ಹುಬ್ಬಳ್ಳಿ: ಹುಬ್ಬಳ್ಳಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಗಳ ಮಹಾ ಮಂಡಳದ ಆಶ್ರಯದಲ್ಲಿ ಗುರುವಾರ ಇಲ್ಲಿನ ಇಂದಿರಾ ಗಾಜಿನ ಮನೆಯ ಆವರಣದಲ್ಲಿರುವ ಶ್ರೀ ಗಣೇಶ ಮೂರ್ತಿ ವಿಸರ್ಜನಾ ಬಾವಿಗೆ ವಿಶೇಷ ಪೂಜಾ, ಹೋಮ, ಹವನ ಸಮಾರಂಭ ಮೂರುಸಾವಿರ ಮಠದ ಗುರುಸಿದ್ದ ರಾಜಯೋಗೀಂದ್ರ ಶ್ರೀಗಳ ಸಾನ್ನಿಧ್ಯದಲ್ಲಿ ಜರುಗಿತು.
ಜೀವನ ನಡೆಸಲು ಯಾರು ಸಹಾಯ ಕಲ್ಪಿಸುತ್ತಾರೆ ಅವರನ್ನು ನಾವು ಕೃತಜ್ಞತೆಯಿoದ ಕಾಣಬೇಕು. ಹಾಗೆ ದೇವರು ನಮಗೆ ಜೀವನ ನಡೆಸಲು ಗಾಳಿ, ಬೆಳಕು, ನೀರು, ಭೂಮಿ ಹೀಗೆ ಹಲವಾರು ರೀತಿಯಿಂದ ನಾವು ಬದುಕಲು ಕಲ್ಪಿಸಿಕೊಟ್ಟಿದ್ದಾನೆ. ಆದ್ದರಿಂದ ಆ ಭಗವಂತನನ್ನು ಸದಾ ಪೂಜಿಸುವುದು ನಮ್ಮ ಧರ್ಮವಾಗಬೇಕು ಎಂದರು.
ನೀಲಕಂಠಸ್ವಾಮಿ ಹಿರೇಮಠ ಹಾಗೂ ಹರಗುರು ಚರಮೂರ್ತಿಗಳಿಂದ ಪೂಜಾ ಸಮಾರಂಭ ಜರಗಿತು. ಭಕ್ತರು ಭಾವಿಗೆ ವಿಶೇಷ ಪೂಜೆ ಸಲ್ಲಿಸಿ ಗಂಗಾ, ಕಾವೇರಿ, ತುಂಗಾಭದ್ರಾ, ಮಲಪ್ರಭಾ, ನೇತ್ರಾವತಿ ನದಿಗಳಿಂದ ತಂದ ತೀರ್ಥಗಳನ್ನು ಬಾವಿಗೆ ಅರ್ಪಿಸಿ ಗಣೇಶ ವಿಸರ್ಜನೆ ಕಾರ್ಯಕ್ರಮವು ಯಶಸ್ವಿಯಾಗಲಿ ಎಂದು ಪ್ರಾರ್ಥಿಸಿದರು.ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ, ಶಾಂತರಾಜ ಪೋಳ, ಅಲ್ತಾಫ್ ಕಿತ್ತೂರ, ಅಮರೇಶ ಹಿಪ್ಪರಗಿ, ಎಸ್.ಎಸ್. ಕಮಡೊಳ್ಳಿಶೆಟ್ಟರ್, ಅನಿಲ ಕವಿಶೆಟ್ಟಿ, ಸಂತೋಷ ಕಾಟವೆ, ಅನಿಲ ಬೇವಿನಕಟ್ಟಿ, ಗುರುನಾಥ ಪತ್ತಾರ, ಸಚಿನ ಕಂಗಳೆಕರ, ಐ.ಎಛ್. ನಾಯ್ಕರ, ಎಂ.ಎಂ. ಡಂಬಳ, ಸರಸ್ವತಿ ಮೆಹರವಾಡೆ, ಸಂಗೀತಾ ಜಡಿ, ಅಕ್ಕಮ್ಮ ಕಂಬಳಿ ಸೇರಿದಂತೆ ಹಲವರಿದ್ದರು. ನಾಳೆಯಿಂದ ಈದ್ಗಾ ಮೈದಾನದಲ್ಲಿ ಅದ್ಧೂರಿ ಗಣೇಶೋತ್ಸವ
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹುಬ್ಬಳ್ಳಿಯ ಹೃದಯ ಭಾಗದಲ್ಲಿರುವ ಈ ಮೈದಾನದಲ್ಲಿ ಕಳೆದ 2 ವರ್ಷಗಳಿಂದ ಸಾರ್ವಜನಿಕ ಗಣೇಶೋತ್ಸವ ಆಚರಿಸಲಾಗುತ್ತಿದೆ. ಈ ಬಾರಿ ಮೂರನೇ ವರ್ಷದ ಗಣೇಶೋತ್ಸವವನ್ನು ವೈಶಿಷ್ಟ್ಯಪೂರ್ಣವಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದರು.
ಸೆ. 8ರಂದು ಬೆಳಗ್ಗೆ 6ಕ್ಕೆ ಪತಂಜಲಿ ಯೋಗ ಸಮಿತಿ ಸದಸ್ಯರಿಂದ ಯೋಗ ನಮಸ್ಕಾರ, 9ಕ್ಕೆ ಮಹಾಪೂಜೆ, 10.30ಕ್ಕೆ ಗಣಹೋಮ, ನಂತರದಿಂದ ಸಂಜೆ 4.30ರ ವರೆಗೆ ನಿರಂತರ ಭಜನೆ ಹಾಗೂ ರಾತ್ರಿ 7.45ಕ್ಕೆ ಸಂಘದ ಘೋಷ್ ವಾದನ ನಡೆಯುವುದು. ಸೆ. 9ರಂದು ಬೆಳಗ್ಗೆ 9ಕ್ಕೆ ಮಹಾ ಮಂಗಳಾರತಿ ಹಾಗೂ 9.30ಕ್ಕೆ ಸವಾಲ್, 11.45 ಗಂಟೆಗೆ ವಿಸರ್ಜನಾ ಮೆರವಣಿಗೆ ಆರಂಭಿಸಲಾಗುವುದು. ಸಂಜೆ 4.30ಗಂಟೆಯೊಳಗಾಗಿ ಇಂದಿರಾ ಗಾಜಿನ ಮನೆಯ ಹಿಂಭಾಗದಲ್ಲಿರುವ ಬಾವಿಯಲ್ಲಿ ಮೂರ್ತಿ ವಿಸರ್ಜಿಸಲಾಗುವುದು ಎಂದರು.
ಮಹಾಮಂಡಳದಿಂದ ಕಳೆದ 2 ವರ್ಷಗಳಿಂದ ಹಮ್ಮಿಕೊಂಡು ಬರಲಾಗುತ್ತಿರುವ ಗಣೇಶೋತ್ಸವದಲ್ಲಿ ಹಣಕಾಸಿನ ಅವ್ಯವಹಾರ ಆಗಿದೆ ಎಂದು ಕೆಲವರು ಆರೋಪಿಸಿದ್ದಾರೆ. ನಮ್ಮಲ್ಲಿ ಯಾವುದೇ ರೀತಿಯ ಅವ್ಯವಹಾರ, ಅಕ್ರಮ ನಡೆದಿಲ್ಲ. ಯಾರೇ, ಯಾವುದೇ ಸಂದರ್ಭದಲ್ಲಿ ಬಂದು ದಾಖಲೆಗಳನ್ನು ನೋಡಬಹುದಾಗಿದೆ ಎಂದರು.
ಈ ವೇಳೆ ಸ್ವಾಗತ ಸಮಿತಿಯ ಪೋಷಕ ಮಹದೇವ ಕರಮರಿ, ಸದಸ್ಯರಾದ ಲಿಂಗರಾಜ ಪಾಟೀಲ, ಸುಭಾಷಸಿಂಗ್ ಜಮಾದಾರ, ಶೇಷಗಿರಿ ಕುಲಕರ್ಣಿ ಸೇರಿದಂತೆ ಹಲವರಿದ್ದರು.