ಲಕ್ಷ್ಮೇಶ್ವರ ತಾಲೂಕಲ್ಲಿ ಹಿಂಗಾರು ಹಂಗಾಮಿನ ಬಿತ್ತನೆ ಕಾರ್ಯ ಚುರುಕು

KannadaprabhaNewsNetwork |  
Published : Oct 16, 2025, 02:01 AM IST
ಜಮೀನಿನಲ್ಲಿ ಟ್ರ್ಯಾಕ್ಟರ್‌ ಮೂಲಕ ಬಿತ್ತನೆ ಕಾರ್ಯದಲ್ಲಿ ತೊಡಗಿರುವ ರೈತರು. | Kannada Prabha

ಸಾರಾಂಶ

ಈ ವರ್ಷ ವರುಣ ಸ್ವಲ್ಪ ಹೆಚ್ಚಾಗಿ ಅರ್ಭಟಿಸಿದ್ದರಿಂದ ಮುಂಗಾರು ಬೆಳೆ ಬಹುತೇಕ ಹಾಳಾಗಿದ್ದು, ಇದೀಗ ರೈತರು ಮತ್ತೆ ಹಿಂಗಾರು ಬಿತ್ತನೆ ಕಾರ್ಯ ಚುರುಕುಗೊಳಿಸಿದ್ದು ಕಂಡುಬಂದಿತು. ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಕಾರ್ಯ ಜೋರಾಗಿ ನಡೆದಿದೆ.

ಲಕ್ಷ್ಮೇಶ್ವರ: ಈ ಬಾರಿ ಹಿಂಗಾರು ಮಳೆ ಉತ್ತಮವಾಗಿ ಬಿದ್ದಿರುವ ಹಿನ್ನೆಲೆ ರೈತರು ಮತ್ತೆ ಹಿಂಗಾರು ಬಿತ್ತನೆ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

ಈ ವರ್ಷ ವರುಣ ಸ್ವಲ್ಪ ಹೆಚ್ಚಾಗಿ ಅರ್ಭಟಿಸಿದ್ದರಿಂದ ಮುಂಗಾರು ಬೆಳೆ ಬಹುತೇಕ ಹಾಳಾಗಿದ್ದು, ಇದೀಗ ರೈತರು ಮತ್ತೆ ಹಿಂಗಾರು ಬಿತ್ತನೆ ಕಾರ್ಯ ಚುರುಕುಗೊಳಿಸಿದ್ದು ಕಂಡುಬಂದಿತು. ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಕಾರ್ಯ ಜೋರಾಗಿ ನಡೆದಿದೆ.

ಭೂಮಿಯನ್ನು ಹದ ಮಾಡಿ ಮಳೆ ಕಡಿಮೆ ಆದ ಕೂಡಲೇ ಬಿತ್ತನೆ ಶುರು ಮಾಡಿದ್ದಾರೆ. ಕಡಲೆ, ಗೋದಿ, ಶೇಂಗಾ, ಜೋಳ, ಕುಸುಬೆ ಬಿತ್ತನೆ ಮಾಡುವ ತಯಾರಿಯಲ್ಲಿದ್ದಾರೆ. ಕೃಷಿ ಇಲಾಖೆಯಲ್ಲಿ ಅವಶ್ಯಕ ಬೀಜಗಳ ದಾಸ್ತಾನು ಮಾಡಿದ್ದು, ರೈತರಿಗೆ ಅವಶ್ಯಕತೆಗೆ ತಕ್ಕಂತೆ ಪೂರೈಕೆಯಾಗುತ್ತಿದೆ. ತಾಲೂಕಿನಾದ್ಯಂತ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಕಡಲೆ, ಗೋದಿ, ಬಿಳಿ ಜೋಳ, ಕುಸುಬಿ ಬಿತ್ತನೆ ಪ್ರಕ್ರಿಯೆ ಭರದಿಂದ ನಡೆದಿದೆ.ಪಟ್ಟಣದ ಕೃಷಿ ಕೇಂದ್ರದಲ್ಲಿ ಹಿಂಗಾರು ಬಿತ್ತನೆಗೆ ಸಾಕಷ್ಟು ಬೀಜಗಳ ದಾಸ್ತಾನು ಇದ್ದು, ಈಗಾಗಲೇ ನೂರು ಕ್ವಿಂಟಲ್‌ನಷ್ಟು ಕಡಲೆ ಬಿತ್ತನೆ ಬೀಜಗಳನ್ನು ರೈತರು ಸಹಾಯದಲ್ಲಿ ಪಡೆದುಕೊಂಡು ಬಿತ್ತನೆ ಕಾರ್ಯ ಕೈಗೊಂಡಿದ್ದಾರೆ. ಕೃಷಿ ಇಲಾಖೆಯಲ್ಲಿ ಜೋಳ, ಕಡಲೆ, ಕುಸುಬೆ, ಗೋದಿ, ಸೂರ್ಯಕಾಂತಿ ಸೇರಿದಂತೆ ಸುಮಾರು ೩೦೦ ಕ್ವಿಂಟಲ್‌ಗೂ ಅಧಿಕ ದಾಸ್ತಾನು ಇದೆ.

ಈಗಾಗಲೇ ರೈತರು ಸುಮಾರು ೩೭೦ ಕ್ವಿಂಟಲ್‌ಗೂ ಅಧಿಕ ಬಿತ್ತನೆ ಬೀಜಗಳನ್ನು ತೆಗೆದುಕೊಂಡು ಹೋಗಿದ್ದಾರೆನ್ನಲಾಗಿದೆ. ಕೃಷಿ ಇಲಾಖೆಯಲ್ಲಿ ಸಹಾಯಧನದಲ್ಲಿ ಬೀಜಗಳು ದೊರೆಯುತ್ತಿದ್ದು, ರೈತರು ಬಿತ್ತನೆ ಬೀಜಗಳಿಗಾಗಿ ಇಲಾಖೆಗೆ ದೌಡಾಯಿಸುತ್ತಿರುವುದು ಕಂಡುಬಂದಿತು.ಕಿತ್ತೂರು ಉತ್ಸವ ಜ್ಯೋತಿಗೆ ಸ್ವಾಗತ

ಗದಗ: ಅ. 23ರಂದು ಆರಂಭವಾಗುವ ಕಿತ್ತೂರು ಉತ್ಸವ ಅಂಗವಾಗಿ ರಾಣಿ ಚೆನ್ನಮ್ಮ ಜ್ಯೋತಿಜಾತ್ರೆಯು ತಾಲೂಕಿನ ಲಕ್ಕುಂಡಿ ಗ್ರಾಮಕ್ಕೆ ಆಗಮಿಸಿದ್ದು, ಗ್ರಾಮಸ್ಥರು ಸಂಭ್ರಮದಿಂದ ಬರ ಮಾಡಿಕೊಂಡರು.ದಂಡಿನ ದುರ್ಗಾದೇವಿ ದೇವಸ್ಥಾನದ ಹತ್ತಿರ ಜ್ಯೋತಿಗೆ ಹೂಮಾಲೆ ಹಾಕಿ ಪೂಜೆ ಮಾಡುವುದರೊಂದಿಗೆ ಸ್ವಾಗತಿಸಿ ಜಯಘೋಷ ಕೂಗಲಾಯಿತು. ಅತ್ತಿಮಬ್ಬೆ ಮಹಾದ್ವಾರದವೆರೆಗೂ ಮೆರವಣಿಗೆ ಮಾಡಿ ಬೀಳ್ಕೊಲಾಯಿತು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಸವರಾಜ ಬಳ್ಳಾರಿ, ಸಣ್ಣ ಉಳಿತಾಯ ಮತ್ತು ಪಿಂಚಣಿ ಇಲಾಖೆಯ ಸಹಾಯಕ ನಿರ್ದೇಶಕ ಶ್ರೀಧರ ಚಿನ್ನಗುಡಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ರಾಜು ಕಂಠಿಗೊಣ್ಣವರ, ಕೃಷಿ ಇಲಾಖೆ ಅಧೀಕ್ಷಕ ಶರಣಯ್ಯ ಪಾರ್ವತಿಮಠ ಸೇರಿದಂತೆ ಗ್ರಾಮದ ಗಣ್ಯರು, ಮಹಿಳೆಯರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಾಸ್ಟೆಲ್ ಮಕ್ಕಳಿಗೆ ಹೊಸ ಜಾತಿ ಪ್ರಮಾಣಪತ್ರ ಶಾಕ್‌
₹400 ಕೋಟಿ ಇದ್ದ 2 ಕಂಟೇನರ್‌ ಲಾರಿಗಳೇ ಬೆಳಗಾವೀಲಿ ನಾಪತ್ತೆ!