ಕನ್ನಡಪ್ರಭ ವಾರ್ತೆ ಉಡುಪಿ
ಸಾಹಿತಿ ದಿ. ಮೇಟಿ ಮುದಿಯಪ್ಪನವರು ಮಾನವೀಯತೆ ಪ್ರಧಾನವಾದ ಬಹುಮುಖ ವ್ಯಕ್ತಿತ್ವ ಹೊಂದಿದವರು. ಕನಕದಾಸರ ಕುರಿತು ಉಡುಪಿಯಲ್ಲಿ ವಿವಾದ ಎದ್ದಾಗ ಅದನ್ನು ಅತ್ಯಂತ ಸೌಹಾರ್ದವಾಗಿ, ಸುಖಾಂತ್ಯವಾಗಿ ಮಾಡಲು ಅದರ ನೇತೃತ್ವವನ್ನು ವಹಿಸಿದವರು. ಮೇಟಿ ಅವರು ಸ್ನೇಹಜೀವಿಯಾಗಿ ಮತ್ತು ಭಾವ ಜೀವಿಯಾಗಿ ನಮ್ಮೆಲ್ಲರ ನಡುವೆ ಇದ್ದು ಅನೇಕ ನೆನಪುಗಳನ್ನು ಇಟ್ಟು ಮರೆಯಾದವರು ಎಂದು ವಿಮರ್ಶಕ, ಲೇಖಕ ಜಿ.ಪಿ. ಪ್ರಭಾಕರ್ ತುಮರಿ ಅವರು ಮೇಟಿ ಅವರೊಂದಿಗಿನ ನಾಲ್ಕು ದಶಕಗಳ ಒಡನಾಟದ ನೆನಪುಗಳನ್ನು ಮಾಡುತ್ತಾ ಮಾತನಾಡಿದರು.
ಯುವ ಕಥಾ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ ಡಾ. ನಮ್ರತಾ ಬಿ., ದ್ವಿತೀಯ ಬಹುಮಾನ ಡಾ. ಜಿ.ಪಿ. ನಾಗರಾಜ್, ಮೆಚ್ಚುಗೆ ಬಹುಮಾನ ಪಡೆದ ರಾಮಾಂಜಿ ನಮ್ಮಭೂಮಿ, ಮಂಜುನಾಥ್ ಕಾರ್ತಟ್ಟು, ಮಂಜುನಾಥ್ ಹಿಲಿಯಾಣ ಅವರಿಗೆ ಬಹುಮಾನ ವಿತರಿಸಲಾಯಿತು.ತೀರ್ಪುಗಾರರಾಗಿ ಸಹಕರಿಸಿದ್ದ ಹಿರಿಯ ಸಾಹಿತಿ ಡಾ. ಜನಾರ್ದನ್ ಭಟ್ ಹಾಗೂ ತುಳು ಸಾಹಿತ್ಯ ಅಕಾಡೆಮಿಗೆ ಸದಸ್ಯರಾಗಿ ಆಯ್ಕೆಯಾದ ಉದ್ಯಾವರ ನಾಗೇಶ್ ಕುಮಾರ್ ಅವರನ್ನು ಗೌರವಿಸಲಾಯಿತು.
ಕಸಾಪ ಉಡುಪಿ ತಾಲೂಕು ಅಧ್ಯಕ್ಷ ರವಿರಾಜ್ ಎಚ್.ಪಿ. ಆಶಯ ಮಾತುಗಳೊಂದಿಗೆ ಸ್ವಾಗತಿಸಿದರು. ಗೌರವ ಕಾರ್ಯದರ್ಶಿ ರಂಜಿನಿ ವಸಂತ್ ವಂದಿಸಿದರು. ಗೌರವ ಕಾರ್ಯದರ್ಶಿ ಜನಾರ್ದನ ಕೊಡವೂರು ನಿರೂಪಿಸಿದರು.
ಸಭಾ ಕಾರ್ಯಕ್ರಮದ ನಂತರ ಡಾ. ಶ್ರೀಪಾದ್ ಭಟ್ ನಿರ್ದೇಶನದ ಮಂಟೇಸ್ವಾಮಿ ಕಾವ್ಯ ಪ್ರಯೋಗ ಪ್ರದರ್ಶನಗೊಂಡಿತು.