ಜಿಲ್ಲೆಗೆ ಈವರೆಗೆ ಶೇ.66.82 ರಷ್ಟು ಉಚಿತ ಪಠ್ಯ ಪುಸ್ತಕ ಸರಬರಾಜು

KannadaprabhaNewsNetwork |  
Published : May 28, 2024, 01:00 AM IST
- ಎಸ್‌.ಆರ್‌. ಮಂಜುನಾಥ್‌ | Kannada Prabha

ಸಾರಾಂಶ

ಚಿಕ್ಕಮಗಳೂರು, ರಾಜ್ಯಾದ್ಯಂತ ಮೇ 31 ರಂದು ಪ್ರಾಥಮಿಕ, ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳು ಆರಂಭವಾಗಲಿದ್ದು, ಶಾಲೆ ಆರಂಭಕ್ಕೆ ಬೇಕಾದ ಸಿದ್ಧತೆಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಮಾಡಿಕೊಳ್ಳುತ್ತಿದೆ.

- ತಾಲೂಕು ಕೇಂದ್ರದಿಂದ ಶಾಲೆ ಮುಖ್ಯೋಪಾಧ್ಯಾಯರಿಗೆ ಹಸ್ತಾಂತರ । 31 ರಂದು ಎಲ್ಲಾ ಶಾಲೆಗಳ ಪ್ರಾರಂಭೋತ್ಸವ । ಶಾಲಾ ವ್ಯಾಪ್ತಿಯ ಮಕ್ಕಳಿಂದ ಜಾಥ,

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ರಾಜ್ಯಾದ್ಯಂತ ಮೇ 31 ರಂದು ಪ್ರಾಥಮಿಕ, ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳು ಆರಂಭವಾಗಲಿದ್ದು, ಶಾಲೆ ಆರಂಭಕ್ಕೆ ಬೇಕಾದ ಸಿದ್ಧತೆಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಮಾಡಿಕೊಳ್ಳುತ್ತಿದೆ.

ಜಿಲ್ಲೆಯಲ್ಲಿ 1402 ಸರ್ಕಾರಿ ಶಾಲೆಗಳು ಸೇರಿದಂತೆ ಒಟ್ಟು 1924 ಶಾಲೆಗಳಿದ್ದು, ಇಲ್ಲಿನ ವಿದ್ಯಾರ್ಥಿಗಳಿಗೆ ಹಂಚಿಕೆ ಮಾಡಲು ಈಗಾಗಲೇ ಪಠ್ಯ ಪುಸ್ತಕ ಸರಬರಾಜಾಗುತ್ತಿದ್ದು, ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಿಗೆ ಹಂಚಿಕೆ ಮಾಡಲು ಶೇ. 66.82 ಪಠ್ಯಪುಸ್ತಕಗಳು ಬಂದಿವೆ. ಅನುದಾನ ರಹಿತ ಶಾಲೆಗಳಿಗೆ ವಿತರಿಸಲು ಶೇ. 63.41 ರಷ್ಟು ಪುಸ್ತಕಗಳು ಬಂದಿದೆ.

ಇಲ್ಲಿನ 8 ಶೈಕ್ಷಣಿಕ ವಲಯದಲ್ಲಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗಳಿಗೆ ಬಂದಿರುವ ಪಠ್ಯ ಪುಸ್ತಕಗಳನ್ನು ಶಾಲೆ ಮುಖ್ಯೋಪಾಧ್ಯಾಯರಿಗೆ ಹಸ್ತಾಂತರಿಸಲಾಗುತ್ತಿದೆ. ಅನುದಾನ ರಹಿತ ಶಾಲೆಗಳಿಗೆ ನಿಗಧಿತ ದರವನ್ನು ಸ್ವೀಕರಿಸಿ ಪುಸ್ತಕ ವಿತರಣೆ ಮಾಡಲಾಗುತ್ತಿದೆ. 12 ಲಕ್ಷ ಉಚಿತ ಪುಸ್ತಕ

ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಿಗೆ ಹಂಚಿಕೆ ಮಾಡಲು ಜಿಲ್ಲಾ ಸಾರ್ವಜನಿಕ ಇಲಾಖೆ 12 ಲಕ್ಷ ಪಠ್ಯ ಪುಸ್ತಕದ ಬೇಡಿಕೆಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಿತ್ತು. ಆದರೆ, ಈವರೆಗೆ 8 ಲಕ್ಷ ಪುಸ್ತಕಗಳು ಸರಬರಾಜು ಆಗಿದೆ. ಖಾಸಗಿ ಶಾಲೆ ಗಳಿಗೆ ಮಾರಾಟ ಮಾಡಲು ಸುಮಾರು 5 ಲಕ್ಷ ಪಠ್ಯ ಪುಸ್ತಕದ ಬೇಡಿಕೆ ಸಲ್ಲಿಸಲಾಗಿದ್ದು, ಈವರೆಗೆ 3 ಲಕ್ಷ ಪುಸ್ತಕಗಳು ಬಂದಿವೆ. ಶಾಲೆಗಳು ಆರಂಭವಾಗುವುದರೊಳಗೆ ಬೇಡಿಕೆಯಷ್ಟು ಪುಸ್ತಕಗಳು ಸರಬರಾಜು ಆಗಲಿವೆ ಎಂದು ಶಿಕ್ಷಣ ಇಲಾಖೆ ಅಂದಾಜು ಮಾಡಿದೆ.------- ಬಾಕ್ಸ್‌ ----

-------------------------------------------------------------ವಲಯಬೇಡಿಕೆಸರಬರಾಜು (ಉಚಿತ ಪುಸ್ತಕಗಳು)

------------------------------------------------------------

ಬೀರೂರು14256395518

-----------------------------------------------------------

ಚಿಕ್ಕಮಗಳೂರು284989190289

----------------------------------------------------------

ಕಡೂರು215380 144431

-------------------------------------------------------------

ಕೊಪ್ಪ94967 64237

---------------------------------------------------------

ಮೂಡಿಗೆರೆ136488 91742

---------------------------------------------------

ಎನ್‌.ಆರ್‌.ಪುರ8133955818

--------------------------------------------------

ಶೃಂಗೇರಿ 37461 25052

------------------------------------------------

ತರೀಕೆರೆ206885134827

----------------------------------------------

ಒಟ್ಟು12,00,072 8,01,914

----------------------------------------------------- ಬಾಕ್ಸ್‌ -----

ಮೇ 29 ರಂದು ಶಾಲೆಗಳು ಆರಂಭ ಆಗಲಿವೆ. ಅಂದು ಶಾಲಾ ಸ್ವಚ್ಛತೆ ಹಾಗೂ ಶಾಲೆಯಲ್ಲಿ ವಿವಿಧ ಸುರಕ್ಷತೆ ಕ್ರಮಗಳ ಪರಿಶೀಲಿಸಿ ಸರಿಪಡಿಸಲಾಗುವುದು. ಅದೇ ದಿನ ಎಸ್‌ಡಿಎಂಸಿ ಸಭೆ ನಡೆಸಿ ಶಾಲಾ ಪ್ರಾರಂಭೋತ್ಸವದ ಬಗ್ಗೆ ತಿಳಿಸಲಾಗುವುದು. ಶಾಲಾ ವೇಳಾ ಪಟ್ಟಿ, ವಿಷಯವಾರು ವಾರ್ಷಿಕ ಕ್ರಿಯಾ ಯೋಜನೆ ರಚಿಸುವುದು, ತರಗತಿವಾರು, ಶಿಕ್ಷಕರವಾರು ವೇಳಾಪಟ್ಟಿ ಸಿದ್ಧಪಡಿಸಲಾಗುವುದು.

ಮೇ 31 ರಂದು ಶಾಲಾ ಪ್ರಾರಂಭೋತ್ಸವ ನಡೆಸಲಾಗುವುದು. ಅಂದು ಉತ್ಸಾಹದಿಂದ ಮುಖ್ಯ ಶಿಕ್ಷಕರು, ಸಹ ಶಿಕ್ಷಕರು, ಎಸ್‌ಡಿಎಂಸಿ ಹಾಗೂ ಪೋಷಕರು ಪಾಲ್ಗೊಂಡು, ಸಾಧಕರನ್ನು ಸ್ವಾಗತಿಸುವ ರೀತಿಯಲ್ಲಿ ಮಕ್ಕಳನ್ನು ವಿಶೇಷವಾಗಿ ಸ್ವಾಗತಿಸಬೇಕು. ಅದೇ ದಿನ ಪಾಠ, ಸೇತುಬಂಧ ಶಿಕ್ಷಣ ಆರಂಭಿಸಲಾಗುವುದು, ಬಿಸಿ ಊಟದ ಬದಲು ಸಿಹಿಯೂಟ ನೀಡಲಾಗುವುದು.- ಎಸ್‌.ಆರ್‌. ಮಂಜುನಾಥ್‌

ಡಿಡಿಪಿಐ, ಚಿಕ್ಕಮಗಳೂರು,ಪೋಟೋ ಫೈಲ್‌ ನೇಮ್‌ 27 ಕೆಸಿಕೆಎಂ 1

---ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಿಂದ ಶಾಲೆಗಳಿಗೆ ಪಠ್ಯ ಪುಸ್ತಕಗಳನ್ನು ವಿತರಿಸುತ್ತಿರುವುದು.ಪೋಟೋ ಫೈಲ್‌ ನೇಮ್‌ 27 ಕೆಸಿಕೆಎಂ 2

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ