ಗಿಡ ನೆಟ್ಟು ತಾಪಂ ಇಒಗೆ ವಿಶಿಷ್ಟ ಅಭಿನಂದನೆ

KannadaprabhaNewsNetwork |  
Published : Jun 02, 2026, 02:00 AM IST
ವಿಜೆಪಿ ೩೧ವಿಜಯಪುರ ಹೋಬಳಿಯ ಕೋರಮಂಗಲ ಗ್ರಾಮ ಪಂಚಾಯತಿ ಹಾಗೂ ಗ್ರಾಮಸ್ಥರ ವತಿಯಿಂದ ದಕ್ಷ ಅಧಿಕಾರಿ ಶ್ರೀನಾಥಗೌಡ ಅವರ ಹೆಸರಿನಲ್ಲಿ ಗಿಡ ನೆಟ್ಟು ಕೋರಮಂಗಲ ಗ್ರಾಮ ಪಂಚಾಯತಿಯಿಂದ ವಿಶಿಷ್ಟವಾಗಿ ಅವರನ್ನು ಅತ್ಯಂತ ಗೌರವಪೂರ್ವಕವಾಗಿ ಅಭಿನಂದನೆ ಸಲ್ಲಿಸಿ, ಅವರ ಹೆಸರಿನಲ್ಲಿ(ನೆನಪಲ್ಲಿ) ಗಿಡ ನೆಡುವ ಮೂಲಕ ವಿಶಿಷ್ಟವಾಗಿ ಬೀಳ್ಕೊಡಲಾಯಿತು. | Kannada Prabha

ಸಾರಾಂಶ

ವಿಜಯಪುರ: ದೇವನಹಳ್ಳಿ ತಾಪಂ ಇಒ ಸಿ.ಎಸ್.ಶ್ರೀನಾಥಗೌಡರ ವರ್ಗಾವಣೆ ಹಿನ್ನೆಲೆಯಲ್ಲಿ ಕೋರಮಂಗಲ ಗ್ರಾಪಂ ಹಾಗೂ ಗ್ರಾಮಸ್ಥರು ಗೌರವಪೂರ್ವಕವಾಗಿ ಅಭಿನಂದಿಸಿ, ಅವರ ಹೆಸರಿನಲ್ಲಿ ಗಿಡ ನೆಟ್ಟು ವಿಶಿಷ್ಟವಾಗಿ ಬೀಳ್ಕೊಡಲಾಯಿತು

ವಿಜಯಪುರ: ದೇವನಹಳ್ಳಿ ತಾಪಂ ಇಒ ಸಿ.ಎಸ್.ಶ್ರೀನಾಥಗೌಡರ ವರ್ಗಾವಣೆ ಹಿನ್ನೆಲೆಯಲ್ಲಿ ಕೋರಮಂಗಲ ಗ್ರಾಪಂ ಹಾಗೂ ಗ್ರಾಮಸ್ಥರು ಗೌರವಪೂರ್ವಕವಾಗಿ ಅಭಿನಂದಿಸಿ, ಅವರ ಹೆಸರಿನಲ್ಲಿ ಗಿಡ ನೆಟ್ಟು ವಿಶಿಷ್ಟವಾಗಿ ಬೀಳ್ಕೊಡಲಾಯಿತು.

ಹಕ್ಕುಪತ್ರ ವಿತರಣೆಯಲ್ಲಿ ಜಿಲ್ಲೆಗೆ ಪ್ರಥಮ: ಕೋರಮಂಗಲ ಗ್ರಾಪಂ ವ್ಯಾಪ್ತಿಯಲ್ಲಿ ಅರ್ಹ ಫಲಾನುಭವಿಗಳಿಗೆ ಆಶ್ರಯ ನಿವೇಶನಗಳನ್ನು ಮಂಜೂರು ಮಾಡಿ, ಹಕ್ಕುಪತ್ರ ವಿತರಿಸುವಲ್ಲಿ ಕೋರಮಂಗಲ ಪಂಚಾಯತಿ ಇಡೀ ಜಿಲ್ಲೆಯಲ್ಲೇ ಪ್ರಥಮ ಸ್ಥಾನ ಪಡೆದಿದೆ. ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಅವರ ಮಾರ್ಗದರ್ಶನದಲ್ಲಿ ಈ ಐತಿಹಾಸಿಕ ಸಾಧನೆ ಸಾಧ್ಯವಾಗಿದೆ ಎಂದು ಗ್ರಾಪಂ ಅಧ್ಯಕ್ಷ ದೇವರಾಜ್ ತಿಳಿಸಿದರು.

ಇದೇ ಸಂದರ್ಭದಲ್ಲಿ ಇಒ ಶ್ರೀನಾಥಗೌಡರ ದಕ್ಷ ಸೇವೆ ಜ್ಞಾಪಕಾರ್ಥ ಅವರ ಹೆಸರಿನಲ್ಲಿ ಪಂಚಾಯತಿ ಆವರಣದಲ್ಲಿ ಗಿಡ ನೆಡಲಾಯಿತು. ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷ ದೇವರಾಜ್, ಉಪಾಧ್ಯಕ್ಷೆ ಕನಕರತ್ನಮ್ಮ, ಸದಸ್ಯರಾದ ಧನಂಜಯ್, ಚನ್ನೆಗೌಡ, ಪುಷ್ಪ ಶಿವರಾಜ್, ಹರೀಶ್ ಕುಮಾರ್, ಗಾಯತ್ರಿ ತಿಲಕ್, ಪಿಡಿಒ ರಾಘವೇಂದ್ರ, ಮತ್ತು ಕಾರ್ಯದರ್ಶಿ ನವೀನ್, ಶಿವರಾಜ್, ಪಿಳ್ಳೀರಪ್ಪ, ರವಿಚಂದ್ರ, ನಾಗೇಶ್, ಕೆಂಪೇಗೌಡ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಿಂದು ಮೇಲೆ ಎಲ್ಲೇ ಹಲ್ಲೆ ಆದ್ರೂ ಧರಣಿ: ಬಿವೈವಿ
ವೈದ್ಯ ಡಾ.ಚಂದ್ರಶೇಖರ್ ಅವರ ’ಹೆಜ್ಜೆಗುರುತು’ ಕವನ ಸಂಕಲನ ಬಿಡುಗಡೆ