ಕನ್ನಡಪ್ರಭ ವಾರ್ತೆ ಲಕ್ಷ್ಮೇಶ್ವರ
ಬುಧವಾರ ಸಮೀಪದ ಮುಕ್ತಿಮಂದಿರ ಕ್ಷೇತ್ರದಲ್ಲಿ ಲಿಂ. ರಂಭಾಪುರಿ ವೀರಗಂಗಾಧರ ಜಗದ್ಗುರುಗಳ ಲಿಂಗಾಂಗ ಸಾಮರಸ್ಯದ ೪೪ನೇ ಪುಣ್ಯಾರಾಧನೆ ಹಾಗೂ ಧರ್ಮ ಸಮಾರಂಭದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಸಮಾಜದಲ್ಲಿ ಶಾಂತಿ ಸಾಮರಸ್ಯ ಸ್ಥಾಪಿಸುವುದು ಗುರುವಿನ ಕಾರ್ಯವಾಗಿದೆ. ಧರ್ಮದ ನಿಜವಾದ ತತ್ವಗಳನ್ನು ಜನರಿಗೆ ತಿಳಿಸುವುದು ಮತ್ತು ಬಡವರ, ದುರ್ಬಲರ, ಮಹಿಳೆಯರ ಏಳಿಗೆಗಾಗಿ ಶ್ರಮಿಸುವುದು ಗುರುವಿನ ಕರ್ತವ್ಯವಾಗಿದೆ. ಗುರು ಧರ್ಮದ ದಾರಿದೀಪ. ಅವರ ಮಹಿಮೆ ಜ್ಞಾನದಲ್ಲಿ ಮಾತ್ರವಲ್ಲ ಸಮಾಜಕ್ಕೆ ನೀಡುವ ಬೋಧನೆ ಮತ್ತು ಉತ್ತಮ ಸಂಸ್ಕಾರಗಳಲ್ಲಿ ಅಡಗಿದೆ. ಗುರುವಿನ ಮಾರ್ಗದರ್ಶನದಿಂದ ವ್ಯಕ್ತಿಯ ಬದುಕು ಬೆಳಗುತ್ತದೆ. ಸಮಾಜದಲ್ಲಿ ಧರ್ಮ, ಶಾಂತಿ ಮತ್ತು ಮಾನವೀಯತೆ ನೆಲೆಸುತ್ತದೆ ಎಂದರು.ಸಾನಿಧ್ಯ ವಹಿಸಿದ್ದ ಉಜ್ಜಯಿನಿ ಸಿದ್ದಲಿಂಗ ಜಗದ್ಗುರುಗಳು ಆಶೀರ್ವಚನ ನೀಡಿ, ಧರ್ಮ ಮತ್ತು ಆಧ್ಯಾತ್ಮಿಕ ಮೌಲ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಸತ್ಯ ಶಾಂತಿ ಕರುಣೆ ಮತ್ತು ಮಾನವೀಯತೆ ಪಾಲಿಸಬೇಕು. ಸಮಾಜದಲ್ಲಿ ಐಕ್ಯತೆ ಪರಸ್ಪರ ಗೌರವ ಮತ್ತು ಸಹಬಾಳ್ವೆ ಸದ್ಗುಣ ಸಂಪಾದಿಸಿಕೊಳ್ಳಬೇಕು ಎಂದರು.
ವಿಧಾನಸಭೆಯ ಸಭಾಧ್ಯಕ್ಷ ಜಿ.ಎಸ್. ಪಾಟೀಲ, ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ ಮಾತನಾಡಿದರು.
ಸಭೆಯಲ್ಲಿ ಶಾಸಕ ಡಾ. ಚಂದ್ರು ಲಮಾಣಿ, ಮಾಜಿ ಶಾಸಕ ಜಿ.ಎಸ್.ಗಡ್ಡದ್ದೇವರಮಠ, ರಾಮಣ್ಣ ಲಮಾಣಿ, ಐ.ಎಸ್. ಚಿಕ್ಕನಗೌಡರ, ಟಿ. ಈಶ್ವರ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
ಈ ವೇಳೆ ಎಮ್ಮಿಗನೂರು, ಬಂಕಾಪುರ, ಗಿರಿಸಾಗರ, ಬಿಲ್ವಕೆರೂರು, ಸುಳ್ಳ, ಸಿದ್ದರಬೆಟ್ಟಕ್ಷೇತ್ರ, ಮಳಲಿ ಸಂಸ್ಥಾನಮಠ, ಹಿರೇವಡ್ಡಟ್ಟಿ, ಕಲಾದಗಿ, ಅರಗಿನದೋಣಿ, ಕರೆವಾಡಿಮಠ ಮೊದಲಾದ ಮಠಾಧೀಶರು ಮತ್ತು ಗಣ್ಯರು ಪಾಲ್ಗೊಂಡಿದ್ದರು. ಸವಣೂರಿನ ಡಾ. ಗುರುಪಾದಯ್ಯ ಸಾಲಿಮಠ ನಿರೂಪಿಸಿದರು.