ಸ್ಮಾರ್ಟ್‌ ಪಬ್ಲಿಕ್‌ ಶಾಲೇಲಿ ಕನ್ನಡ ಗೀತೆಗಳ ಭಾವಯಾನದಲ್ಲಿ ಕಲರವ

KannadaprabhaNewsNetwork |  
Published : Aug 17, 2026, 02:15 AM IST
14ಜಿಪಿಟಿ5ಗುಂಡ್ಲುಪೇಟೆ ಸ್ಮಾರ್ಟ್‌ ಪಬ್ಲಿಕ್‌ ಶಾಲೆಯಲ್ಲಿ ಭಾವಯಾನಕ್ಕೆ ಪ್ರೊ.ಎಸ್.ಮಲ್ಲಣ್ಣ ಚಾಲನೆ ಕೊಟ್ಟರು. | Kannada Prabha

ಸಾರಾಂಶ

ಭಾವಯಾನದ ಪರಿಕಲ್ಪನೆ ಮತ್ತು ನಿರ್ದೇಶನ ಪ್ರೊ.ಎಸ್. ಮಲ್ಲಣ್ಣ ಹಾಗೂ ಸರಿಗಮಪ ಖ್ಯಾತಿ ದಿವ್ಯ ಸಚ್ಚಿದಾನಂದ ಹಾಗೂ ಗಾಯಕ ಪೃಥ್ವಿರಾಜ್ ಹಾಲಹಳ್ಳಿ ಜೊತೆಗೆ ಸುಮಾರು 2 ಗಂಟೆಗಳ ಹಾಡುವ ಮೂಲಕ ಸಭಿಕರು ಹಾಗೂ ವಿದ್ಯಾರ್ಥಿಗಳನ್ನು ರಂಜಿಸಿದರು.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಪಟ್ಟಣದ ಸ್ಮಾರ್ಟ್‌ ಪಬ್ಲಿಕ್‌ ಶಾಲೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮೈಸೂರು ಹಂಸ ಧ್ವನಿ ಸಾಂಸ್ಕೃತಿಕ ಟ್ರಸ್ಟ್‌ ಸಹಯೋಗದಲ್ಲಿ ನಡೆದ ಭಾವಯಾನದಲ್ಲಿ ಕನ್ನಡದ ಭಾವಗೀತೆ, ಜನಪದ ಗೀತೆ ಹಾಗೂ ಹಳೆಯ ಸುಮಧುರ ಕನ್ನಡ ಚಲನ ಚಿತ್ರ ಗೀತೆಗಳ ಗಾಯನ ನಡೆಯಿತು.

ಭಾವಯಾನದ ಪರಿಕಲ್ಪನೆ ಮತ್ತು ನಿರ್ದೇಶನ ಪ್ರೊ.ಎಸ್. ಮಲ್ಲಣ್ಣ ಹಾಗೂ ಸರಿಗಮಪ ಖ್ಯಾತಿ ದಿವ್ಯ ಸಚ್ಚಿದಾನಂದ ಹಾಗೂ ಗಾಯಕ ಪೃಥ್ವಿರಾಜ್ ಹಾಲಹಳ್ಳಿ ಜೊತೆಗೆ ಸುಮಾರು 2 ಗಂಟೆಗಳ ಹಾಡುವ ಮೂಲಕ ಸಭಿಕರು ಹಾಗೂ ವಿದ್ಯಾರ್ಥಿಗಳನ್ನು ರಂಜಿಸಿದರು.

ಎಲ್ಲಾದರೂ ಇರು ಎಂತಾದರು ಇರು, ಬ್ರಹ್ಮ ನಿಂಗೆ ಜೋಡಿಸ್ತೀನಿ, ಕಾಣದ ಕಡಲಿಗೆ ಹಂಬಲಿಸಿದೆ ಮನ, ಅಪಾರ ಕೀರ್ತಿ ಗಳಿಸಿ ಮೆರೆದ ಭವ್ಯ ನಾಡಿದು, ಬಾನಲ್ಲು ನೀನೆ ಭುವಿಯಲ್ಲೂ ನೀನೆ, ಬಾರೆ ಬಾರೆ ಚಂದದ ಚೆಲುವಿನ ತಾರೆ, ಎನ್ನುತ್ತ ಅನೇಕ ಭಾವಗೀತೆ, ಜನಪದ ಗೀತೆ, ಹಳೆಯ ಸುಮಧುರ ಚಿತ್ರಗೀತೆ ಪ್ರಸ್ತುತಪಡಿಸಿ ರಂಜಿಸಿದರು.

ಭಾವಯಾನದಲ್ಲಿ ಸ್ಮಾರ್ಟ್ ಪಬ್ಲಿಕ್ ಶಾಲೆಯ ಗೌರವ ಅಧ್ಯಕ್ಷ ಕೆ.ವಿ. ಗೋಪಾಲಕೃಷ್ಣ ಭಟ್‌, ಅಧ್ಯಕ್ಷ ರಾಜೇಶ್ ಹಾಗೂ ಟ್ರಸ್ಟಿಗಳು, ಪ್ರೇಕ್ಷಕರು, ವಿದ್ಯಾರ್ಥಿಗಳು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕರಾವಳಿಯಲ್ಲಿ ಕ್ಷೀಣಿಸುತ್ತಿದೆ ಕಪ್ಪೆಗಳ ಸಂತತಿ!
ಲಭ್ಯತೆ ಆಧರಿಸಿ ತ.ನಾಡಿಗೆ ಕಾವೇರಿ ನೀರು: ಸಿಎಂ