ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ಶಾಸಕ ಶಿವಲಿಂಗೇಗೌಡರ ವಿಶೇಷ ಉಪನ್ಯಾಸ

KannadaprabhaNewsNetwork |  
Published : Nov 09, 2025, 02:00 AM IST
 ಶಾಸಕ | Kannada Prabha

ಸಾರಾಂಶ

ದಾಸ ಶ್ರೇಷ್ಠ ಕನಕರು ನಮ್ಮ ಪರಂಪರೆಯ ನೈತಿಕ ಮತ್ತು ಆಧ್ಯಾತ್ಮಿಕ ಶಕ್ತಿಯಾಗಿದ್ದಾರೆ. ಆದರೆ ಕೆಲವರು ತಪ್ಪಾಗಿ ಕನಕದಾಸರಿಂದ ನಮ್ಮ ಪರಂಪರೆ ಆರಂಭವಾಗಿದೆ ಎಂದು ಕಲ್ಪಿಸುತ್ತಾರೆ. ನಿಜವಾಗಿ, ಮನುಷ್ಯ ಜನಾಂಗ ಕೃಷಿಗಿಂತ ಮೊದಲು ಪಶುಪಾಲನೆ ಮಾಡುತ್ತಿದ್ದವರಾಗಿದ್ದರು. ಹಸು, ಕುರಿ, ಮೇಕೆ, ಕುದುರೆಗಳನ್ನು ಸಾಕುತ್ತಿದ್ದವರು ಕುರುಬರೇ ಆಗಿದ್ದರು.

ಕನ್ನಡಪ್ರಭ ವಾರ್ತೆ ಅರಸೀಕೆರೆ

ಕನಕದಾಸರನ್ನು ಕೇವಲ ದಾಸ ಶ್ರೇಷ್ಠ ವ್ಯಕ್ತಿ ಎಂದು ಮಾತ್ರ ಪರಿಗಣಿಸುವುದಲ್ಲ, ಅವರ ಮಹೋನ್ನತ ಪರಂಪರೆಯನ್ನು ಕೂಡ ಸ್ಮರಿಸಿಕೊಳ್ಳಬೇಕು ಎಂದು ಶಾಸಕ ಕೆ.ಎಂ. ಶಿವಲಿಂಗೇಗೌಡ ತಿಳಿಸಿದರು.

ತಾಲೂಕು ಕಚೇರಿಯಲ್ಲಿ ಏರ್ಪಡಿಸಲಾಗಿದ್ದ ಕನಕದಾಸರ ಜಯಂತಿಯ ಸಂದರ್ಭದಲ್ಲಿ ಮಾತನಾಡಿದ ಅವರು, ಕನಕದಾಸರನ್ನು ನಾವು ಉಲ್ಲೇಖಿಸುವಾಗ, ಬುದ್ಧನಿಂದ ಆರಂಭವಾಗುವ ಮಹೋನ್ನತ ಪರಂಪರೆಯ ಭಾಗವಾಗಿ ‘ಬುದ್ಧ- ಬಸವ- ಕನಕ’ ಎಂದು ಕರೆಯುತ್ತೇವೆ. ಇದರಿಂದ ಕನಕದಾಸ ಜಯಂತಿ ನಮ್ಮ ಪರಂಪರೆಯ ಬೇರುಗಳಿಗೆ ಚೈತನ್ಯ ತುಂಬುವಂತೆ ಆಗುತ್ತದೆ ಎಂದು ಹೇಳಿದರು.

ದಾಸ ಶ್ರೇಷ್ಠ ಕನಕರು ನಮ್ಮ ಪರಂಪರೆಯ ನೈತಿಕ ಮತ್ತು ಆಧ್ಯಾತ್ಮಿಕ ಶಕ್ತಿಯಾಗಿದ್ದಾರೆ. ಆದರೆ ಕೆಲವರು ತಪ್ಪಾಗಿ ಕನಕದಾಸರಿಂದ ನಮ್ಮ ಪರಂಪರೆ ಆರಂಭವಾಗಿದೆ ಎಂದು ಕಲ್ಪಿಸುತ್ತಾರೆ. ನಿಜವಾಗಿ, ಮನುಷ್ಯ ಜನಾಂಗ ಕೃಷಿಗಿಂತ ಮೊದಲು ಪಶುಪಾಲನೆ ಮಾಡುತ್ತಿದ್ದವರಾಗಿದ್ದರು. ಹಸು, ಕುರಿ, ಮೇಕೆ, ಕುದುರೆಗಳನ್ನು ಸಾಕುತ್ತಿದ್ದವರು ಕುರುಬರೇ ಆಗಿದ್ದರು. ಐತಿಹಾಸಿಕವಾಗಿ, ಕುರಿ ಮತ್ತು ಹಸುವನ್ನು ನೀಡುವ ಮೂಲಕ ಇತರ ವಸ್ತು ಪದಾರ್ಥಗಳನ್ನು ಗಳಿಸುತ್ತಿದ್ದರು. ಹೆಚ್ಚು ಗುರಿಯಾಸು ಹೊಂದಿದ್ದವರು ಹೆಚ್ಚು ಶ್ರೀಮಂತರಾಗಿದ್ದರು. ಹೀಗಾಗಿ, ಪ್ರಾಚೀನ ಭಾರತದ ಆರ್ಥಿಕತೆ ಕುರುಬರ ಪಶುಪಾಲಕರ ಕೈಯಲ್ಲಿ ನಿಭಾಯಿಸುತ್ತಿತ್ತು. ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಪರಂಪರೆಯನ್ನು ಮುಂದುವರಿಸಿಕೊಂಡು 16 ಬಜೆಟ್‌ಗಳನ್ನು ಮಂಡಿಸಿ ದಾಖಲೆ ಮೆರೆದಿದ್ದಾರೆ ಎಂದೂ ಹೇಳಿದರು.ಕುರುಬ ಸಮಾಜದ ಅಧ್ಯಕ್ಷ ತೊಂಡೆಗನಹಳ್ಳಿ ಕೃಷ್ಣಮೂರ್ತಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಾಣಾವರ ಶ್ರೀನಿವಾಸ್, ತಹಸೀಲ್ದಾರ್ ಸಂತೋಷ್ ಕುಮಾರ್ ಸೇರಿ ಇತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಗಳ ಮದುವೆ ಸಂಬಂಧ ಹತ್ಯೆ ಯತ್ನಕ್ಕೊಳಗಾಗಿದ್ದ ಮಹಿಳೆ ಸಾವು
ಕೋಗಿಲು ಒತ್ತುವರಿಗೆ ಇಬ್ಬರು ಖಾಕಿಬಲೆಗೆ