ಕನ್ನಡಪ್ರಭ ವಾರ್ತೆ ಮೈಸೂರು
ನಗರದ ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನಲ್ಲಿ ವಿದ್ಯಾರ್ಥಿನಿಯರಿಗೆ ಎಂಐಎಚ್ಎಂಸಿನಲ್ಲಿ ಆಹಾರ- ಆತಿಥ್ಯೋದ್ಯಮ ಕ್ಷೇತ್ರದಲ್ಲಿ ಲಭ್ಯವಿರುವ ವೃತ್ತಿಪರ ಕೋರ್ಸ್ ಗಳು ಹಾಗೂ ಜಾಗತಿಕ ಅವಕಾಶಗಳ ಕುರಿತ ಒಂದು ದಿನದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಭಾರತೀಯ ಬಾಣಸಿಗರಿಗೆ ಇಂದು ವಿಶ್ವ ಮಟ್ಟದಲ್ಲಿ ಅವರ ಕೌಶಲ್ಯದ ಕಾರಣಕ್ಕೆ ಬಹಳ ಬೇಡಿಕೆ ಇದೆ. ಕೃತಕ ಬುದ್ದಿಮತ್ತೆ ಈ ಕ್ಷೇತ್ರಕ್ಕೆ ತಟ್ಟುವುದಿಲ್ಲ. ಆಹಾರ ವಿಜ್ಞಾನ ವಿದ್ಯಾರ್ಥಿಗಳು ಈ ಕೋರ್ಸ್ ಮೂಲಕ ಅವಕಾಶಗಳನ್ನು ಇನ್ನಷ್ಟು ವಿಸ್ತರಿಸಿಕೊಳ್ಳಬಹುದು ಎಂದರು.ಇಂದು ಪ್ರತಿಯೊಬ್ಬರೂ ಕೂಡಾ ತಾವು ಸೇವಿಸುವ ಆಹಾರ, ಡಯಟ್, ಪೌಷ್ಟಿಕಾಂಶಗಳ ಬಗ್ಗೆ ಹೆಚ್ಚು ಹೆಚ್ಚು ಜಾಗೃತರಾಗುತ್ತಿದ್ದರೆ. ಇದು, ಈ ಕ್ಷೇತ್ರದಲ್ಲಿನ ಉದ್ಯೋಗಾವಕಾಶವನ್ನು ಇನ್ನಷ್ಟು ಹೆಚ್ಚಿಸಿದೆ. ಮೆನು ಪ್ಲಾನರ್ ನಿಂದ ಆರಂಭಗೊಳ್ಳುವ ಉದ್ಯೋಗಾವಕಾಶಕ್ಕೆ ಅವಾಕಾಶಗಳು ಉಜ್ವಲವಾಗಿವೆ. ಕಾರ್ಪೊರೇಟ್ ಕಿಚನ್, ಡಯಟ್ ಚೆಫ್ ಗಳು, ಹೀಗೆ ಈ ಕ್ಷೇತ್ರ ವಿಸ್ತೃತಗೊಳ್ಳುತ್ತಿದೆ ಎಂದರು.
ನೀವು ಕೌಶಲ್ಯ ಬೆಳೆಸಿಕೊಂಡರೆ ನಿಮ್ಮ ಕನಸುಗಳನ್ನು ನನಸಾಗಿಸುವುದು ಕಷ್ಟವಲ್ಲ ಎಂದರು.
ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನ ಆಹಾರ ವಿಜ್ಞಾನ ಹಾಗೂ ಪೌಷ್ಟಿಕತೆ ವಿಭಾಗದ ಸಹ ಪ್ರಾಧ್ಯಾಪಕಿ ಡಾ.ಎಂ. ನಮ್ರತಾ ಇದ್ದರು. ಎಂಐಎಚ್ಎಂಸಿ ಪ್ರಾಂಶುಪಾಲ ವಿಕ್ಟರ್ ಹೇಮಂತ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು.