ವಚನಗಳಿಂದ ಸಮಸ್ಯೆಗಳಿಗೆ ಪರಿಹಾರ ಲಭ್ಯ: ಸಿದ್ಧಲಿಂಗ ಶ್ರೀ

KannadaprabhaNewsNetwork |  
Published : Aug 27, 2026, 01:30 AM IST
ಫೋಟೋ- ಸೊನ್ನದ | Kannada Prabha

ಸಾರಾಂಶ

ಬಸವಾದಿ ಶರಣರ ಅನುಭಾವ ತುಂಬಿದ ವಚನ ಸಾಹಿತ್ಯ ನಮ್ಮ ಜೀವನದ ಅಸ್ಮಿತೆಯಾಗಿದೆ. ಪ್ರತಿಯೊಂದು ವಚನಗಳು ಜೀವಸತ್ವದಿಂದ ಕೂಡಿವೆ. ನುಡಿದಂತೆ ನಡೆದಿರುವಾಗ ಅವು ವಚನಗಳಾಗಿ ಹುಟ್ಟಿದವು. ಇಂಥ ವಚನ ಸಾಹಿತ್ಯದಿಂದ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಾಣಬಹುದು ಎಂದು ಕಲಬುರಗಿ ವಿಭಾಗ ವಚನ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ನೆಲೋಗಿ ವಿರಕ್ತ ಮಠದ ಶ್ರೀ ಸಿದ್ಧಲಿಂಗ ಮಹಸ್ವಾಮಿಗಳು ಅವರು ನುಡಿದರು.

ಕನ್ನಡಪ್ರಭ ವಾರ್ತೆ ಕಲಬುರಗಿ ಬಸವಾದಿ ಶರಣರ ಅನುಭಾವ ತುಂಬಿದ ವಚನ ಸಾಹಿತ್ಯ ನಮ್ಮ ಜೀವನದ ಅಸ್ಮಿತೆಯಾಗಿದೆ. ಪ್ರತಿಯೊಂದು ವಚನಗಳು ಜೀವಸತ್ವದಿಂದ ಕೂಡಿವೆ. ನುಡಿದಂತೆ ನಡೆದಿರುವಾಗ ಅವು ವಚನಗಳಾಗಿ ಹುಟ್ಟಿದವು. ಇಂಥ ವಚನ ಸಾಹಿತ್ಯದಿಂದ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಾಣಬಹುದು ಎಂದು ಕಲಬುರಗಿ ವಿಭಾಗ ವಚನ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ನೆಲೋಗಿ ವಿರಕ್ತ ಮಠದ ಶ್ರೀ ಸಿದ್ಧಲಿಂಗ ಮಹಸ್ವಾಮಿಗಳು ಅವರು ನುಡಿದರು.ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್, ಕರ್ನಾಟಕ ವಚನ ಸಾಹಿತ್ಯ ಅಕಾಡೆಮಿಯ ಸಹಯೋಗದೊಂದಿಗೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಡಿಯಲ್ಲಿ ರೂಪಿಸಿರುವ ಕಲಬುರಗಿ ವಿಭಾಗ ಪ್ರಥಮ ವಚನ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾದ ಹಿನ್ನೆಲೆ ನಗರದ ಸುಲಫಲ ಮಠದಲ್ಲಿ ಏರ್ಪಡಿಸಿದ ಕಾರ್ಯಕ್ರಮದಲ್ಲಿ ಪರಿಷತ್ ವತಿಯಿಂದ ನೀಡಿದ ಅಧಿಕೃತ ಆಹ್ವಾನ ಸ್ವೀಕರಿಸಿ ಅವರು ಆಶೀರ್ವಚನ ನೀಡಿದರು.ಸಾರಂಗಮಠದ ಜಗದ್ಗುರು ಡಾ. ಸಾರಂಗಧರ ದೇಶಿಕೇಂದ್ರ ಮಹಾಸ್ವಾಮಿಗಳು, ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿದರು.ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಾ. ಮಲ್ಲಿಕಾರ್ಜುನ ವಡ್ಡನಕೇರಿ, ಅಕಾಡೆಮಿ ಅಧ್ಯಕ್ಷ ಬಿ.ಎಂ. ಪಾಟೀಲ ಕಲ್ಲೂರ, ಡಾ. ಗಣಪತಿ ಸಿಂಧೆ, ಮುಡುಬಿ ಗುಂಡೇರಾವ, ಡಾ. ಕೆ.ಎಸ್. ಬಂಧು, ಶಿವರಾಜ ಅಂಡಗಿ, ಧರ್ಮಣ್ಣ ಎಚ್ ಧನ್ನಿ, ಚನ್ನಮಲ್ಲಯ್ಯ ಹಿರೇಮಠ, ವಿದ್ಯಾಸಾಗರ ದೇಶಮುಖ, ಲಿಂಗರಾಜ ಸಿರಗಾಪೂರ, ಈರಣ್ಣ ಹಡಪದ, ಜಗದೀಶ ಮರಪಳ್ಳಿ, ಪ್ರಕಾಶ ಗೊಣಗಿ, ಎಸ್.ಕೆ. ಬಿರಾದಾರ, ಸುರೇಶ ದೇಶಪಾಂಡೆ, ಸಂತೋಷ ಕುಡಳ್ಳಿ, ಶರಣಬಸಪ್ಪ ಕೋಬಾಳ, ಧರ್ಮರಾಜ ಜವಳಿ, ರಮೇಶ ಬಡಿಗೇರ, ದಿನೇಶ ಮದಕರಿ, ಪರಮಾನಂದ ಸರಸಂಬಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಂತ್ರಿ ಪಟ್ಟಕ್ಕಾಗಿ ರೈತರಿಗೆ ಮಧು, ಎಸ್ಸೆಸ್ಸೆಂ ಅನ್ಯಾಯ
ಗುಟ್ಕಾ, ಪಾನ್ ಮಸಾಲ ನಿಷೇಧ ವಿರೋಧಿಸಿ ಹೋರಾಟ ಶುರು