ಕನ್ನಡಪ್ರಭ ವಾರ್ತೆ ಮಂಡ್ಯ
ನಗರದಲ್ಲಿರುವ ಬಾಲ ಭವನದಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಪ್ರಯುಕ್ತ ತಂತ್ರಜ್ಞಾನದ ಪರಿಚಯ-ಪವಾಡ ರಹಸ್ಯ ಬಯಲು ಮತ್ತು ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ ಪ್ರಮಾಣ ಪತ್ರ ಹಾಗೂ ಪದಕ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಸಾಮಾನ್ಯ ಪ್ಲಾಸ್ಟಿಕ್ ಮಣ್ಣಿನಲ್ಲಿ ಕರಗಲು ನೂರಾರು ವರ್ಷ ಬೇಕಾಗುತ್ತದೆ. ಆದರೆ, ಈಗ ವಿಜ್ಞಾನಿಗಳು ಸುಲಭವಾಗಿ ಕರಗುವ ಪರ್ಯಾಯಗಳನ್ನು ಕಂಡುಹಿಡಿದಿದ್ದಾರೆ. ಬಯೋಪ್ಲಾಸ್ಟಿಕ್‌ನ್ನು ಮೈಸೂರಿನ ಸಂಸ್ಥೆಯು ಮಣ್ಣಿನಲ್ಲಿ ಕರಗುವ ‘ಪರಿಸರ ಸ್ನೇಹಿ ಪ್ಲಾಸ್ಟಿಕ್ ಚೀಲಗಳನ್ನು’ ಅಭಿವೃದ್ಧಿಪಡಿಸಿದೆ, ಬಿದಿರಿನ ಪ್ಲಾಸ್ಟಿಕ್, ಬಿದಿರಿನ ಸೆಲ್ಯುಲೋಸ್ ಬಳಸಿ ಕೇವಲ ೫೦ ದಿನಗಳಲ್ಲಿ ಮಣ್ಣಿನಲ್ಲಿ ಕರಗುವ ಪ್ಲಾಸ್ಟಿಕ್‌ನ್ನು ಸಂಶೋಧಕರು ತಯಾರಿಸಿದ್ದಾರೆ ಎಂದರು.ನ್ಯಾನೋ ಮತ್ತು ಎಐ ತಂತ್ರಜ್ಞಾನದಿಂದ ಸ್ಮಾರ್ಟ್ ವಿಂಗಡಣೆ ಮಾಡಲಾಗುತ್ತಿದೆ, ಕೃತಕ ಬುದ್ಧಿಮತ್ತೆ ಆಧಾರಿತ ರೋಬೋಟ್‌ಗಳು ವಿವಿಧ ರೀತಿಯ ಪ್ಲಾಸ್ಟಿಕ್‌ಗಳನ್ನು ನಿಖರವಾಗಿ ವಿಂಗಡಿಸಿ ಮರುಬಳಕೆಗೆ ಕಳುಹಿಸುತ್ತಿವೆ, ನ್ಯಾನೋ-ಕಾಂಪೋಸಿಟ್ಸ್: ಪ್ಲಾಸ್ಟಿಕ್ ಶಕ್ತಿ ಮತ್ತು ಬಾಳಿಕೆಯನ್ನು ಹೆಚ್ಚಿಸಲು ನ್ಯಾನೋ ಕಣಗಳನ್ನು ಸೇರಿಸಲಾಗುತ್ತಿದೆ, ಇದರಿಂದ ಕಡಿಮೆ ಪ್ಲಾಸ್ಟಿಕ್ ಬಳಸಿ ಬಲಿಷ್ಠ ವಸ್ತುಗಳನ್ನು ತಯಾರಿಸಬಹುದು ಎಂದರು.