ಸಮಾಜೋನ್ನತಿಯೇ ವ್ಯಕ್ತಿಯ ಉನ್ನತಿ: ಮಾಜಿ ಸಚಿವ ಎಸ್.ಎಸ್. ಪಾಟೀಲ

KannadaprabhaNewsNetwork |  
Published : Feb 12, 2026, 02:45 AM IST
ಕಾರ್ಯಕ್ರಮದಲ್ಲಿ ಎಸ್.ಎಸ್. ಪಾಟೀಲ ಮಾತನಾಡಿದರು. | Kannada Prabha

ಸಾರಾಂಶ

ವ್ಯಕ್ತಿಯ ಉನ್ನತಿ ಪರೋಪಕಾರದಲ್ಲಿದೆ. ಕಾಣ್ಕೆಯನ್ನು ಹೊಂದಿ ಕಾರ್ಯನಿರ್ವಹಿಸುವ ಗುಣವನ್ನು ಎಲ್ಲರೂ ಹೊಂದಬೇಕು.

ಗದಗ: ವ್ಯಕ್ತಿಯ ಬೆಳವಣಿಗೆಯಲ್ಲಿ ಸಮಾಜದ ಪಾತ್ರ ದೊಡ್ಡದು. ಸಮಾಜೋನ್ನತಿಗೆ ಶ್ರಮಿಸುವುದೇ ವ್ಯಕ್ತಿಯ ನಿಜವಾದ ಕರ್ತವ್ಯ. ಅನೇಕ ವ್ಯಕ್ತಿಗಳು ಸ್ವಾರ್ಥರಹಿತವಾಗಿ ಪ್ರಯತ್ನ ಮಾಡಿರುವುದಕ್ಕೆ ಸಾಮಾಜಿಕ ವ್ಯವಸ್ಥೆ ಉತ್ತಮವಾಗಿ ರೂಪಗೊಳ್ಳಲಿಕ್ಕೆ ಕಾರಣವಾಗಿದೆ. ಮುಂಡರಗಿ ಪರಿಸರವನ್ನು ಸರ್ವಾಂಗ ಸುಂದರಗೊಳಿಸುವದ ದಿಸೆಯಲ್ಲಿ ವೀರಭದ್ರಪ್ಪ ಕೊಪ್ಪಳ ಹಾಗೂ ಮುದಕನಗೌಡ ಪಾಟೀಲ ಅವರ ಕೊಡುಗೆ ಅಪಾರ ಎಂದು ಮಾಜಿ ಸಚಿವ ಎಸ್.ಎಸ್. ಪಾಟೀಲ ತಿಳಿಸಿದರು.ನಗರದ ಕಸಾಪ ಕಾರ್ಯಾಲಯದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ವತಿಯಿಂದ ವೀರಭದ್ರಪ್ಪ ಕೊಪ್ಪಳ ಹಾಗೂ ಮುದಕನಗೌಡ ಪಾಟೀಲ ಅವರ ಸ್ಮರಣಾರ್ಥ ಜರುಗಿದ ದತ್ತಿ ಉಪನ್ಯಾಸದಲ್ಲಿ ಮಾತನಾಡಿ, ವ್ಯಕ್ತಿಯ ಉನ್ನತಿ ಪರೋಪಕಾರದಲ್ಲಿದೆ. ಕಾಣ್ಕೆಯನ್ನು ಹೊಂದಿ ಕಾರ್ಯನಿರ್ವಹಿಸುವ ಗುಣವನ್ನು ಎಲ್ಲರೂ ಹೊಂದಬೇಕೆಂದರು.ಎಸ್.ಎಸ್. ಪಟ್ಟಣಶೆಟ್ಟರ ಉಪನ್ಯಾಸ ನೀಡಿ, ಶಿಕ್ಷಣ, ಮೂಲ ಸೌಕರ್ಯಗಳ ದೃಷ್ಟಿಯಿಂದ ಅತ್ಯಂತ ಹಿಂದುಳಿದ ಮುಂಡರಗಿ ಪರಿಸರವನ್ನು ಉತ್ತಮಪಡಿಸುವ ದಿಸೆಯಲ್ಲಿ ಸದಾ ಚಿಂತನಶೀಲರಾಗಿದ್ದ ವೀರಭದ್ರಪ್ಪನವರು ಹಾಗೂ ಮುದಕನಗೌಡರು ಅದಕ್ಕೆ ಪೂರಕವಾದ ವಾತಾವರಣವನ್ನು ನಿರ್ಮಿಸಿದರು.

ವೀರಭದ್ರಪ್ಪನವರು ಪ್ರಪ್ರಥಮವಾಗಿ ಶಿಕ್ಷಣ ಸಂಸ್ಥೆ ಹಾಗೂ ಪ್ರಸಾದ ನಿಲಯವನ್ನು ಪ್ರಾರಂಭಿಸಿ ಅಕ್ಷರ ಕ್ರಾಂತಿಗೆ ನಾಂದಿ ಹಾಡಿದರು. ಅನೇಕ ಸಂಸ್ಥೆಗಳ ಪದಾಧಿಕಾರಿಗಳಾಗಿ ಜನರ ಅಗತ್ಯತೆಗಳನ್ನು ಪೂರೈಸುವ ದಿಸೆಯಲ್ಲಿ ಸರ್ಕಾರ ಮತ್ತು ಜನರ ಮಧ್ಯೆ ಕೊಂಡಿಯಾಗಿ ಕರ್ತವ್ಯ ನಿರ್ವಹಿಸಿದರು.

ಕುಡಿಯುವ ನೀರು, ಸಾರಿಗೆ ಸಂಪರ್ಕ, ಕೃಷಿಗೆ ಸಂಬಂಧಿಸಿದಂತೆ ನೀಲನಕ್ಷೆಯನ್ನು ತಯಾರಿಸಿ ಜಾರಿಗಾಗಿ ಒತ್ತಾಯಿಸಿದರು. ಅವರ ಕನಸು ನನಸಾಗಿ ಮುಂಡರಗಿ ಪರಿಸರ ಸಮೃದ್ಧವಾಗಿ ಬೆಳೆಯಲು ಕಾರಣವಾಗಿದೆ ಎಂದರು.ಅಧ್ಯಕ್ಷತೆ ವಹಿಸಿದ್ದ ಕಸಾಪ ಜಿಲ್ಲಾಧ್ಯಕ್ಷ ವಿವೇಕಾನಂದಗೌಡ ಪಾಟೀಲ ಮಾತನಾಡಿದರು. ಜಿ.ಎಸ್. ಶಿವರುದ್ರಪ್ಪನವರ ಜನ್ಮದಿನದ ಅಂಗವಾಗಿ ಭಾವಚಿತ್ರಕ್ಕೆ ಪುಷ್ಟನಮನ ಸಲ್ಲಿಸಲಾಯಿತು. ಶಿವಯೋಗಿ ಕೊಪ್ಪಳ, ಸಿ.ಕೆ.ಎಚ್. ಕಡಣಿ ಶಾಸ್ತ್ರಿ, ಎಚ್.ಬಿ. ಪೂಜಾರ, ವಿ.ಎಸ್. ದಲಾಲಿ, ಅಂದಾನೆಪ್ಪ ವಿಭೂತಿ, ಕೆ.ಎಸ್. ಪಲ್ಲೇದ, ಸತೀಶ ಚನ್ನಪ್ಪಗೌಡ್ರ, ಅಮರೇಶ ರಾಂಪೂರ, ವಿಶ್ವನಾಥ ಕೊಪ್ಪಳ, ಶಿವಕುಮಾರ ಹೊರಡಿ, ಬಿ.ಬಿ. ಹೊಳಗುಂದಿ, ಮಂಜುನಾಥ ಕೊಪ್ಪಳ, ಜಗನ್ನಾಥ ಟಿಕಾನದಾರ, ಬಸವರಾಜ ನೆಲಜೇರಿ, ಅಶೋಕ ಹಾದಿ, ಜೆ.ಎ. ಪಾಟೀಲ, ಬಿ.ಎಸ್. ಬಣಕಾರ, ಅಶೋಕ ಸುತಾರ, ದಿಲೀಪಕುಮಾರ ಮುಗಳಿ, ಶಶಿಕಾಂತ ಕೊರ್ಲಹಳ್ಳಿ, ಶೇಖಣ್ಣ ಕಳಸಾಪೂರಶೆಟ್ರ, ಮಲ್ಲಪ್ಪ ಡೋಣಿ, ಈರಣ್ಣ ಮಣಕವಾಡ, ಎಸ್.ಪಿ. ಗೌಳಿ, ಉಮಾ ಪಾರ್ವತಿಮಠ, ಅಕ್ಕಮ್ಮ ಪಾರ್ವತಿಮಠ, ಶೈಲಜಾ ಗಿಡ್ನಂದಿ, ಮಲ್ಲಿಕಾರ್ಜುನ ನಿಂಗೋಜಿ, ರೇವಯ್ಯ ಹಿರೇಮಠ ಸೇರಿದಂತೆ ಇತರರು ಇದ್ದರು. ಡಾ. ದತ್ತಪ್ರಸನ್ನ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಹುಲ ಗಿಡ್ನಂದಿ ನಿರೂಪಿಸಿದರು. ಕಿಶೋರಬಾಬು ನಾಗರಕಟ್ಟಿ ಸ್ವಾಗತಿಸಿದರು. ಡಿ.ಎಸ್. ಬಾಪುರಿ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಬಲೀಕರಣ ಆಸೆ ಬಿಜೆಪಿಯಿಂದ ಸಾಕಾರ
ಶೈಕ್ಷಣಿಕ ಹಿತದೃಷ್ಟಿಯಿಂದ ೧೨ ವಸತಿ ನಿಲಯಗಳು ಮಂಜೂರು