ನಾಳೆ ನಗರಕ್ಕೆ ಸೋಮನಾಥ ಜ್ಯೋತಿರ್ಲಿಂಗ ಆಗಮನ

KannadaprabhaNewsNetwork |  
Published : Jun 12, 2026, 01:15 AM IST
99999 | Kannada Prabha

ಸಾರಾಂಶ

ಸಾವಿರಾರು ವರ್ಷಗಳಿಂದ ಕಣ್ಮರೆಯಾಗಿದೆ ಎಂದು ನಂಬಲಾಗಿದ್ದ ಮೂಲ ಸೋಮನಾಥ ಜ್ಯೋತಿರ್ಲಿಂಗದ ಅಪರೂಪದ ಪವಿತ್ರ ಅವಶೇಷಗಳನ್ನು ತುಮಕೂರಿಗೆ ತರಲಾಗುತ್ತಿದ್ದು, ಭಕ್ತರಿಗೆ ಜ್ಯೋತಿರ್ಲಿಂಗದ ದರ್ಶನದ ಅವಕಾಶ ಮಾಡಲಾಗಿದೆ ಎಂದು ಆರ್ಟ್ಆಫ್ ಲಿವಿಂಗ್‌ ಜ್ಞಾನಕ್ಷೇತ್ರದ ರಾಜ್ಯ ಸಂಯೋಜಕ ಕೆ.ಎನ್. ನೀಲಕಂಠಯ್ಯ ಹೇಳಿದರು.

ಕನ್ನಡಪ್ರಭ ವಾರ್ತೆ ತುಮಕೂರುಸಾವಿರಾರು ವರ್ಷಗಳಿಂದ ಕಣ್ಮರೆಯಾಗಿದೆ ಎಂದು ನಂಬಲಾಗಿದ್ದ ಮೂಲ ಸೋಮನಾಥ ಜ್ಯೋತಿರ್ಲಿಂಗದ ಅಪರೂಪದ ಪವಿತ್ರ ಅವಶೇಷಗಳನ್ನು ತುಮಕೂರಿಗೆ ತರಲಾಗುತ್ತಿದ್ದು, ಭಕ್ತರಿಗೆ ಜ್ಯೋತಿರ್ಲಿಂಗದ ದರ್ಶನದ ಅವಕಾಶ ಮಾಡಲಾಗಿದೆ ಎಂದು ಆರ್ಟ್ಆಫ್ ಲಿವಿಂಗ್‌ ಜ್ಞಾನಕ್ಷೇತ್ರದ ರಾಜ್ಯ ಸಂಯೋಜಕ ಕೆ.ಎನ್. ನೀಲಕಂಠಯ್ಯ ಹೇಳಿದರು. ಗುರುವಾರ ನಗರದ ಜ್ಞಾನಕೇಂದ್ರ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸೋಮನಾಥ ಜ್ಯೋತಿರ್ಲಿಂಗದ ಪವಿತ್ರ ಅವಶೇಷಗಳನ್ನು ತುಮಕೂರಿಗೆ ತರಲಾಗುತ್ತಿದ್ದ ಈ ತಿಂಗಳ 13 ಮತ್ತು 14 ರಂದು ಸಾರ್ವಜನಿಕರ ದರ್ಶನದ ವ್ಯವಸ್ಥೆ ಮಾಡಲಾಗುತ್ತಿದೆ. ನಗರದ ಎಂ.ಜಿ.ರಸ್ತೆ, ೨ನೇ ಕ್ರಾಸ್‌ನ ಜ್ಞಾನ ಕ್ಷೇತ್ರದಲ್ಲಿ 13 ರ ಶನಿವಾರ ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಮತ್ತು ಸಂಜೆ 4ರಿಂದ ರಾತ್ರಿ 8.30 ರವರೆಗೆ ಸಾರ್ವಜನಿಕರು ಜ್ಯೋತಿರ್ಲಿಂಗದರ್ಶನ ಮಾಡಬಹುದು ಎಂದರು.14 ರಂದು ಭಾನುವಾರ ಎಸ್.ಎಸ್. ಪುರಂನ ಕನ್ನಿಕಾ ಮಹಲ್‌ನಲ್ಲಿ ಬೆಳಿಗ್ಗೆ 10ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಮತ್ತು ಮಧ್ಯಾಹ್ನ 3 ರಿಂದ ರಾತ್ರಿ 8 ಗಂಟೆಯವರೆಗೆ ಈ ಲಿಂಗಗಳನ್ನು ದರ್ಶನಕ್ಕೆ ಇಡಲಾಗುತ್ತದೆ. ಈ ಅಮೂಲ್ಯ ಅವಶೇಷಗಳಿಗೆ ಪ್ರಾಚೀನ ವೇದ ವಿಧಿಯಾದ ರುದ್ರಾಭಿಷೇಕ ಮೂಲಕ ಪೂಜೆ ನಡೆಯಲಿದೆ. ಈ ವಿಶೇಷ ಪೂಜೆಯಲ್ಲಿ ಭಗವಾನ್ ಶಿವನನ್ನು ರುದ್ರ ಸ್ವರೂಪದಲ್ಲಿ ವೇದ ಮಂತ್ರಗಳ ಜಪದೊಂದಿಗೆ ಆರಾಧಿಸಲಾಗುತ್ತದೆ. ನಂತರ ಭಕ್ತಿಭರಿತ ಸತ್ಸಂಗ ಕಾರ್ಯಕ್ರಮವೂ ನಡೆಯಲಿದೆ ಎಂದು ಹೇಳಿದರು.ಈ ಪವಿತ್ರ ಅವಶೇಷಗಳು ಪುನಃ ಪ್ರತ್ಯಕ್ಷವಾದ ಕಥೆಯು ಭಾರತ ದೇಶದ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಶಕ್ತಿಯ ಪ್ರತೀಕವಾಗಿದೆ. ಕ್ರಿ.ಶ. 1026ರಲ್ಲಿ ಘಜ್ಜಿಯ ಮಹ್ಮದ್ ನಡೆಸಿದ ದಾಳಿಯ ಸಮಯದಲ್ಲಿ ಧ್ವಂಸಗೊಂಡು ಕಣ್ಮರೆಯಾಗಿವೆ ಎಂದು ನಂಬಲಾಗಿದ್ದ ಈ ಅವಶೇಷಗಳು, ಸಾವಿರ ವರ್ಷಗಳ ಕಾಲ ರಹಸ್ಯವಾಗಿ ಸಂರಕ್ಷಿಸಲ್ಪಟ್ಟಿದ್ದವು ಎಂದು ತಿಳಿದುಬಂದಿದೆ. ಈ ಅಂಶಗಳನ್ನು ದಕ್ಷಿಣ ಭಾರತಕ್ಕೆತಂದ ದೈವಭಕ್ತ ಅಗ್ನಿಹೋತ್ರಿ ಬ್ರಾಹ್ಮಣರ ವಂಶಸ್ಥರು, ಲಿಂಗಗಳ ಪ್ರಸ್ತುತ ಸಂರಕ್ಷಕರು, ಲಿಂಗಗಳನ್ನು ಮತ್ತೆ ಅದರ ಪೂರ್ಣ ವೈಭವಕ್ಕೆ ಹಿಂದಿರುಗಿಸುವ ಈ ಐತಿಹಾಸಿಕ ಕ್ಷಣವನ್ನು ಮುನ್ನಡೆಸಲು ಅವರು ಜಾಗತಿಕ ಆಧ್ಯಾತ್ಮಿಕ ಗುರು ಮತ್ತು ಮಾನವತಾವಾದಿ ನಾಯಕ ಗುರುದೇವ ರವಿಶಂಕರ್‌ ಅವರನ್ನು ಆಹ್ವಾನಿಸಿದ್ದಾರೆ ಎಂದು ಹೇಳಿದರು. ಮುಖಂಡರಾದ ಆರ್.ಎಲ್. ರಮೇಶ್‌ಬಾಬು, ಡಾ.ರವಿಚಂದ್ರ, ಕೆ.ಎಸ್. ಆನಂದ್, ಚೆನ್ನಯ್ಯ ಶೆಟ್ಟಿ, ಭಾಗ್ಯ ನೀಲಕಂಠಯ್ಯ, ನಾರಾಯಣಪ್ಪ ಮೊದಲಾದವರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜ್ಞಾನಜಾತ್ರೆಯ ಲೋಗೋ ಬಿಡುಗಡೆ ಮಾಡಿದ ಡಿಸಿ ಶುಭಾ ಕಲ್ಯಾಣ್
ಡಿಕೆ ಶಿವಕುಮಾರ್ ಗೆ ಗುರುವಿನ ಅನುಗ್ರಹವಾಗಿದೆ