ಈ ಭದ್ರತೆ ಕುರಿತು ಮಾಹಿತಿ ನೀಡಿದ ಅವರು, ಡಿವೈಎಸ್ಪಿ-5, ಸಿಪಿಐ- 19, ಪಿಎಸ್ಐ- 95, ಕಾನ್‌ಸ್ಟೇಬಲ್- 643. ಇಂಡಿಯನ್ ರಿಸರ್ವ್ ಪೊಲೀಸ್- 108, ಹೋಂಗಾರ್ಡ್ಸ್- 484 ಜನರನ್ನು ನಿಯೋಜಿಸಲಾಗಿದೆ.
ಕೊಟ್ಟೂರು: ಪ್ರತಿವರ್ಷದಂತೆ ಈ ವರ್ಷ ಶ್ರೀಗುರು ಕೊಟ್ಟೂರೇಶ್ವರ ಸ್ವಾಮಿಯ ರಥೋತ್ಸವವನ್ನು ವಿಶೇಷ ಎಂದು ಪರಿಗಣಿಸಿ ಭಾರಿ ಪ್ರಮಾಣದ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ ಎಂದು ಎಸ್.ಪಿ. ಜಾಹ್ನವಿ ತಿಳಿಸಿದ್ದಾರೆ.ಈ ಭದ್ರತೆ ಕುರಿತು ಮಾಹಿತಿ ನೀಡಿದ ಅವರು, ಡಿವೈಎಸ್ಪಿ-5, ಸಿಪಿಐ- 19, ಪಿಎಸ್ಐ- 95, ಕಾನ್‌ಸ್ಟೇಬಲ್- 643. ಇಂಡಿಯನ್ ರಿಸರ್ವ್ ಪೊಲೀಸ್- 108, ಹೋಂಗಾರ್ಡ್ಸ್- 484 ಜನರನ್ನು ನಿಯೋಜಿಸಲಾಗಿದೆ.
ಎಲ್ಲ ಸಿಬ್ಬಂದಿಯನ್ನು ಮುಖ್ಯ ರಸ್ತೆ ಹಾಗೂ ಟ್ರಾಫಿಕ್ ಇನ್ನು ಅನೇಕ ರಥ ಬೀದಿಗಳಲ್ಲಿ ಹಾಗೂ ಪಟ್ಟಣಕ್ಕೆ ಬರುವ ಎಲ್ಲ ರಸ್ತೆಗಳಲ್ಲಿ ಬಂದೋಬಸ್ತ್ ನಿಯೋಜಿಸಲಾಗಿದೆ. ಪಟ್ಟಣದ 10 ಪ್ರಮುಖ ರಸ್ತೆಗಳಲ್ಲಿ ಸಿಸಿ ಕ್ಯಾಮೆರಾ ಹಾಗೂ ಎಚ್ಚರಿಕೆ ಮೈಕ್ ಪ್ರಕಟಣೆ ನಿರಂತರವಾಗಿ ನಿರ್ವಹಿಸುತ್ತಿದೆ. ಪಟ್ಟಣದ ಜನತೆ ಹಾಗೂ ಬರುವ ಭಕ್ತರು ಸೇರಿದಂತೆ ಎಲ್ಲ ಜನತೆಯು ಸಹ ಮುಂಜಾಗ್ರತಾ ಕ್ರಮವಾಗಿ ಯಾವುದೇ ಕಾರಣಕ್ಕೂ ರಥೋತ್ಸವಕ್ಕೆ ಬರುವಾಗ ಅಧಿಕ ಪ್ರಮಾಣದಷ್ಟು ಬಂಗಾರದ ಆಭರಣಗಳನ್ನು ಧರಿಸದಂತೆ ಹಾಗೂ ಮನೆಯಿಂದ ಹೊರಗಡೆ ಬರುವ ಭಕ್ತರು ಮನೆಯಲ್ಲೇ ಒಬ್ಬರನ್ನು ಇಬ್ಬರನ್ನು ಬಿಟ್ಟು ಹೊರಗಡೆ ಬರತಕ್ಕದ್ದು. ಅನುಮಾನಾಸ್ಪದ ವ್ಯಕ್ತಿಗಳು ಕಂಡಲ್ಲಿ ಕೂಡಲೇ ಕೊಟ್ಟೂರು ಪೊಲೀಸ್ ಠಾಣೆಗೆ ದೂರು ಸಲ್ಲಿಸಿ ಹಾಗೂ ತಿಂಡಿ ತಿನಿಸುಗಳು ತಿನ್ನುವಾಗ ಎಚ್ಚರಿಕೆಯಿಂದ ಸಹ ಇರಬೇಕು.
ಭಕ್ತರು ಸಣ್ಣಪುಟ್ಟ ಮಕ್ಕಳ ಸಹ ಬಗ್ಗೆ ಕಾಳಜಿ ವಹಿಸಬೇಕು. ಸಣ್ಣ ಮಕ್ಕಳ ಜೇಬಲ್ಲಿ ವಿಳಾಸ ಬರೆದು ಜೇಬಲ್ಲಿಡಿ. ಜಾತ್ರೆಯ ಪ್ರಯುಕ್ತ ಬೈಪಾಸ್ ರಸ್ತೆಯಲ್ಲಿ ವಾಹನಗಳು ಸಂಚರಿಸಬೇಕು. ಅಧಿಕಾರಿಗಳು ನಿಗದಿಗೊಳಿಸಿದ ಜಾಗದಲ್ಲಿ ಮಾತ್ರ ವಾಹನ ನಿಲುಗಡೆ ಮಾಡಬೇಕು. ಇಲ್ಲವಾದರೆ ಎಲ್ಲೆಂದರಲ್ಲಿ ಬಿಟ್ಟು ಟ್ರಾಫಿಕ್ ಜಾಮ್ ಮಾಡಿದರೆ ಅವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.