾಗೂ ತಮ್ಮ ಸ್ನೇಹಿತರನ್ನು ಪರಸ್ಪರ ಪ್ರೇರೇಪಿಸುವುದು ಗುರಿ ಮುಟ್ಟುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ವಿದ್ಯಾರ್ಥಿಗಳು ತಮ್ಮ ಜ್ಞಾನವನ್ನು ವೈಚಾರಿಕತೆಯಿಂದ ಸದ್ಬಳಕೆ ಮಾಡಿಕೊಂಡು, ತಮ್ಮ ಬದುಕನ್ನು ಆದರ್ಶಮಯವಾಗಿ ಕಟ್ಟಿಕೊಳ್ಳಬೇಕು.

ಕನ್ನಡಪ್ರಭ ವಾರ್ತೆ ಮೈಸೂರು

ಪದವಿಯೊಡನೆ ಕೌಶಲ್ಯದ ಅಭಿವೃದ್ಧಿ ಈ ಕಾಲಘಟ್ಟದಲ್ಲಿ ಅನಿವಾರ್ಯವಾಗಿದೆ. ಕೃತಕ ಬುದ್ಧಿಮತ್ತೆಯ (ಎಐ) ನಡುವೆ ವೈಚಾರಿಕತೆಯ ಅವಲೋಕನ ಅತ್ಯವಶ್ಯಕವಾಗಿದೆ ಎಂದು ಮೈಸೂರು ವಿವಿ ಕುಲಸಚಿವೆ ಎಂ.ಕೆ. ಸವಿತಾ ತಿಳಿಸಿದರು.

ನಗರದ ಬನ್ನಿಮಂಟಪದಲ್ಲಿರುವ ಸಂತ ಫಿಲೋಮಿನಾ ಕಾಲೇಜಿನಲ್ಲಿ ಸ್ನಾತಕೋತ್ತರ ಕೇಂದ್ರದ ವಿವಿಧ ವಿಭಾಗಗಳಲ್ಲಿ ವ್ಯಾಸಂಗ ಮಾಡುತ್ತಿರುವ 2023- 2025ನೇ ಸಾಲಿನ ವಿದ್ಯಾರ್ಥಿಗಳಿಗೆ ಪದವಿ ಪ್ರಧಾನ ಸಮಾರಂಭದಲ್ಲಿ ಮಾತನಾಡಿದ ಅನರು, ಸಾಮಾಜಿಕ ಜಾಲತಾಣಗಳ ಸದ್ಬಳಕೆ ಹಾಗೂ ತಮ್ಮ ಸ್ನೇಹಿತರನ್ನು ಪರಸ್ಪರ ಪ್ರೇರೇಪಿಸುವುದು ಗುರಿ ಮುಟ್ಟುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಹೇಳಿದರು.

ಅಧ್ಯಕ್ಷತೆಯನ್ನು ವಹಿಸಿದ್ದ ರೆಕ್ಟರ್ ಫಾ. ಡಾ. ಲೂರ್ದು ಪ್ರಸಾದ್ ಜೋಸೆಫ್ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಜ್ಞಾನವನ್ನು ವೈಚಾರಿಕತೆಯಿಂದ ಸದ್ಬಳಕೆ ಮಾಡಿಕೊಂಡು, ತಮ್ಮ ಬದುಕನ್ನು ಆದರ್ಶಮಯವಾಗಿ ಕಟ್ಟಿಕೊಳ್ಳಬೇಕು ಎಂದು ಸಲಹೆ ನೀಡಿದರು.

239 ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಕಾಲೇಜಿನ ಪ್ರಾಂಶುಪಾಲ ಡಾ. ರವಿ ಜೆ.ಡಿ. ಸಲ್ಮಾನ್ಹಾ, ಸ್ನಾತಕೋತ್ತರ ಕೇಂದ್ರದ ಸಂಯೋಜಕಿ ಡಾ.ಸಿ.ಎ. ನೂರ್ ಮುಬಾಶೀರ್, ಕ್ಯಾಂಪಸ್ ಆಡಳಿತಾಧಿಕಾರಿ ಫಾ. ಜ್ಞಾನಪ್ರಕಾಶಂ, ಸಹಾಯಕ ರೆಕ್ಟರ್ ಫಾ.ಎಸ್. ಡೇವಿಡ್ ಸಾಗಯರಾಜ್, ನಾಗರಾಜ್ ಅರಸು, ಪ್ರಕಾಶ್ ಕುಟಿನೊ, ಥಾಮಸ್ ಗುಣಶೀಲನ್, ರೀನಾ ಫ್ರಾನ್ಸಿಸ್ ಮೊದಲಾದವರು ಇದ್ದರು.

ಶಾರದಾ ವಿಲಾಸ ಶಿಕ್ಷಣ ಕಾಲೇಜಿಗೆ ನ್ಯಾಕ್‌ ಬಿ ಡಬಲ್ ಪ್ಲಸ್‌ ಮಾನ್ಯತೆ

ಕನ್ನಡಪ್ರಭ ವಾರ್ತೆ ಮೈಸೂರು

ನಗರದ ಕೃಷ್ಣಮೂರ್ತಿಪುರಂನ ಶಾರದಾವಿಲಾಸ ಶಿಕ್ಷಣ ಮಹಾವಿದ್ಯಾಲಯಕ್ಕೆ ನ್ಯಾಕ್‌ ಬಿ ಡಬಲ್ ಪ್ಲಸ್‌ ಮಾನ್ಯತೆ ದೊರೆತಿದೆ.

ಕಾಲೇಜಿನ ಪ್ರಾಂಶುಪಾಲೆ ಡಾ.ಕೆ.ಎಸ್‌. ಲೀಲಾ, ಐಕ್ಯೂಎಸಿ ಸಂಯೋಜಕ ಡಾ.ಎಚ್‌.ಎಂ. ಮಂಜುನಾಥ್, ಗ್ರಂಥಾಪಲಕ ಡಾ.ಜಿ. ಮಂಜುನಾಥ ಹಾಗೂ ಸಹ ಪ್ರಾಧ್ಯಾಪಕ ಡಾ.ಎಚ್‌.ಎನ್‌.ವಿಶ್ವನಾಥ್‌ ನ್ಯಾಕ್‌ ಸಮಿತಿಗೆ ಸಂಪೂರ್ಣ ಮಾಹಿತಿ ಒದಗಿಸಿದರು.

ಸಮಿತಿಯು ಶಿಕ್ಷಣ ಕಾಲೇಜಿನ ಆಡಳಿತ ಮಂಡಳಿಯ ಸದಸ್ಯರು, ಬೋಧಕರು, ಬೋಧಕೇತರರು, ಪ್ರಸ್ತುತ ವಿದ್ಯಾಭ್ಯಾಸ ಮಾಡುತ್ತಿರುವ ಪ್ರಶಿಕ್ಷಣಾರ್ಥಿಗಳು ಮತ್ತು ಹಿರಿಯ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ, ಶಿಕ್ಷಣ ಕಾಲೇಜಿನಲ್ಲಿ ಲಭ್ಯವಿರುವ ಶೈಕ್ಷಣಿಕ ಮತ್ತು ಭೌತಿಕ ಸೌಲಭ್ಯಗಳಿಗೆ ಸಂಬಂಧಿಸಿದಂತೆ ಸುದೀರ್ಘ ಚರ್ಚೆ ನಡೆಸಿ ಅಗತ್ಯ ದಾಖಲೆಗಳನ್ನು ಪರಿಶೀಲಿಸಿತು.

ಶಿಕ್ಷಣ ಮಹಾವಿದ್ಯಾಲಯದಲ್ಲಿ ಕಲಿಕೆಗೆ ಪೂರಕವಾಗಿರುವ ವಾತಾವರಣ, ಮೂಲಸೌಕರ್ಯಗಳು, ಗ್ರಂಥಾಲಯದ ಸೇವಾ ಸೌಲಭ್ಯಗಳು, ಪ್ರಶಿಕ್ಷಣಾರ್ಥಿಗಳಲ್ಲಿರುವ ಶಿಸ್ತು, ಶೈಕ್ಷಣಿಕ- ಕೌಶಲ್ಯಾಭಿವೃದ್ಧಿಯ ಕ್ರಮಗಳನ್ನು ಮೆಚ್ಚಿದ ಸಮಿತಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಕಾರ್ಯವೈಖರಿಯನ್ನು ಪ್ರಶಂಸಿಸಿತು.

ನ್ಯಾಕ್‌ ಸಮಿತಿ ನೀಡಿದ ಬಿ ಪ್ಲಸ್‌ಪ್ಲಸ್‌ ಶ್ರೇಣಿಯ ಮಾನ್ಯತೆಯು ಮುಂದಿನ ಐದು ವರ್ಷಗಳವರೆಗೆ ಇರಲಿದೆ. ಈ ಯಶಸ್ಸಿಗಾಗಿ ಶ್ರಮವಹಿಸಿದ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲರಿಗೆ, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರಿಗೆ ಶಾರದಾ ವಿಲಾಸ ವಿದ್ಯಾಸಂಸ್ಥೆಯ ಅಧ್ಯಕ್ಷ ಡಾ.ಬಿ.ಎಂ. ಸುಬ್ರಾಯ, ಗೌರವ ಕಾರ್ಯದರ್ಶಿ ಆರ್‌. ನರಸಿಂಹ, ಸದಸ್ಯ ಪ್ರೊ.ಟಿ.ಕೆ. ಉಮೇಶ್‌ಮತ್ತು ಆಡಳಿತ ಮಂಡಳಿ ಸದಸ್ಯರು ಅಭಿನಂದಿಸಿದ್ದಾರೆ.

PREV

Recommended Stories

ಮಹರ್ಷಿ ವಾಲ್ಮೀಕಿ ಕವಿಕುಲದ ಸಾರ್ವಭೌಮ: ಸಾಲವಾಡಗಿ
ಅಪಘಾತದಲ್ಲಿ ಪತ್ರಕರ್ತ ಕಾನಗೊಂಡ ಸಾವು