- ಯರಲಕಟ್ಟೆ ಸರ್ಕಾರಿ ಪ್ರೌಢಶಾಲೆಯಲ್ಲಿ ಸಮವಸ್ತ್ರ, ತಟ್ಟೆ, ಲೋಟ ವಿತರಣಾ ಸಮಾರಂಭ
ಕನ್ನಡಪ್ರಭ ವಾರ್ತೆ ಜಗಳೂರು
ಸಮಾಜದಲ್ಲಿರುವ ಪ್ರತಿಯೊಂದು ಸಮಸ್ಯೆಗೆ ಶಿಕ್ಷಣ ಒಂದೇ ಶಾಶ್ವತ ಪರಿಹಾರ ನೀಡಬಲ್ಲದು ಎಂದು ಕೆ.ಪಿ.ಸಿ.ಸಿ. ಎಸ್ಟಿ ಘಟಕದ ಪ್ರಧಾನ ಕಾರ್ಯದರ್ಶಿ ಎಂ.ಡಿ. ಕೀರ್ತಿ ಕುಮಾರ್ ಹೇಳಿದರು.ತಾಲೂಕಿನ ಯರಲಕಟ್ಟೆ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ದಾನಿಗಳಿಂದ ಸಂಗ್ರಹಿಸಿದ ಶಾಲಾ ಸಮವಸ್ತ್ರ, ತಟ್ಟೆ, ಲೋಟ ಹಾಗೂ ವಾಟರ್ ಬಾಟಲ್ ವಿತರಣಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಶಾಲೆಗೆ ಈಗಾಗಲೇ 3 ಸ್ಮಾರ್ಟ್ ಕ್ಲಾಸ್ ನೀಡಲಾಗಿದೆ. ವಿದ್ಯಾರ್ಥಿಗಳಿಗೆ ಸಾರಿಗೆ ಅಭಾವವಿರುವ ಕುರಿತು ಶಾಸಕರ ಗಮನಕ್ಕೆ ತಂದು ಸರ್ಕಾರಿ ಬಸ್ ಸೌಲಭ್ಯ ಕಲ್ಪಿಸಲು ಮನವಿ ಮಾಡುತ್ತೇನೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸಿ.ಎಸ್.ಆರ್ ಅನುದಾನದಡಿ ಖಾಸಗಿ ಶಾಲಾ ವಾಹನ ವ್ಯವಸ್ಥೆ ಮಾಡಲಾಗುವುದು. ಜೊತೆಗೆ ಶಾಲಾ ಮೈದಾನ ಅಭಿವೃದ್ಧಿಗೂ ಸೂಕ್ತ ಅನುದಾನ ತರಲು ಸಕಾರಾತ್ಮಕವಾಗಿ ಸ್ಪಂದಿಸುವೆ ಎಂದು ಭರವಸೆ ನೀಡಿದರು.
ಹಿರಿಯ ಪತ್ರಕರ್ತ ಅಣಬೂರು ಮಠದ ಕೊಟ್ರೇಶ್ ಸರ್ಕಾರಿ ಸೇವೆ ಎಂದರೆ ಬರೀ ಸಂಬಳ ಪಡೆಯುವುದಷ್ಟೇ ಅಲ್ಲ. ಸಮುದಾಯವನ್ನು ಶೈಕ್ಷಣಿಕವಾಗಿ ಒಗ್ಗೂಡಿಸುವುದಾಗಿದೆ. ಯುವ ಉತ್ಸಾಹಿ ಕೀರ್ತಿ ಕುಮಾರ್ ಮನವಿ ಸ್ವೀಕರಿಸುವುದಕ್ಕಿಂತ ಕೆಲಸ ಮಾಡಿ ತೋರಿಸುವ ನಾಯಕರಾಗಿದ್ದಾರೆ. ಶಾಸಕರ ಸ್ಪಂದನೆಯೊಂದಿಗೆ ಮುಂದಿನ ಆರು ತಿಂಗಳೊಳಗೆ ಈ ಶಾಲೆ ಸುಸಜ್ಜಿತ ಮೈದಾನ ಹೊಂದಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಸಂತೋಷ್, ಉಪಾಧ್ಯಕ್ಷ ತಿರುಮಲೇಶ್, ವಿ.ಮಂಜಣ್ಣ, ಸೊಕ್ಕೆ ಚಂದ್ರಪ್ಪ, ಕೆಚ್ಚೇನಹಳ್ಳಿ ಹರೀಶ್ ಗೌಡ, ಎಚ್.ಡಿ.ಎಫ್.ಸಿ. ಬ್ಯಾಂಕ್ ವ್ಯವಸ್ಥಾಪಕ ರವಿಕುಮಾರ್, ಮುಖಂಡರಾದ ಯರಲಕಟ್ಟೆ ಬೋರ್‌ವೆಲ್ ಮಂಜಣ್ಣ, ತಾ.ಕಾ. ನಿ. ಸಂಘದ ಉಪಾಧ್ಯಕ್ಷ ಧನ್ಯಕುಮಾರ್, ಶಿಕ್ಷಕರಾದ ಜಗದೀಶ್, ಸಿದ್ದೇಶ್, ಮಹೇಶ್ವರಪ್ಪ, ಮಂಜನಗೌಡ, ನಾಗರಾಜ್, ವಿಜಯ್ ಕುಮಾರ್, ವೀರಯ್ಯ ಸೇರಿದಂತೆ ಪೋಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
-26 ಜೆ.ಜಿ.ಎಲ್.1: