ಕನ್ನಡಪ್ರಭ ವಾರ್ತೆ ಕೆ.ಆರ್.ನಗರ
ಸಾಲಿಗ್ರಾಮ ತಾಲೂಕಿನ ಎರೆಮನುಗನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 79ನೇ ಸ್ವಾತಂತ್ರ್ಯ ದಿನವನ್ನು ಅತ್ಯಂತ ಅರ್ಥಪೂರ್ಣ ಮತ್ತು ವಿಶಿಷ್ಟವಾಗಿ ಆಚರಿಸಿತು.ಸ್ವಾತಂತ್ರ್ಯ ದಿನದ ಅಂಗವಾಗಿ ಧ್ವಜಾರೋಹಣ ನಡೆಸಿ ವಿದ್ಯಾರ್ಥಿಗಳಿಗೆ ಹೋರಾಟಗಾರರು ಮತ್ತು ದೇಶಪ್ರೇಮಿಗಳ ಜೀವನ ಹಾಗೂ ಸಾಧನೆಯ ಬಗ್ಗೆ ತಿಳಿಸಲಾಯಿತು.ಶಾಲೆಗೆ ಗ್ರಾಮದ ನೀತಿ ನಟರಾಜು ಸೌಂಡ್ ಸಿಸ್ಟಂ, ಹಾಲು ಉತ್ಪಾದಕರ ಸಹಕಾರ ಸಂಘದಿಂದ ವತಿಯಿಂದ ಕುರ್ಚಿಗಳು ಹಾಗೂ ಸಮೀ ಉಲ್ಲಾ ಫೈಲ್ ಗಳನ್ನು ಕೊಡುಗೆಯಾಗಿ ನೀಡಿದರು.ಪೋಷಕರು ಮತ್ತು ಶಿಕ್ಷಣಾಸಕ್ತರ ಸಹಕಾರ ಪಡೆದು ಶಾಲಾ ಮಕ್ಕಳಿಗೆ ಸಮವಸ್ತ್ರ ವಿತರಿಸಲಾಯಿತಲ್ಲದೆ, ಮಲ್ಟಿ ಪ್ಯೂಚರ್ ಪ್ರೊಜೆಕ್ಟರ್ ದಾನವಾಗಿ ನೀಡಿದ ಚನ್ನಕೇಶವ ಅವರಿಂದ ಬೋಧನ ವಿಧಾನದಲ್ಲಿ ಡಿಜಿಟಲ್ ಡಿವೈಸ್ ಬಳಕೆಯ ಬಗ್ಗೆ ಉಪನ್ಯಾಸ ಕೊಡಿಸಲಾಯಿತು. ಪ್ರಾ
ಥಮಿಕ ಶಾಲಾ ಪದವೀಧರ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಸಿ.ಎನ್. ಪ್ರಭು ಮಾತನಾಡಿ, ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಪೋಷಕರು ಮತ್ತು ದಾನಿಗಳು ಸಹಕಾರ ನೀಡಿ ಸ್ವಾತಂತ್ರ್ಯ ದಿನವನ್ನು ವಿನೂತನವಾಗಿ ಆಚರಿಸುತ್ತಿರುವುದು ಸಂತಸದ ಸಂಗತಿ ಎಂದರು.ಸಾಲಿಗ್ರಾಮ ತಾಲೂಕಿನ ಗಡಿ ಗ್ರಾಮದಲ್ಲಿರುವ ಎರೆಮನುಗನಹಳ್ಳಿ ಸರ್ಕಾರಿ ಶಾಲೆಗೆ ಅಗತ್ಯ ಪೀಠೋಪಕರಣ ಮತ್ತು ಪಾಠೋಪಕರಣಗಳನ್ನು ಕೊಡುಗೆಯಾಗಿ ನೀಡಿದವರನ್ನು ಅಭಿನಂದಿಸುವುದಾಗಿ ತಿಳಿಸಿದರು.ಎಸ್.ಡಿಎಂಸಿ ಅಧ್ಯಕ್ಷ ಮಹದೇವ ಮಾತಾನಾಡಿದರು. ದಾನಿಗಳನ್ನು ಶಾಲೆಯ ಪರವಾಗಿ ಸನ್ಮಾನಿಸಲಾಯಿತು.
ಉಪಾಧ್ಯಕ್ಷರಾದ ಹಾಜಿರಾ ಭಾನು, ಲತಾ, ನಿರ್ದೇಶಕರಾದ ಚಲುವರಾಜು, ಮಹದೇವ, ಮೂರ್ತಯ್ಯ, ನಯಾಜ್, ಚನ್ನಕೇಶವ, ಗ್ರಾಮದ ಮುಖಂಡರಾದ ವೈ.ಟಿ. ಮಹದೇವ, ತನ್ವೀರ್, ದೊಡ್ಡಸ್ವಾಮಿ, ಹುಚ್ಚಯ್ಯ, ಧರ್ಮರಾಜು, ಧನಪಾಲ, ಮುನ್ನೀರ್ ಸಾಬ್, ಧನಪಾಲ್, ಮುಖ್ಯ ಶಿಕ್ಷಕ ರಂಗಸ್ವಾಮಿ, ಸಹ ಶಿಕ್ಷಕ ರವೀಂದ್ರ ಮತ್ತು ಗ್ರಾಮಸ್ಥರು ಇದ್ದರು.ಮೂಗೂರು ಗ್ರಾಪಂ ಕಚೇರಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ
ಕನ್ನಡಪ್ರಭ ವಾರ್ತೆ ಮೂಗೂರುಗ್ರಾಮದ ಗ್ರಾಪಂ ಕಚೇರಿ ಆವರಣದಲ್ಲಿ ನಡೆದ 79ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಗ್ರಾಪಂ ಅಧ್ಯಕ್ಷ ಎಂ.ಡಿ. ಲೋಕೇಶ್ ಧ್ವಜಾರೋಹಣ ನೆರವೇರಿಸಿದರು.
ನಂತರ ಪಿಎಚ್.ಡಿ ಪದವಿ ಪಡೆದ ಮೂಗೂರು ಗ್ರಾಮದ ರಾಚಪ್ಪ ಅವರನ್ನು ಅಭಿನಂದಿಸಲಾಯಿತು.ಗ್ರಾಪೇ ಉಪಾಧ್ಯಕ್ಷೆ ಭಾಗ್ಯಮ್ಮ, ಗ್ರಾಪಂ ಮಾಜಿ ಅಧ್ಯಕ್ಷ ಜಗದೀಶ ಮೂರ್ತಿ. ಸದಸ್ಯರಾದ ಶಿವಣ್ಣ, ಮೋಹನ್ ಕುಮಾರ್, ಪುಟ್ಟಮಾದಯ್ಯ, ಲಿಂಗರಾಜು, ಬಿ.ಶಿವಣ್ಣ, ಚೇತನ್, ಮಹೇಶ, ಶಾಂತಿ, ಲಕ್ಷ್ಮೀ, ಸವಿತಾ, ರತ್ನಮ್ಮ, ತಂಗಮ್ಮ, ಮುಖಂಡರಾದ ಎಂ. ಚಂದ್ರಶೇಖರ್, ಎಂ.ಪಿ. ಮರಿಸ್ವಾಮಿ, ನಾಗೇಂದ್ರ, ಎಂ.ಪಿ.ನಾಗರಾಜು, ರಮೇಶ ನಾಯಕ, ಎಂ.ಎನ್. ರಾಜು, ಶಾಂತ ನಾಗರಾಜು, ಅರವೀಂದ್, ಶಿವಕುಮಾರ್, ಹರೀಶ್, ಪುಟ್ಟಸ್ವಾಮಿ, ಚಿನ್ನಸ್ವಾಮಿ, ಶಿವಶಂಕರ, ಕಾರ್ಯದರ್ಶಿ ದೀಪ, ಲೆಕ್ಕ ಸಹಾಯಕರಾದ ಜವರೇಗೌಡ ಹಾಗೂ ಶಿಕ್ಷಕರ ವೃಂದ, ಸಿಬ್ಬಂದಿ ವರ್ಗ, ಗ್ರಾಮಸ್ಥರು ಮತ್ತು ವಿದ್ಯಾರ್ಥಿಗಳು ಇದ್ದರು.
ವಿವಿಧೆಡೆ ಸ್ವಾಂತ್ರ್ಯ ಸಂಭ್ರಮಎಚ್.ಡಿ.ಕೋಟೆಯ ಲೋಕೋಪಯೋಗಿ ಕಚೇರಿಯಲ್ಲಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ರಮೇಶ್ ಧ್ವಜಾರೋಹಣ ನೆರವೇರಿಸಿದರು. ತಾಲೂಕಿನ ಜನತೆಗೆ ಶುಭ ಕೋರಿದರು. ಎಇಗಳಾದ ಸುಬ್ರಮಣ್ಯ, ಪುರುಷೋತ್ತಮ್, ಜೆಇ ರಾಕೇಶ್, ವ್ಯವಸ್ಥಾಪಕ ಬಸವರಾಜು, ಸಿಬ್ಬಂದಿ ವರ್ಗ ಇದ್ದರು.
ಕಿತ್ತೂರು ಗ್ರಾಪಂ ಆವರಣ:ಕಿತ್ತೂರು ಗ್ರಾಪಂ ಆವರಣದಲ್ಲಿ ಗ್ರಾಪಂ ಅಧ್ಯಕ್ಷ ವೀಣಾ ಧ್ವಜಾರೋಹಣ ನೆರವೇರಿಸಿದರು. ಪಂಚಾಯ್ತಿ ಸದಸ್ಯರು, ಪಿಡಿಒ ರಾಜಶೇಖರ್, ಪಂಚಾಯ್ತಿ ಸಿಬ್ಬಂದಿ ವರ್ಗ ಇದ್ದರು.
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ:ಸುತ್ತೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಅವರಣದಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ.ರಮ್ಯಾ ಅವರನ್ನು ಗ್ರಾಪಂ ಅಧ್ಯಕ್ಷ ರಂಗಸ್ವಾಮಿ ಸನ್ಮಾನಿಸಿದರು. ಗ್ರಾಪಂ ಉಪಾಧ್ಯಕ್ಷೆ ಪ್ರತಿಮಾ ಪರಮೇಶ್, ಶಾಲೆಯ ಮುಖ್ಯಶಿಕ್ಷಕ ನಾಗರಾಜು, ಎಸ್.ಟಿಎಂಸಿ ಅಧ್ಯಕ್ಷ ರವಿ, ಶಾಲಾ ಶಿಕ್ಷಕರು. ಗ್ರಾಮಸ್ಥರು ಇದ್ದರು.