ಕನ್ನಡಪ್ರಭ ವಾರ್ತೆ ಆಲಮಟ್ಟಿ
ಓದಿನ ಜೊತೆಗೆ ಕ್ರೀಡೆಗೂ ಪ್ರಾಧಾನ್ಯತೆ ನೀಡಿದಾಗ ಮಕ್ಕಳ ಸರ್ವಾಂಗೀಣ ವ್ಯಕ್ತಿತ್ವ ವಿಕಸನವಾಗಲು ಸಾಧ್ಯ. ಕ್ರೀಡಾ ಆಟಗಳ ಕೌಶಲ್ಯ ಮಕ್ಕಳಿಗೆ ಬಾಲ್ಯದಲ್ಲಿಯೇ ನೀಡಿ ಪರಿಣಿತಗೊಳಿಸಲು ಗುರು ಬಳಗ ಮುಂದಾಗಬೇಕು ಎಂದು ಹಳಕಟ್ಟಿ ಪ್ರೌಢಶಾಲೆಯ ಚಿತ್ರಕಲಾ ಶಿಕ್ಷಕ ಗುಲಾಬಚಂದ ಜಾಧವ ಹೇಳಿದರು.ಸ್ಥಳೀಯ ಹಡೇ೯ಕರ ಮಂಜಪ್ಪ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆ ಅಂಗಳದಲ್ಲಿ ವಾಷಿ೯ಕ ಕ್ರೀಡಾ ಹಬ್ಬದಲ್ಲಿ ಮಾತನಾಡಿದ ಅವರು, ಪುಟ್ಟ ಮಕ್ಕಳಲ್ಲಿ ಹುದುಗಿರುವ ಪ್ರತಿಭೆ ಹೊರಹಾಕಲು ಶಾಲೆಯಲ್ಲಿ ನಡೆಯವ ಸಾಂಸ್ಕೃತಿಕ, ಕ್ರೀಡಾ ಚಟುವಟಿಕೆಗಳು ಅನುಕೂಲವಾಗುತ್ತವೆ. ಇದರಿಂದ ಮಕ್ಕಳಲ್ಲಿ ಮನರಂಜನೆ ಭಾವ ಅರಳುತ್ತದೆ. ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ಜ್ಞಾನ ತೃಷೆ ವೃದ್ಧಿಸುತ್ತದೆ. ವ್ಯಕ್ತಿತ್ವ ಹರಿತಕ್ಕೆ, ಆತ್ಮವಿಶ್ವಾಸ ಹೆಚ್ಚಳಕ್ಕೆ ಕ್ರೀಡಾ ಪ್ರೇಮ, ಪ್ರಣಯ ಹೊಂದಬೇಕು ಎಂದರು.
ಎಂಎಚ್ಎಂ ಹೈಸ್ಕೂಲಿನ ಮುಖ್ಯ ಶಿಕ್ಷಕ ಎಸ್.ಐ.ಗಿಡ್ಡಪ್ಪಗೋಳ ಅಧ್ಯಕ್ಷತೆ ವಹಿಸಿ ಮಾತನಾಡಿ, ಆರೋಗ್ಯ ಸ್ವಾಸ್ಥ್ಯಕ್ಕೆ ಕ್ರೀಡೆಗಳು ಸಹಕಾರಿ. ಕ್ರೀಡೆ ಉಲ್ಲಾಸ ಭಾವಕ್ಕೆ ಉತ್ತೇಜನ ನೀಡುತ್ತದೆ. ಶಾರೀರಿಕ ಬೆಳವಣಿಗೆಗೆ ಹಿತಕರವಾಗಿದೆ. ಆರೋಗ್ಯ ಭಾಗ್ಯದ ಮುಂದೆ ಎಲ್ಲ ಭಾಗ್ಯಗಳು ನಗಣ್ಯ. ಇಲ್ಲಿ ಚಿಕ್ಕ ಮಕ್ಕಳಲ್ಲಿ ಕ್ರೀಡಾ ಹವ್ಯಾಸ ಬೆಳಗಿಸುತ್ತಿರುವುದು ತುಂಬಾ ಔಚಿತ್ಯ ಪೂರ್ಣವಾಗಿದೆ ಎಂದರು.ಎಂಎಚ್ಎಂ ಹೈಸ್ಕೂಲಿನ ಹಿರಿಯ ಶಿಕ್ಷಕ ಯು.ಎ.ಹಿರೇಮಠ, ಆರ್.ಬಿ.ಪಿ.ಜಿ.ಹಳಕಟ್ಟಿ ಪ್ರೌಢಶಾಲೆಯ ಹಿರಿಯ ದೈಹಿಕ ಶಿಕ್ಷಣ ಶಿಕ್ಷಕ ಎಸ್.ಎಚ್.ನಾಗಣಿ, ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಗಂಗಾಧರ ಹಿರೇಮಠ ಅತಿಥಿಗಳಾಗಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಶಾಲಾ ಮುಖ್ಯ ಗುರುಮಾತೆ ಕವಿತಾ ಮರಡಿ, ಸಹ ಗುರುಮಾತೆಯರಾದ ಸರೋಜಾ ಕಬ್ಬೂರ, ಕಾಂಚನಾ ಕುಂದರಗಿ, ಮಂಜುಳಾ ಸಂಗಾಪೂರ, ಅನು ಪಟೇಲ್, ವಿದ್ಯಾ ಹಿರೇಮಠ, ಶಿಕ್ಷಕರಾದ ಇಬ್ರಾಹಿಂ ಹುನಗುಂದ, ರಾಮಕೃಷ್ಣ ಉದಂಡಿ ಸೇರಿದಂತೆ ಶಾಲಾ ಸಿಬ್ಬಂದಿ ಬಾಬು ಕುಡಗಿ, ಶೇಖು ರಾಠೋಡ, ಪೂಜಾ ಮಹೇಂದ್ರಕರ ಮೊದಲಾದವರು ಉಪಸ್ಥಿತರಿದ್ದರು.
ಮೊಬೈಲ್ ಚಟಕ್ಕೆ ಯುವಜನತೆ ತಮ್ಮ ಬದುಕು ಕರಾಳಮಯ ಮಾಡಿಕೊಳ್ಳುತ್ತಿರುವುದು ವಿಷಾಧನೀಯ. ಆ ನಿಟ್ಟಿನಲ್ಲಿ ಪ್ರಜ್ಞಾವಂತರು ತಮ್ಮ ಮೊಗ್ಗಿನ ಕರಳು ಬಳ್ಳಿಗಳಿಗೆ ಮೊದಲು ಮೊಬೈಲ್ ಗುಂಗಿನಿಂದ ಹೊರತಂದು ಆಟೋಟಗಳ ಸ್ಪಧಾ೯ಕಣದ ಚಟಕ್ಕೆ ಅಣಿಗೊಳಿಸುವುದು ಸೂಕ್ತ. ಕ್ರೀಡೆಗಳಿಂದ ಅದಮ್ಯ, ಅಗಮ್ಯ ಚೇತನ ಶಕ್ತಿ ಪಡೆಯಬಹುದು. ಕ್ರೀಡಾ ಸಾಧಕರಾಗಿ ಮಿಂಚಬಹುದು.ಇದಕ್ಕೆಲ್ಲ ನಮ್ಮ ದಿಟ್ಟ ಮನಸ್ಥಿತಿ ಕಾರಣ.
ಗುಲಾಬಚಂದ ಜಾಧವ, ಹಳಕಟ್ಟಿ ಪ್ರೌಢಶಾಲೆಯ ಚಿತ್ರಕಲಾ ಶಿಕ್ಷಕರು.ಆಟೋಟಗಳಲ್ಲಿ ಸಂಭ್ರಮಿಸಿದ ಎಂಎಚ್ಎಂ ಶಾಲಾ ಚಿಣ್ಣರುಆಲಮಟ್ಟಿ: ಸ್ಥಳೀಯ ಹಡೇ೯ಕರ ಮಂಜಪ್ಪ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆ ಅಂಗಳದಲ್ಲಿ ವಾಷಿ೯ಕ ಕ್ರೀಡಾ ಹಬ್ಬಕ್ಕೆ ವರ್ಣರಂಜಿತ ಚಾಲನೆ ನೀಡಲಾಯಿತು.
ಪುಟ್ಟ ಮಕ್ಕಳು ಅತಿಯೋತ್ಸಾಹದಿಂದ ವಿವಿಧ ಕ್ರೀಡೆಯಲ್ಲಿ ಪಾಲ್ಗೊಂಡು ಕ್ರೀಡಾ ಪ್ರೇಮಭಾವ ಮೆರೆದರು. ಪೇಪರ್ ಕ್ರಾಪ್ಟ್ ಕೈಕಸೂತಿಯ ಕೌಶಲ್ಯದಿಂದ ತಯಾರಿಸಿದ ವಿವಿಧ ಸ್ತರದ ಹೂ ಗುಚ್ಛಗಳು, ಕ್ಯಾಪ್ ಮಕ್ಕಳು ಧರಿಸಿ ಲವಲವಿಕೆಯಿಂದ ಓಡಾಡುತ್ತಿದ್ದ ದೃಶ್ಯ ಆಕರ್ಷಣಿಯವಾಗಿ ಗಮನ ಸೆಳೆಯಿತು. ಪುಷ್ಪ ಗುಚ್ಛಗಳನ್ನು ಅತಿಥಿಗಳಿಗೆ ನೀಡಿ ಪುಟಾಣಿ ಮಕ್ಕಳು ವಿಶೇಷ ರೀತಿಯಲ್ಲಿ ಸ್ವಾಗತಿದ ಪರಿ ಹೃನ್ಮನ ತಣಿಸಿತು. ವಾಷಿ೯ಕೋತ್ಸವದ ಕ್ರೀಡಾಕೂಟಕ್ಕೆ ವೈವಿಧ್ಯಮಯ ಚಾಲನೆ ನೀಡಿ ಚಿಕ್ಕ ಮಕ್ಕಳಲ್ಲಿ ಕ್ರೀಡಾಸಕ್ತಿ ಮೂಡಿಸುವ ಮೂಲಕ ಹುರಿದುಂಬಿಸಿ ಪ್ರೋತ್ಸಾಹಿಸಲಾಯಿತು.ಅಂಗಳದಲ್ಲಿ ಸಂತಸಭಾವ ಅನುವರಣಿಸಿತು. ಕಲರ್ಫೂಲ್ ನಿನಾದ ಮೇಳೈಸಿ ಹಷೋ೯ಲ್ಲಾಸದ ಘಮ ಪರಿಮಳಿಸಿತ್ತು. ಹಳಕಟ್ಟಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಜಿ.ಎಂ.ಕೋಟ್ಯಾಳ ಮಾರ್ಗದರ್ಶನದ ಉಸ್ತುವಾರಿಯಲ್ಲಿ ವಾಷಿ೯ಕೋತ್ಸವದ ಅಂಗವಾಗಿ ಕ್ರೀಡಾ ಹಬ್ಬದ ರಸಗಾನ ನೆರವೇರಿತು. ಬಲೂನ್‌ಗಳ ಶೃಂಗಾರ ಕಾವ್ಯದಲ್ಲಿ ಕ್ರೀಡಾ ಮೊನಚು ಸಾಗಿತು. ಹೊಸತು ಕ್ರೀಡಾ ಸಾಧನ ಸಾಮಗ್ರಿಗಳೊಂದಿಗೆ ಪುಟಾಣಿ ಮೊಗಗಳು ಮಿನುಗಿದವು. ಶಾಲಾ ಗುರುಮಾತೆಯರು, ಗುರುಗಳು ಅದ್ದೂರಿಯಾಗಿ ಕ್ರೀಡಾಕೂಟ ಸಂಯೋಜಿಸಿ ಮಕ್ಕಳಲ್ಲಿ ನವತರಣಿಕೆಯ ಆಟೋಟಗಳ ಅವತರಣಿಕೆ ಸೃಜನಶೀಲವಾಗಿ ಸೃಜೀಸಿ ತಮ್ಮ ಕಾಯಕ ತತ್ವಕ್ಕೆ ಖುಷಿ,ಸಂಭ್ರಮದ ಲಕ್-ಲುಕ್ ಕಂಪಿನ ಭಾಷ್ಪ ಸ್ಪಶಿ೯ಸಿದರು.