ಸಹಕಾರಿ ಸಂಘಗಳಿಂದ ಸಾಮಾಜಿಕ ಅಭಿವೃದ್ಧಿ

KannadaprabhaNewsNetwork |  
Published : May 11, 2026, 02:15 AM IST
ರವಳನಾಥ ಕೋ- ಆಪರೇಟಿವ್ ಸಹಕಾರ ಸಂಘವು ಮೊದಲನೇ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಿದ ಸಮಾರಂಭವನ್ನು ಪ್ರೊ. ಎಸ್.ಟಿ. ಬಾಗಲಕೋಟಿ ಉದ್ಘಾಟಿಸಿದರು. | Kannada Prabha

ಸಾರಾಂಶ

ಸಹಕಾರ ಕ್ಷೇತ್ರ ವಿಸ್ತಾರವಾಗಿದ್ದು, ಸಹಕಾರ ತತ್ವದ ಉದಾತ್ತವಾದ ಧ್ಯೇಯವಾಗಿದೆ. ಸಹಕಾರ ಎಂಬುದರ ತತ್ವದ ಆಧಾರದ ಮೇಲೆ ರವಳನಾಥ ಸಂಸ್ಥೆ ನಿಂತಿದೆ.

ಧಾರವಾಡ:

ಸಾಮಾಜಿಕ ಅಭಿವೃದ್ಧಿಯಲ್ಲಿ ಸಹಕಾರ ಸಂಘ, ಸಂಸ್ಥೆಗಳ ಪಾತ್ರ ಅಪಾರ ಎಂದು ಹಾವೇರಿ ವಿವಿ ಕುಲಸಚಿವ ಪ್ರೊ. ಎಸ್.ಟಿ. ಬಾಗಲಕೋಟಿ ಹೇಳಿದರು.

ಶ್ರೀರವಳನಾಥ ಕೋ- ಆಪರೇಟಿವ್ ಸಹಕಾರ ಸಂಘದ ಧಾರವಾಡ ಶಾಖೆಯ ಮೊದಲ ವಾರ್ಷಿಕೋತ್ಸವದಲ್ಲಿ ಮಾತನಾಡಿ, ಸದಸ್ಯರ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಗಾಗಿ ಸಹಕಾರ ಸಂಘಗಳು ಕಾರ್ಯನಿರ್ವಹಿಸಬೇಕು. ಇಂತಹ ಸಹಕಾರಿ ಸಂಘಗಳು ಗ್ರಾಮೀಣ ಮತ್ತು ನಗರ ಪ್ರದೇಶದ ಜನರಿಗೆ ಸಾಲ ಸೌಲಭ್ಯ, ಉಳಿತಾಯ ಯೋಜನೆ, ಕೃಷಿ ಸಹಾಯ, ಸಣ್ಣ ಉದ್ಯಮಗಳಿಗೆ ನೆರವು ಹಾಗೂ ವಿವಿಧ ಆರ್ಥಿಕ ಸೇವೆ ಒದಗಿಸುವುದರಿಂದ ಸಮಾಜ ಅಭಿವೃದ್ಧಿಗೆ ಪೂರಕವಾಗಲಿದೆ ಎಂದರು.

ಸಹಕಾರ ಕ್ಷೇತ್ರ ವಿಸ್ತಾರವಾಗಿದ್ದು, ಸಹಕಾರ ತತ್ವದ ಉದಾತ್ತವಾದ ಧ್ಯೇಯವಾಗಿದೆ. ಸಹಕಾರ ಎಂಬುದರ ತತ್ವದ ಆಧಾರದ ಮೇಲೆ ರವಳನಾಥ ಸಂಸ್ಥೆ ನಿಂತಿದೆ ಎಂದರು. ಡಾ. ಎ.ಎಸ್. ಬೆಲ್ಲದ ಮಾತನಾಡಿದರು.

ರವಳನಾಥ ಸಂಸ್ಥೆಯ ಚೇರ್‌ಮನ್‌ ಡಾ. ಆರ್.ಎಸ್. ನಿಲ್ಪಾಂಕರ ಮಾತನಾಡಿ, ಮುಂಬೈ ಕರ್ನಾಟಕ ಭಾಗದ ಅಜರಾ ಎಂಬ ಸಣ್ಣ ಹಳ್ಳಿಯಲ್ಲಿ ಅಕ್ಟೋಬರ್ 14, 1996ರಂದು ಕೇವಲ ₹ 10000 ಹೂಡಿಕೆಯಿಂದ ಈ ಸಂಸ್ಥೆ ಆರಂಭಿಸಲಾಯಿತು. ಪ್ರಸ್ತುತ ಈ ಸಂಸ್ಥೆಯು ₹600 ಕೋಟಿ ಠೇವಣಿ ಹೊಂದಿದೆ. ಈ ಸಹಕಾರಿ ಸಂಸ್ಥೆಯು ಬೆಳಗಾವಿ, ಚಿಕ್ಕೋಡಿ, ನಿಪ್ಪಾಣಿ ಮತ್ತು ಧಾರವಾಡ ಸೇರಿದಂತೆ ನಾಲ್ಕು ಹಾಗೂ ಮಹಾರಾಷ್ಟ್ರದಲ್ಲಿ 12 ಶಾಖೆಗಳು ಕಾರ್ಯನಿರ್ವಹಿಸುತ್ತಿವೆ ಎಂದರು. ಶಾಖೆಯ ಅಧ್ಯಕ್ಷ ಡಾ. ಶಿವಾನಂದ ಚೌಗುಲೆ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸ್ವಚ್ಛತೆ ಒಂದು ದಿನದ ಆಲೋಚನೆಯಾಗದಿರಲಿ
ಆಧ್ಯಾತ್ಮದ ರತ್ನ ಶಿವಶರಣೆ ಹೇಮರಡ್ಡಿ ಮಲ್ಲಮ್ಮ