ಶಶಿಕಾಂತ ಮೆಂಡೆಗಾರ
ಚುನಾವಣೆಗಳು ಎಂದರೆ ಕೋಟಿ ಕೋಟಿ ಇದ್ದವರೇ ನಾ ಒಲ್ಲೆ ಎಂದು ಹಿಂದೆ ಸರಿಯುವ ಈ ಕಾಲದಲ್ಲಿ ಇಲ್ಲೊಬ್ಬ ವ್ಯಕ್ತಿ ಗ್ರಾಮ ಪಂಚಾಯತಿ, ಜಿಲ್ಲಾ ಪಂಚಾಯತಿ, ವಿಧಾನಸಭೆ, ಲೋಕಸಭೆ, ರಾಜ್ಯಸಭೆ ಸೇರಿದಂತೆ ಸಾರ್ವತ್ರಿಕ ಹಾಗೂ ಉಪ ಚುನಾವಣೆಗಳು ಸೇರಿದಂತೆ 52 ಬಾರಿ ಸ್ಪರ್ಧಿಸಿ ಎಲ್ಲರ ಗಮನ ಸೆಳೆದಿದ್ದಾರೆ. ಆದರೆ, 52 ಬಾರಿಯೂ ಠೇವಣಿಯನ್ನೇ ಕಳೆದುಕೊಂಡು ಹೀನಾಯ ಸೋಲು ಅನುಭವಿಸಿದ್ದಾನೆ.
ಇಂತಹ ವಿಚಿತ್ರ ವ್ಯಕ್ತಿ ಇರುವುದು ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಬರಡೋಲ ಗ್ರಾಮದಲ್ಲಿ. ಇಲ್ಲಿನ ನಿವಾಸಿ ದೀಪಕ ಕಟಕದೊಂಡ ಊರ್ಫ್ ಶ್ರೀ ವೆಂಕಟೇಶ್ವರ ಮಹಾಸ್ವಾಮೀಜಿ. ಇವರಿಗೆ ಇದೀಗ 36 ವರ್ಷ ವಯಸ್ಸು, ಅಷ್ಟರಲ್ಲಿಯೇ ಗ್ರಾಮ ಪಂಚಾಯತಿ, ಜಿಲ್ಲಾ ಪಂಚಾಯತಿ, ವಿಧಾನಸಭೆ, ಲೋಕಸಭೆ, ರಾಜ್ಯಸಭೆ ಸೇರಿದಂತೆ ಸಾರ್ವತ್ರಿಕ ಹಾಗೂ ಉಪ ಚುನಾವಣೆಗಳು ಸೇರಿ 52 ಬಾರಿ ಸ್ಪರ್ಧಿಸಿದ್ದಾರೆ. ಇದೀಗ ವಿಜಯಪುರ ಹಾಗೂ ಸೊಲ್ಲಾಪುರ ಎಂಪಿ ಕ್ಷೇತ್ರಗಳಿಗೂ ಸ್ಪರ್ಧೆ ಮಾಡಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಒಟ್ಟಾರೆಯಾಗಿ 54 ಬಾರಿ ಚುನಾವಣೆಗೆ ಸ್ಪರ್ಧಿಸಿದ ಕೀರ್ತಿ ಇವರದ್ದಾಗಿದೆ. ಸಾಕಷ್ಟು ಬಾರಿ ಪಕ್ಷೇತರನಾಗಿ ಸ್ಪರ್ಧಿಸಿರುವ ಇವರು ಈ ಬಾರಿ ಹಿಂದುಸ್ತಾನ ಜನತಾ ಪಾರ್ಟಿಯಿಂದ ವಿಜಯಪುರದಿಂದ ಕಣಕ್ಕಿಳಿದಿದ್ದಾರೆ.ಯಾವಾಗಿಂದ ಎಲ್ಲೆಲ್ಲಿ ಸ್ಪರ್ಧೆ?:
ಘಟಾನುಘಟಿಗಳ ವಿರುದ್ಧ ಸ್ಪರ್ಧೆ:
ರಾಜಕೀಯ ಆಯ್ಕೆ ಉದ್ದೇಶ:
ಪತ್ನಿ ಕವಿತಾ ಸಹ 5ನೇ ಬಾರಿ ಸ್ಪರ್ಧೆ:
--
ಇದುವರೆಗೂ ಜನರು ದೊಡ್ಡ ದೊಡ್ಡ ಪಕ್ಷಗಳಿಗೆ ಮಣೆ ಹಾಕುತ್ತಿದ್ದಾರೆ. ಇದರಿಂದಾಗಿ ಅವರಿಗೆ ಹಣದ ಮದ ಬಂದಿದ್ದು, ಅವರು ಯಾವುದು ಅಭಿವೃದ್ಧಿ ಮಾಡುತ್ತಿಲ್ಲ. ಹೀಗಾಗಿ ಜನರು ರಾಷ್ಟ್ರೀಯ ಪಕ್ಷಗಳ ಬೆನ್ನು ಹತ್ತಬೇಡಿ, ನಮ್ಮಂತಹ ಸ್ಥಳೀಯರಿಗೂ ಅವಕಾಶ ಕೊಟ್ಟರೆ, ಅಭಿವೃದ್ಧಿ ಮಾಡಲು ಸಹಕಾರಿಯಾಗುತ್ತದೆ. ಹೀಗಾಗಿ ಎಲ್ಲ ಚುನಾವಣೆಗಳಲ್ಲೂ ಸ್ಪರ್ಧೆ ಮಾಡುತ್ತಿದ್ದೇನೆ.
---
52 ಬಾರಿಯೂ ಠೇವಣಿಯೇ ಮರಳಿಲ್ಲದೀಪಕ ಕಟಕದೊಂಡ ಊರ್ಫ್ ಶ್ರೀವೆಂಕಟೇಶ್ವರ ಮಹಾಸ್ವಾಮೀಜಿ ಅವರು ಬಿಕಾಂ ಪದವೀಧರರಾಗಿದ್ದಾರೆ. ಉಪ ಜೀವನಕ್ಕೆ ಕೃಷಿಯೇ ಆಧಾರವಾಗಿದೆ. ಇಷ್ಟಾಗಿಯೂ ದೀಪಕ ಅವರು 52 ಬಾರಿ ಚುನಾವಣೆಯಗಳಲ್ಲಿ ಸ್ಪರ್ಧೆ ಮಾಡುವ ಮೂಲಕ ಚುನಾವಣೆಗೆ ಸ್ಪರ್ಧೆ ಮಾಡಲು ಹಣ ಬೇಕಿಲ್ಲ ಎಂದು ತೋರಿಸಿದ್ದಾರೆ. 54 ಬಾರಿಯಲ್ಲಿ ಒಂದು ಬಾರಿಯೂ ಅದೃಷ್ಟ ಇವರ ಕೈ ಹಿಡಿದಿಲ್ಲ. ಠೇವಣಿಯೂ ಮರಳಿ ಬಂದಿಲ್ಲ. ಆದರೂ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ ಬಿಟ್ಟಿಲ್ಲ ಇವರು.