ದೇವನಹಳ್ಳಿ (ಅ.4): ವಿದೇಶದಿಂದ ಅಕ್ರಮವಾಗಿ ಚಿನ್ನ, ಎಲೆಕ್ಟ್ರಾನಿಕ್ ಉಪಕರಣಗಳು, ಮದ್ಯದ ಬಾಟಲಿಗಳು, ಭಾರೀ ಪ್ರಮಾಣದ ಸಿಗರೆಟ್‌ಗಳನ್ನು ಕಳ್ಳಸಾಗಣೆ ಮಾಡುತ್ತಿದ್ದ 8 ಮಂದಿ ಪ್ರಯಾಣಿಕರನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (ಕೆಐಎ) ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ.ಈ ವೇಳೆ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಕೋಟ್ಯಂತರ ಮೌಲ್ಯದ ಚಿನ್ನಾಭರಣಗಳನ್ನ ಜಪ್ತಿ ಮಾಡಿದ್ದಾರೆ. ಮತ್ತೆರಡು ಪ್ರತ್ಯೇಕ ಪ್ರಕರಣಗಳಲ್ಲಿ ವಿದೇಶದಿಂದ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಮೊಬೈಲ್ ಗಳು ಲ್ಯಾಪ್ಟಾಪ್ ಹಾಗೂ ವಿದೇಶಿ, ಮಧ್ಯದ ಬಾಟಲ್ ಮತ್ತು ಸಿಗರೇಟ್ ಗಳನ್ನ ವಶಕ್ಕೆ ಪಡೆದು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.ಪ್ಯಾಂಟ್ ಒಳಗೆ ಚಿನ್ನದ ಪೌಡರ್ ಲೇಪಿಸಿ ಸಾಗಾಟಶ್ರೀಲಂಕಾದ ಕೊಲಂಬೋದಿಂದ ಬೆಂಗಳೂರಿಗೆ ಬಂದಿಳಿದ ಪ್ರಯಾಣಿಕರ ಪೈಕಿ ಇಬ್ಬರು ಅನುಮಾನಾಸ್ಪದವಾಗಿ ಓಡಾಡುತ್ತಿದ್ದನ್ನು ಗಮನಿಸಿದ ಕಸ್ಟಮ್ ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಅಕ್ರಮವಾಗಿ ಚಿನ್ನ ಸಾಗಾಟ ಮಾಡುತ್ತಿರುವುದು ಪತ್ತೆಯಾಗಿದೆ. ಪ್ರಯಾಣಿಕ ಪ್ಯಾಂಟ್‌ನಲ್ಲಿ ಅಂಟಿನ ಸಹಾಯದಿಂದ ಚಿನ್ನ ಪೌಡರನ್ನ ಲೇಪಿಸಿ ಸಾಗಾಟ ಮಾಡುತ್ತಿದ್ದು ಬೆಳಕಿಗೆ ಬಂದಿದೆ. 74.54 ಗ್ರಾಂ ಚಿನ್ನ ಸಿಕ್ಕಿದೆ. ಮತ್ತೊಬ್ಬ ಪ್ರಯಾಣಿಕ ಗುದ ದ್ವಾರದಲ್ಲಿ ಪೇಸ್ಟ್ ರೂಪದ ಉಂಡೆಗಳನ್ನು ಸಾಗಾಟ ಮಾಡುತ್ತಿದ್ದಿದ್ದು ಪತ್ತೆಯಾಗಿದೆ. ಈ ಪ್ರಯಾಣಿಕನ ಬಳಿ ಪರಿಶೀಲಿಸಿದಾಗ 155.30 ಗ್ರಾಂ ತೂಕದ ಚಿನ್ನ ಸಿಕ್ಕಿದೆ.
ಶಾರ್ಜಾದಿಂದ ಬಂದಂತ 8 ಪ್ರಯಾಣಿಕರು ಬಳಿ ಸಿಕ್ತು ಲ್ಯಾಪ್ಟಾಪ್ ಮೊಬೈಲ್ ವಿದೇಶಿ ಸಿಗರೇಟ್ ಗಳು ಶಾರ್ಜಾದಿಂದ ಬೆಂಗಳೂರಿಗೆ ಆಗಮಿಸಿದ್ದ 8 ಪ್ರಯಾಣಿಕರನ್ನ ಏರ್ ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಬ್ಯಾಂಕುಗಳಲ್ಲಿ ಸಾಗಾಟ ಮಾಡುತ್ತಿದ್ದಂತ 21 ಲ್ಯಾಪ್ಟಾಪ್, 15 ಮೊಬೈಲ್ ಫೋನ್ ಗಳು, 7 ಸಾವಿರ ಸಿಗರೇಟ್ ಗಳು ಪತ್ತೆಯಾಗಿದೆ. ಮಹಿಳಾ ಪ್ರಯಾಣಿಕರು ಒಬ್ಬರ ಬಳಿಯೂ ವಿದೇಶಿಸಿ ಸಿಗರೇಟ್ ಗಳು ಪತ್ತೆಶಾರ್ಜಾದಿಂದ ಆಗಮಿಸಿದ್ದಂತ ವಿಮಾನದಲ್ಲಿ ಪ್ರಯಾಣ ಬೆಳೆಸಿದ್ದ ಮಹಿಳೆಯೊಬ್ಬರು ತಮ್ಮ ಮೂರು ಬ್ಯಾಗಗಳಲ್ಲಿ 49,600 ಸಿಗರೇಟುಗಳನ್ನು ಸಾಗಾಟ ಮಾಡುತ್ತಿದ್ದಿದ್ದು ಕಂಡುಬಂದಿದೆ. ದುಬೈ ನಿಂದ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ 2.6 ಕೆಜಿ ಚಿನ್ನ ವಶಕ್ಕೆದುಬೈ ನಿಂದ ಬೆಂಗಳೂರಿಗೆ ಆಗಮಿಸಿದ್ದಂತ ನಾಲ್ಕು ಜನ ಪ್ರಯಾಣಿಕರನ್ನು ಏರ್ಪೋರ್ಟ್ ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಅವರ ಬಳಿ 2.6 ಕೆಜಿ ಚಿನ್ನ ಪತ್ತೆಯಾಗಿದೆ. ಪ್ರಯಾಣಿಕರು ಬ್ಯಾಗ್ ಗಳಲ್ಲಿ ಬಿಸ್ಕೆಟ್ ರೂಪದಲ್ಲಿ ಚಿನ್ನವನ್ನ ಸಾಗಾಟ ಮಾಡುತ್ತಿದ್ದಿದ್ದು ಬೆಳಕಿಗೆ ಬಂದಿದೆ. ದುಬೈ ಹಾಗೂ ಶ್ರೀಲಂಕಾದ ಪ್ರಕರಣಗಳಲ್ಲಿ 1.77 ಕೋಟಿ ಮೌಲ್ಯದ ಒಟ್ಟು 3 ಕೆಜಿ ಚಿನ್ನ ವಶಪಡಿಸಿಕೊಂಡು ವಿಚಾರಣೆ ನಡೆಸಿದ್ದಾರೆ.