ಕನ್ನಡಪ್ರಭ ವಾರ್ತೆ ಮೈಸೂರು
ಮಾನಸಗಂಗೋತ್ರಿಯ ಮಾನವಿಕ ಸಭಾಂಗಣದಲ್ಲಿ ಮೈಸೂರು ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ, ಸಾರ್ವಜನಿಕ ಆಡಳಿತ ಅಧ್ಯಯನ ವಿಭಾಗಗಳು ಹಾಗೂ ಭಾರತೀಯ ಸಾರ್ವಜನಿಕ ಆಡಳಿತ ಸಂಸ್ಥೆ (ಐಐಪಿಎ) – ಮೈಸೂರು ಸ್ಥಳೀಯ ಶಾಖೆ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಕರ್ನಾಟಕದ 2ನೇ ಆಡಳಿತ ಸುಧಾರಣಾ ಆಯೋಗದ ಶಿಫಾರಸುಗಳು ಕುರಿತು ಅವರು ಮಾತನಾಡಿದರು.
ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರಾಗಿ ನೇಮಿಸಿದ ಬಳಿಕ ಅನೇಕರು, ವರದಿ ಕೊಟ್ಟರೆ ಯಾರೂ ಓದಲ್ಲ, ಜಾರಿಯಾಗಲ್ಲ ಅಂದಿರುವುದುಂಟು. ಆದರೆ ನಾನು ಕರ್ನಾಟಕದ 2ನೇ ಆಡಳಿತ ಸುಧಾರಣಾ ಆಯೋಗದಿಂದ 2021ರ ಜುಲೈನಿಂದ 2024ರ ಫೆಬ್ರವರಿವರೆಗೆ ಒಟ್ಟು ಏಳು ವರದಿಗಳನ್ನು ಸರ್ಕಾರಕ್ಕೆ ಸಲ್ಲಿಸಲಾಯಿತು. ಇದರಲ್ಲಿ ಒಟ್ಟು 5,039 ಶಿಫಾರಸುಗಳನ್ನು ಮಾಡಲಾಗಿದ್ದು, 2,800 ಜಾರಿಯಾಗಿವೆ. ಉಳಿದವುಗಳನ್ನು ಪರಿಶೀಲಿಸಲಾಗುತ್ತಿದೆ ಎಂದರು.ಕೇಂದ್ರ ಸರ್ಕಾರದಲ್ಲಿಯೂ ಎರಡು ಸುಧಾರಣಾ ಆಯೋಗವಿತ್ತು. ಮೊದಲ ಆಯೋಗಕ್ಕೆ ಮೊರಾರ್ಜಿ ದೇಸಾಯಿ ಅವರು ಅಧ್ಯಕ್ಷರಾಗಿದ್ದರು. ಅವರ ಉಪ ಪ್ರಧಾನಿಯಾಗಿ ಹೋದ ಬಳಿಕ ಕರ್ನಾಟಕದವರೇ ಆದ ಕೆಂಗಲ್ ಹನುಮಂತಯ್ಯ ಅಧ್ಯಕ್ಷರಾದರು. ನಂತರ ಆಯೋಗಕ್ಕೆ ಮತ್ತೋರ್ವ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಅವರನ್ನು ಅಧ್ಯಕ್ಷರನ್ನಾಗಿಸಲಾಗಿತ್ತು ಎಂದರು.
ರಾಮಸ್ವಾಮಿ ಅವರು 2001ರಲ್ಲಿ ವರದಿ ಸಲ್ಲಿಸಿ 729 ಶಿಫಾರಸುಗಳನ್ನು ಮಾಡಿದ್ದರು. ಈ ಪೈಕಿ 389 ಜಾರಿಯಾಗಿವೆ. 386 ಪರಿಶೀಲನೆಯಲ್ಲಿವೆ. 2021ರಲ್ಲಿ 2ನೇ ಆಯೋಗ ರಚನೆಯಾಯಿತು.ಈಗಿನ ತಾಂತ್ರಿಕ ಜಗತ್ತಿನಲ್ಲಿ ಆಡಳಿತ ಯಂತ್ರದ ಬದಲಾವಣೆಗಾಗಿ, ಕೇಂದ್ರದ ಎರಡು ಆಡಳಿತ ಸುಧಾರಣಾ ಆಯೋಗಗಳ ವರದಿ ಸೇರಿದಂತೆ ಹಲವು ವರದಿಗಳನ್ನು ಓದಲಾಯಿತು. ಬಹುತೇಕ ವರದಿಗಳು ಕೇಂದ್ರ ಕಚೇರಿ ಮಟ್ಟದ ಆಡಳಿತದ ಬಗ್ಗೆಯೇ ಗಮನಕೊಟ್ಟಿದ್ದವು. ನಾನು ಜನರ ಸಲುವಾಗಿ ಅನುಕೂಲ ಮಾಡಿಕೊಡುವುದನ್ನು ಗಮನದಲ್ಲಿಟ್ಟುಕೊಂಡು ಅಧ್ಯಯನ ನಡೆಸಿ ಶಿಫಾರಸು ಮಾಡಿದ್ದೇನೆ ಎಂದರು.
ಹಿಂದೂ ವಿವಾಹಗಳಲ್ಲಿ ಶೇ. 3೦ರಷ್ಟು ಮಂದಿ ಮಾತ್ರ ನೋಂದಾಯಿಸಿಕೊಳ್ಳುತ್ತಾರೆ. ನಾನು ಉಪ ನೋಂದಣಾಧಿಕಾರಿ ಕಚೇರಿಗೆ ಹೋದಾಗ ನೂತನ ವಧು- ವರರ ಕುಳಿತಿರುತ್ತಿದ್ದರು. ಏಕೆ ಎಂದರೆ ನೋಂದಾಯಿಸಿಕೊಳ್ಳಬೇಕು, ಬಂದು 2 ಗಂಟೆ ಆಯಿತು ಎನ್ನುತ್ತಿದ್ದರು. ಆದ್ದರಿಂದ ತಾಲೂಕು ಕಚೇರಿಗೆ ಬಂದು ಯಾರು ನೋಂದಣಿ ಕೂಡ ಮಾಡಿಕೊಳ್ಳುತ್ತಿಲ್ಲ. ಹೇಳಬೇಕೆಂದರೆ ನನ್ನದೇ ಆಗಿಲ್ಲ.
ಅಂತೆಯೇ ಕರ್ನಾಟಕದಲ್ಲಿ ಕುಟುಂಬ, ಫ್ರೂಟ್ಸ್ ಮುಂತಾದ ಪೋರ್ಟಲ್ ಗಳ ಮೂಲಕವೇ ಕುಟುಂಬವೊಂದರ ಸುಮಾರು 21 ಮಾಹಿತಿ ಸರ್ಕಾರದಲ್ಲಿಯೇ ಇರುತ್ತದೆ. ಉಳಿದ ಕೆಲವು ದಾಖಲೆಯನ್ನು ರೈತರಿಂದ ಸಂಗ್ರಹಿಸಿದರೆ ಸಾಕು. ಒಂದು ಆಧಾರ್ ನಂಬರ್ ಇದ್ದರೆ ಎಲ್ಲಾ ಮಾಹಿತಿ ಸಿಗುವಂತೆ ಆಗಬೇಕು ಎಂದರು. ಈಗ ಸರ್ಕಾರ ಗ್ಯಾರಂಟಿ ಯೋಜನೆಯನ್ನು 60 ದಿನಗಳಲ್ಲಿ ಕೋಟ್ಯಂತರ ಮಂದಿಯನ್ನು ಮುಟ್ಟಲು ಸಾಧ್ಯವಾಗಿದ್ದು, ಕುಟುಂಬ ಡೇಟಾ ಬೇಸ್ ನಿಂದಲೇ ಎಂದರು.
ರಾಜ್ಯಶಾಸ್ತ್ರ, ಸಾರ್ವಜನಿಕ ಆಡಳಿತ ಅಧ್ಯಯನ ವಿಭಾಗದ ಅಧ್ಯಕ್ಷ ಪ್ರೊ. ಕೃಷ್ಣ ಹೊಂಬಳ್ ಅಧ್ಯಕ್ಷತೆ ವಹಿಸಿದ್ದರು. ಭಾರತೀಯ ಸಾರ್ವಜನಿಕ ಆಡಳಿತ ಸಂಸ್ಥೆ ಮೈಸೂರು ಸ್ಥಳೀಯ ಶಾಖೆ ಅಧ್ಯಕ್ಷ ಬಿ.ಎಸ್. ರವಿಕುಮಾರ್ ಹಾಗೂ ಕಾರ್ಯದರ್ಶಿ ಡಾ.ಜೆ. ಸೋಮಶೇಖರ್ ಇದ್ದರು.