ಕನ್ನಡಪ್ರಭ ವಾರ್ತೆ ಕೋಲಾರದೇಶದಲ್ಲಿಯೇ ಬುಡ್ಗ ಜಂಗಮ ಸಮುದಾಯದ ಏಕೈಕ ಶಾಸಕ ಕೊತ್ತೂರು ಮಂಜುನಾಥ್ ಅವರಿಗೆ ರಾಜ್ಯ ಸಚಿವ ಸಂಪುಟದಲ್ಲಿ ಮಂತ್ರಿ ಸ್ಥಾನ ನೀಡಬೇಕೆಂದು ಹಾರೈಸಿ ಗುರುವಾರ ನಗರದ ಕೋಲಾರಮ್ಮ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ೧೦೧ ಈಡುಗಾಯಿ ಒಡೆಯುವ ಮೂಲಕ ಕಾಂಗ್ರೆಸ್ ಹೈಕಮಾಂಡ್ ಗೆ ಮನವಿ ಮಾಡಿದರು.
ವೇಮಗಲ್ ಕುರಗಲ್ ಪ್ರಾಧಿಕಾರದ ಸದಸ್ಯ ಚೊಕ್ಕಪುರ ಚೌಡಪ್ಪ ಮಾತನಾಡಿ, ಕೇವಲ ೧೫ ದಿನಗಳಲ್ಲಿ ಪ್ರಚಾರ ಮಾಡಿ ಕೋಲಾರ ಕ್ಷೇತ್ರದಲ್ಲಿ ಶಾಸಕರಾಗಿ ಸಮಾಜದಲ್ಲಿ ಎಲ್ಲಾ ಜಾತಿ, ಜನಾಂಗವನ್ನು ವಿಶ್ವಾಸದಿಂದ ನೋಡುವ ಶಾಸಕರಾಗಿದ್ದಾರೆ. ನಮ್ಮಂತಹ ಸಣ್ಣ ಸಮುದಾಯದವರನ್ನು ಗುರುತಿಸಿ ರಾಜಕೀಯ ಸ್ಥಾನಮಾನ ನೀಡಿದ್ದಾರೆ. ಇಂತಹ ಶಾಸಕ ಕೊತ್ತೂರು ಮಂಜುನಾಥ್ ಅವರಿಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡಿದರೆ ಕಾಂಗ್ರೆಸ್ ಪಕ್ಷಕ್ಕೆ ಮುಂದಿನ ದಿನಗಳಲ್ಲಿ ಅನುಕೂಲವಾಗುತ್ತದೆ ಎಂದರು.ಮಹಿಳಾ ನಾಯಕಿ ಮಂಜುಳಾ ಶ್ರೀನಿವಾಸ್ ಮಾತನಾಡಿ, ಕೋಲಾರ ಕ್ಷೇತ್ರದಲ್ಲಿ ಶಾಲಾ ಕಾಲೇಜುಗಳ ಅಭಿವೃದ್ಧಿಯ ಜೊತೆಗೆ ಶಿಕ್ಷಣ, ಆರೋಗ್ಯಕ್ಕೆ ಒತ್ತು ನೀಡಿದ್ದಾರೆ. ಮಹಿಳೆಯರಿಗೆ ಪೋತ್ಸಾಹ ನೀಡಿ ಪ್ರತಿ ಹಂತದಲ್ಲಿ ಬೆಂಬಲವಾಗಿ ನಿಂತಿದ್ದಾರೆ. ಸಚಿವ ಸಂಪುಟದಲ್ಲಿ ಸ್ಥಾನ ನೀಡಿದರೆ ಕೋಲಾರಮ್ಮ ದೇವಸ್ಥಾನದಲ್ಲಿ ೧೦೦೧ ಮಹಿಳೆಯರಿಗೆ ಬಾಗಿನ ಅರ್ಪಿಸಲಾಗುತ್ತದೆ ಎಂದರು.ಕೆಡಿಪಿ ಸದಸ್ಯ ಯಲವಾರ ರಾಜಕುಮಾರ್, ಮುಖಂಡರಾದ ರಾಜಕಲ್ಲಹಳ್ಳಿ ಶ್ರೀನಿವಾಸ್, ನರಸಾಪುರ ನವೀನ್, ಹಾರೋಹಳ್ಳಿ ರಾಜೇಶ್, ಗಾಜಲದಿನ್ನೆ ರಮೇಶ್, ಮುಭಾಷೀರ್ ಇದ್ದರು.
೨೮ಕೆಎಲ್‌ಆರ್-೫ಶಾಸಕ ಕೊತ್ತೂರು ಮಂಜುನಾಥ್ ಅವರಿಗೆ ರಾಜ್ಯ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ಸಿಗಲೆಂದು ಪ್ರಾರ್ಥಿಸಿ ಗುರುವಾರ ಕೋಲಾರಮ್ಮ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ೧೦೧ ಈಡುಗಾಯಿ ಹೊಡೆಯುತ್ತಿರುವುದು.