ಕುಣಿಗಲ್ ಶಾಸಕರು ದ್ವೇಷ ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸಿ ಎನ್‌ಡಿಎ ಮುಖಂಡರ ನೇತೃತ್ವದಲ್ಲಿ ಸಾವಿರಾರು ಸಹಕಾರ ಸಂಘದ ಸದಸ್ಯರು ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಕಚೇರಿಯಲ್ಲಿ ಮನವಿ ಸಲ್ಲಿಸಿದರು.
ಕನ್ನಡಪ್ರಭ ವಾರ್ತೆ ಕುಣಿಗಲ್
ಸಂತೆಮಾವತ್ತೂರು ಸಹಕಾರ ಸಂಘದ ಚುನಾವಣೆಯಲ್ಲಿ ಚುನಾವಣಾ ಅಧಿಕಾರಿ ಅಕ್ರಮವಾಗಿ ಚುನಾವಣೆ ನಡೆಸಿದ್ದಾರೆ ಎಂದು ಸಾಬೀತಾಗಿದ್ದರೂ ಕೂಡ ಎನ್.ಡಿ.ಎ ಮುಖಂಡರ ಮೇಲೆ ಪ್ರಕರಣ ದಾಖಲಿಸುವ ಮೂಲಕ ಕುಣಿಗಲ್ ಶಾಸಕರು ದ್ವೇಷ ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸಿ ಎನ್‌ಡಿಎ ಮುಖಂಡರ ನೇತೃತ್ವದಲ್ಲಿ ಸಾವಿರಾರು ಸಹಕಾರ ಸಂಘದ ಸದಸ್ಯರು ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಕಚೇರಿಯಲ್ಲಿ ಮನವಿ ಸಲ್ಲಿಸಿದರು. ಕುಣಿಗಲ್ ಪಟ್ಟಣದ ಹುಚ್ಚ ಮಾಸ್ತಿಗೌಡ ವೃತ್ತದಲ್ಲಿ ಸಂಘಟನೆಗೊಂಡ ಸಾವಿರಾರು ಸಹಕಾರಿ ಕ್ಷೇತ್ರದ ಸದಸ್ಯರು, ಶಾಸಕರು ಹಾಗೂ ಸರ್ಕಾರ ಮತ್ತು ಅಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಮುಖಂಡ ಡಿ ಕೃಷ್ಣಕುಮಾರ್ ನೇರವಾದ ಹಾಗೂ ನಿಷ್ಪಕ್ಷಪಾತವಾದ ಪಾರದರ್ಶಕತೆಯ ಚುನಾವಣೆಯನ್ನು ನಡೆಸುವಲ್ಲಿ ತಾಲೂಕು ಆಡಳಿತ ಹಾಗೂ ಶಾಸಕರು ವಿಫಲರಾಗಿದ್ದಾರೆ. ಏಕ ಪಕ್ಷಿಯವಾಗಿ ಚುನಾವಣೆ ನಡೆಸಿದ್ದು ಸಾಬೀತಾಗಿದೆ. ಈ ಸಂಬಂಧ ಹಲವಾರು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಇಂತಹ ಸಂದರ್ಭದಲ್ಲಿ ಕೂಡ ವಿರೋಧ ಪಕ್ಷದ ನಾಯಕರ ಮೇಲೆ ಸುಳ್ಳು ಪ್ರಕರಣಗಳನ್ನು ದಾಖಲಿಸುವ ಕೆಟ್ಟ ಕೆಲಸಕ್ಕೆ ಶಾಸಕರು ಕೈ ಹಾಕಿರುವುದು ಖಂಡನೀಯ ರಾಜಕೀಯ ಇತಿಹಾಸದಲ್ಲಿ ಇಂತಹ ದ್ವೇಷದ ರಾಜಕಾರಣ ಮಾಡುವುದನ್ನು ನಾವು ಸಹಿಸುವುದಿಲ್ಲ ಎಂದರು. ಮೈತ್ರಿ ಕೂಟಕ್ಕೆ ಮತದಾರರು ನಮ್ಮ ಬೆಂಬಲದಲ್ಲಿದ್ದಾರೆ, ಕೇವಲ ಇನ್ನೂ ಎರಡು ವರ್ಷಗಳು ಮಾತ್ರ ನಿಮ್ಮ ಅವಧಿ ಮುಂದಿನ ದಿನಗಳಲ್ಲಿ ನಾವು ಅಧಿಕಾರಕ್ಕೆ ಬರುವುದು ಶತಸಿದ್ಧ. ನಮ್ಮಲ್ಲಿ ಯಾವುದೇ ಗೊಂದಲಗಳಿಲ್ಲ ಎರಡು ಪಕ್ಷದಿಂದ ಒಬ್ಬರನ್ನು ನಾವು ಶಾಸಕರ ಸ್ಥಾನಕ್ಕೆ ಸ್ಪರ್ಧಿಸುತ್ತೇವೆ. ಮುಂದಿನ ಚುನಾವಣೆಯಲ್ಲಿ ಜನ ಸರಿಯಾದ ತೀರ್ಪು ನೀಡಲಿದ್ದಾರೆ. ಚುನಾವಣಾ ಸಮಯದಲ್ಲಿ ಅಕ್ರಮ ಸಾಬೀತಾಗಿರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ. ಆದರೂ ಕೂಡ ವಾಮ ಮಾರ್ಗದಲ್ಲಿ ಸಹಕಾರ ಕ್ಷೇತ್ರವನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳುವ ಕೆಟ್ಟ ರಾಜಕೀಯ ನೀತಿಯನ್ನು ಶಾಸಕರು ಕೈ ಬಿಡಬೇಕು ಮುಂದಿನ ದಿನಗಳಲ್ಲಿ ನಾವು ಅದಕ್ಕೆ ಸರಿಯಾದ ಉತ್ತರ ನೀಡುತ್ತೇವೆ ಎಂದರು. ಜೆಡಿಎಸ್ ಮುಖಂಡರಾದ ಡಾ. ರವಿ ಬಾಬು ಮಾತನಾಡಿ, ಹಣದಿಂದ ಖರೀದಿ ಮಾಡಿರುವ ಬಹುತೇಕ ಸದಸ್ಯರುಗಳು ತಮ್ಮ ಬಳಿ ಸದಾ ಕಾಲ ಇರುವುದಿಲ್ಲ ಎಂಬುದು ನೆನಪಿರಲಿ. ಮುಂದಿನ ದಿನಗಳಲ್ಲಿ ಕಾಲ ಬದಲಾಗುತ್ತಿದೆ ಸರಿಯಾದ ಕಾಲಕ್ಕೆ ಸರಿಯಾದ ತೀರ್ಪನ್ನು ಜನ ನೀಡುತ್ತಾರೆ ಎಚ್ಚರವಾಗಿರಿ. ಚುನಾವಣಾ ಅಧಿಕಾರಿ ಮಾಡಿರುವ ಅಕ್ರಮಗಳ ಬಗ್ಗೆ ಈಗಾಗಲೇ ಸಾರ್ವಜನಿಕವಾಗಿ ಬಟಾ ಬಯಲಾಗಿದೆ. ಆದರೂ ಕೂಡ ಆತನನ್ನು ರಕ್ಷಿಸುವ ಸಲುವಾಗಿ ಮತ್ತು ನಮ್ಮ ಮೇಲೆ ಕೆಟ್ಟ ದ್ವೇಷದ ರಾಜಕೀಯ ಮಾಡುತ್ತಿದ್ದಾರೆ ಎನ್‌ಡಿಎ ಕಾರ್ಯಕರ್ತರಿಗೆ ಯಾವುದೇ ತೊಂದರೆ ಆದರೂ ಕೂಡ ನಾವು ಸಹಿಸುವುದಿಲ್ಲ ಎಂದರು.ಈ ವೇಳೆ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷರಾದ ವೈಎಚ್ ಹುಚ್ಚಯ್ಯ ಬಿಜೆಪಿ ಮಾಜಿ ತಾಲೂಕು ಅಧ್ಯಕ್ಷ ಬಲರಾಮ, ಬಿಜೆಪಿ ತಾಲೂಕು ಅಧ್ಯಕ್ಷ ಕೊಡಿಗೆಹಳ್ಳಿ ದಿನೇಶ್, ಮಾತನಾಡಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.